Advertisement
ಮೆಶಿನರಿ ಸಾಲ-ಸಾಮಾನ್ಯವಾಗಿ ಮೆಶಿನರಿಯ ಬೆಲೆಯ ಶೇಕಡಾ 75ರಷ್ಟು ಸಾಲ ದೊರೆಯುತ್ತದೆ. ಉಳಿದ ಶೇಕಡಾ 25ಅನ್ನು ