Advertisement

ಕಳೆದ ಜನ್ಮದ ಸಾಲ ಈ ಜನ್ಮದಲ್ಲಿ ತೀರಿಸಲೇಬೇಕು!

03:23 PM Apr 04, 2017 | |

ಋಣ ಅನ್ನುವುದು ನಾವು ಎಷ್ಟೋ ಜನ್ಮಗಳಿಂದ ಹೊತ್ತುಕೊಂಡು ಬಂದಿರುವ ಜವಾಬ್ದಾರಿ. ಈ ಋಣಾನುಬಂಧವನ್ನು ಮನುಷ್ಯಮಾತ್ರರು ಮೀರುವುದಕ್ಕಾಗುವುದಿಲ್ಲ. ಅದು ನಮಗೆ ಒದಗಿಸಿರುವುದರ ನಡುವೆ ಇದ್ದೇ ನಮ್ಮ ನಮ್ಮ ವ್ಯಕ್ತಿತ್ವವನ್ನು ನಾವು ಚೆನ್ನಾಗಿ ನಿರ್ವಹಿಸಿದರೆ ಬದುಕು ಹಸನಾಗುತ್ತದೆ.

Advertisement

ಋಣಾನುಬಂಧ ರೂಪೇಣ 
ಪಶು ಪತ್ನಿ ಸುತಾಲಯ…!
ಇದು ನಮ್ಮ ಪೂರ್ವಜರು ಋಣಾನುಬಂಧದ ಪ್ರಾಮುಖ್ಯವನ್ನು ಒತ್ತಿ ಹೇಳುತ್ತಿದ್ದ ಸಾಲು. ಈ ಜನ್ಮದಲ್ಲಿ ನಮಗೆ ಒದಗುವ ಪಶು ಸಂಬಂಧಗಳು, ಪತ್ನಿ, ಮಕ್ಕಳು, ಮನೆ ಇತ್ಯಾದಿಗಳೆಲ್ಲ ಪೂರ್ವಜನ್ಮದ ನಮ್ಮ ಋಣಾನುಬಂಧವನ್ನು ಆಧರಿಸಿ ಪೂರ್ವ ನಿರ್ಧರಿತವಾದಂಥವು ಎಂಬುದಾಗಿ ಇದನ್ನು ಸರಳ ವಾಗಿ ಹೇಳಬಹುದು. ಋಣ ಅನ್ನುವುದು ನಾವು ಎಷ್ಟೋ ಜನ್ಮಗಳಿಂದ ಹೊತ್ತುಕೊಂಡು ಬಂದಿರುವ ಜವಾಬ್ದಾರಿ. ಒಂದು ಜನ್ಮದಲ್ಲಿ ಪ್ರಾರಂಭವಾದ ಋಣ ತೀರಿಸಲು ಮತ್ತೂಂದು ಜನ್ಮದಲ್ಲಿ ಶ್ರಮ ವಹಿಸಬೇಕು ಎನ್ನುತ್ತಾರೆ ಹಿರಿಯರು. ಋಣ ನಮ್ಮನ್ನು ಬಿಡದೆ ಕೊಂಡಿಯ ಹಾಗೆ ಬಿಗಿದುಕೊಂಡಿರುತ್ತದೆ, ಋಣಾನು ಬಂಧ ಅನ್ನುವ ಪದವೇ ಅದಕ್ಕೂ ನಮಗೂ ಇರುವ ನಂಟನ್ನು ಸೂಚಿಸುತ್ತದೆ. ಏನನ್ನು ತಪ್ಪಿಸಿಕೊಂಡರೂ ಋಣಾನುಬಂಧದಿಂದ ಮಾತ್ರ ತಪ್ಪಿಸಲು ಸಾಧ್ಯವಿಲ್ಲ. ಒಂದೊಂದು ಸಂಬಂಧದ ಜತೆಗೂ ಪೂರ್ವಾರ್ಜಿತವಾದ ಋಣವಿರುತ್ತದೆ. ನಮಗೆ ಎಷ್ಟೋ ಸಲ ನಮ್ಮ ಕಣ್ಣೆದುರು ಕಾಣುತ್ತಿರುವ ಒಂದು ವಾಸ್ತವ ದೃಶ್ಯ ಹಿಂದೆಲ್ಲೋ ಕಂಡಂತೆ ಭಾಸವಾಗುತ್ತದೆ. ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಹಿಂದಿನ ಜನ್ಮದ ಋಣವನ್ನು ತೀರಿಸಲು ಹೋರಾಡುತ್ತಿರುತ್ತವೆ.

ಜನ್ಮಾಂತರದ ಸ್ನೇಹ-ದ್ವೇಷ: ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಒಂದು ವಿಶೇಷ ಅನುಭವವಿರುತ್ತದೆ. ಅದೇನೆಂದರೆ, ಒಂದೂರಿನಲ್ಲಿ ಲಕ್ಷಾಂತರ ಜನ ಇದ್ದರೂ ನಮಗೆ ಯಾರೋ ಒಬ್ಬಿಬ್ಬರು ಮಾತ್ರ ತುಂಬಾ ಇಷ್ಟವಾಗುತ್ತಾರೆ. ಅವರು ಮನಸ್ಸಿಗೆ ಹತ್ತಿರ
ವಾಗುತ್ತಾರೆ. ಎಷ್ಟೋ ಜನ್ಮಗಳಿಂದ ಜತೆಗಿದ್ದವು ಎಂಬಂತಹ ಭಾಂದವ್ಯ ಬೆಳೆಯುತ್ತದೆ. ಅವರು ದೂರ ಹೋಗುತ್ತಾರೆ ಅಂದರೆ ತಡೆಯಧಿಲಾರದ ದುಃಖವಾಗುತ್ತದೆ. ಇಂತಹ ಸಂಬಂಧವನ್ನು ವ್ಯಾಖ್ಯಾನಿಸುವಾಗ “ಜನ್ಮಾಂತರದ ಸಂಬಂಧ’, “ಜನ್ಮಾಂತರದ ಸ್ನೇಹ’ ಎಂಬ ಆಡುಮಾತಿನ ರೂಢಿಯೇ ಇದೆ. ಅದೇ ಕೆಲವೊಮ್ಮೆ ಪಕ್ಕದ ಮನೆಯವರ ಬಗ್ಗೆ ಕನಿಷ್ಠ ಅಕ್ಕರಾಸ್ಥೆಯೂ ನಮಗಿರುವುದಿಲ್ಲ. ಅಂಥವರಿಗೇನಾದರೂ ತೊಂದರೆಯಾದಾಗ ನಾವು ಕನಿಷ್ಠ ಬೇಸರವನ್ನೂ ಪಟ್ಟುಕೊಳ್ಳದೆ ಬಾಯಲ್ಲಿ ಮಾತ್ರ ಅಯ್ಯೋ ಪಾಪ ಎನ್ನುತ್ತೇವೆ.

ಅವಳ ಋಣ ಅಮೆರಿಕದಲ್ಲಿತ್ತು: ಕಳೆದ ವರ್ಷ ನನ್ನ ಗೆಳತಿಯೊಬ್ಬಳು ಅಮೆರಿಕಕ್ಕೆ ಹೋಗಿದ್ದಳು. ಅವಳು ಇಲ್ಲಿಂದ ಹೊರಡುವ ಮೊದಲು ಅವಳಿಗೆ ಇಲ್ಲಿನ ವನೇ ಆದ ಒಬ್ಬ ಹುಡುಗನ ಜತೆ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಮದುವೆಯ ದಿನಾಂಕವೂ ನಿಗದಿಯಾ
ಗಿತ್ತು. ಅವನು ಭಾರತದಲ್ಲಿ, ಅವಳು ದೂರದ ಅಮೆರಿಕ ದಲ್ಲಿ; ಪರಸ್ಪರ ಅವರಿಬ್ಬರೂ ದೂರವಾಣಿ ಮುಖಾಂತರ
ಮಾತನಾಡಿಕೊಳ್ಳುತ್ತಲೂ ಇದ್ದರು. ಆದರೆ, ಅವಳ ಈ ಜನ್ಮದ ಕೆಲವು ದಿನಗಳ ಋಣ ಅಮೆರಿಕದ ನೆಲದಲ್ಲಿತ್ತು. ಅಮೆರಿಕದಲ್ಲಿ ಆರು ತಿಂಗಳ ವಾಸ್ತವ್ಯದ ಅನಂತರ ಭಾರತಕ್ಕೆ ವಾಪಸು ಹೊರಡುವ ಹಿಂದಿನ ದಿನ ತನ್ನ ಗೆಳತಿಯರ ಜತೆಗೆ ಶಾಪಿಂಗ್‌ಗೆ ಹೋಗಿ, ಎಲ್ಲ ಕಡೆಗೆ ಕೊನೆಯ ಭೇಟಿ ಕೊಟ್ಟು ಮನೆಗೆ ಕಾರಿನಲ್ಲಿ ಹಿಂದಿರು ಗುತ್ತಿರುವ ಹೊತ್ತು. ರಾತ್ರಿ ಸಮಯ 11 ಗಂಟೆ ಮೀರಿತ್ತು. ಅತಿಯಾದ ವೇಗದಲ್ಲಿ ಓಡುತ್ತಿದ್ದ ಕಾರು ಮುಂದಿದ್ದ ತಿರುವು ಕಾಣದೆ ನೇರವಾಗಿ ಹೋಗಿ ನೀರಿನ ಹೊಂಡವೊಂದರಲ್ಲಿ ಬಿತ್ತು. ಅಷ್ಟೇ ಅಲ್ಲ, ಕಾರು ಆ ಕೆಸರಿನ ಕೆರೆಯೊಳಗೆ ಕುಸಿದು ಹೂತು ಕಣ್ಮರೆ ಯಾಗಿ ಹೋಯಿತು. ಮರುದಿನ ಭಾರತಕ್ಕೆ ಮರಳ ಬೇಕಿದ್ದ ನನ್ನ ಗೆಳತಿ ಹಿಂದಿರುಗಲಿಲ್ಲವಲ್ಲ ಎಂದು ಅವಳ ಮನೆಯವರು ಅಮೆರಿಕದ ಪೊಲೀಸರಿಗೆ ದೂರು ನೀಡಿದರು, ತನಿಖೆ ಆರಂಭವಾಯಿತು. ಅವಳು ಹಿಂದಿನ ದಿನ ಓಡಾಡಿದ ಸ್ಥಳಗಳಲ್ಲಿ ತಲಾಶು ನಡೆಸಿ ಕೊನೆಗೆ ಆ ಹೊಂಡವನ್ನೂ ಜಾಲಾಡಿದರು. ಅಲ್ಲಿ ಅವಳಿದ್ದ ಕಾರು ಮತ್ತು ಮೃತ ದೇಹಗಳು ಸಿಕ್ಕವು. ನನ್ನ ಗೆಳತಿಯ ಈ ಜನ್ಮದಲ್ಲಿ ಕೊನೆಯುಸಿರೆಳೆಯುವ ಋಣ ಅಮೆರಿಕದಲ್ಲಿತ್ತು. ಇದೇ ರೀತಿ ನನಗೆ ತಿಳಿದಿರುವ ಎಷ್ಟೋ ವ್ಯಕ್ತಿಗಳು ವಿಚಿತ್ರ ಸಾವನ್ನಪ್ಪಿದ್ದಾರೆ. ಋಣ ಯಾರನ್ನೂ ಬಿಡದೆ ಎಲ್ಲೆಲ್ಲಿಗೋ ಸೆಳೆಯುತ್ತದೆ, ಎಲ್ಲಿ ಋಣ ಇದೆಯೋ ಅದೇ ಜಾಗಕ್ಕೆ ಸೇರಿಸುತ್ತದೆ. 

ಋಣಾನುಬಂಧ – ಸಂಬಂಧ: ಅದೇ ರೀತಿ, ನಾವು ತುಂಬಾ ಇಷ್ಟಪಡುತ್ತಿರುವವರು ಅಗಲಿದಾಗ ಪ್ರಾಣ ಹೋದಷ್ಟೇ ನೋವಾಗುತ್ತದೆ. ನನಗೆ ಅವನು/ ಅವಳು ಬೇಕೇ ಬೇಕು ಎಂದು ಎಷ್ಟೇ ಹಠ ಮಾಡಿದರೂ ನಮಗೆ ಅವರು ಸಿಗುವುದಿಲ್ಲ. ಏಕೆಂದರೆ, ನಮಗೆ ಅವರ ಜತೆಗಿನ ಋಣಾನುಬಂಧ ಆ ಮುಂದಕ್ಕೆ ಇರುವುದಿಲ್ಲ. ಎಷ್ಟು ದಿನ, ಎಷ್ಟು ಗಂಟೆ, ಎಷ್ಟು ನಿಮಿಷ ಅಂತ ಎಲ್ಲವೂ ಬಹಳ ಮುಂಚಿತವಾಗಿಯೇ ನಿಗದಿ ಯಾಗಿರುತ್ತದೆ. 

Advertisement

ಯಾವ್ಯಾವತ್ತು ಎಲ್ಲೆಲ್ಲಿ ನಮ್ಮ ಅನ್ನದ, ನೀರಿನ, ನೆಲದ ಋಣ ಇರುತ್ತದೆಯೋ ಅದನ್ನೂ ಊಹಿಸಲು ಆಗುವುದಿಲ್ಲ. ಹಾಗೆಯೇ, ಯಾರ್ಯಾರ ಜತೆ, ಯಾವಾಗ್ಯಾವಾಗ ನಮ್ಮ ಸಂಬಂಧಗಳು ಬೆಸೆದಿರುತ್ತವೆ, ಇನ್ನು ಮುಂದಕ್ಕೆ ಬೆಸೆಯಲಿರುತ್ತದೆ ಅನ್ನುವು
ದನ್ನೂ ನಮ್ಮಿಂದ ಅರ್ಥೈಸಲು ಸಾಧ್ಯವಿಲ್ಲ. ಈಗಲೂ ಎಷ್ಟೋ ಮಂದಿ ತಮಗೆ ಇನಿತೂ ಇಷ್ಟವಾಗದೇ ಇರುವವರ ಜತೆ ಹಗಲು ರಾತ್ರಿ ಕಷ್ಟಪಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ನಮಗೆ ನಮ್ಮ ಜತೆ ಈಗ ಇರುವವರ ಮೇಲೆ ಪ್ರೀತಿಯೇ ಇಲ್ಲದಿದ್ದರೂ ಏನನ್ನೂ ಮಾಡು ವುದಕ್ಕಾಗುವುದಿಲ್ಲ. ಯಾಕೆ ಅಂದರೆ ಅದು ಋಣಾ ನುಬಂಧ.  ಅವರ ಜತೆಗೆ ಇರಬೇಕು ಅನ್ನುವುದು ಋಣದ ಸೂತ್ರದಿಂದ ಬಂಧಿತ ವಿಚಾರ. ಇದು ಋಣಾನುಬಂಧ ಎಂದಷ್ಟೇ ಅಂದುಕೊಂಡು ಸುಮ್ಮನಾಗುವುದು ನಮ್ಮ ಮುಂದಿರುವ ಏಕಮಾತ್ರ ದಾರಿ. ನಮ್ಮ ಕಷ್ಟಗಳನ್ನು ಕೇಳುವ ಆಪೆ¤àಷ್ಟರು ಬೇಕಾದಷ್ಟು ಸಲಹೆ ಕೊಡಬಲ್ಲರು, “ಈ ಪರಿ ಕಷ್ಟವಾದರೂ ಯಾಕೆ ಜತೆಯಾಗಿದ್ದೀರಿ? ಬಿಟ್ಟು ಬಿಡಬಹುದಲ್ಲ!’ ಆದರೆ, ಋಣದಿಂದ ಹರಿಯುವುದು ಸುಲಭವಲ್ಲ. 

ನಮ್ಮ ಏಳಿಗೆಗೆ ನಾವೇ ಗುರು: ಹಾಗಾದರೆ, ಎಲ್ಲವನ್ನೂ ಋಣ ಪ್ರಾರಬ್ಧ ಎಂದು ಅದರ ಪಾಡಿಗೆ ಅದನ್ನು ಬಿಟ್ಟು ಸುಮ್ಮನಿರಬೇಕೇನು? ಮನುಷ್ಯ ಪ್ರಯತ್ನಕ್ಕೆ ಬೆಲೆಯೆಷ್ಟು? ವ್ಯಕ್ತಿತ್ವ ನಿರ್ವಹಣೆ ಬೇಕಿರುವುದೇ ಇಲ್ಲಿ. ನಮ್ಮ ವ್ಯಕ್ತಿತ್ವವನ್ನು ನಮ್ಮ ಏಳಿಗೆಗೆ ಪೂರಕವಾಗುವಂತೆ ನಿರ್ವಹಿಸಿಕೊಳ್ಳುವುದೇ ವ್ಯಕ್ತಿತ್ವ ನಿರ್ವಹಣೆ. ಇದನ್ನು ಕಲಿಯಲು ಮ್ಯಾನೇಜ್‌ಮೆಂಟ್‌ ಗುರುಗಳು ಬರೆದ ದಪ್ಪ ಬೈಂಡಿನ ಪುಸ್ತಕವನ್ನೇ ಓದ ಬೇಕಿಲ್ಲ. ನಮ್ಮ ಬದುಕಿಗೆ ನಾವೇ ಗುರುಗಳು. ಸಂದರ್ಭಕ್ಕೆ ತಕ್ಕಂತೆ, ನಮ್ಮ ಆದ್ಯತೆಗಳಿಗೆ ತಕ್ಕಂತೆ, ಪ್ರತಿಕ್ರಿಯಿಸುವುದನ್ನು ಕಲಿತುಕೊಳ್ಳಬೇಕು. 

ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next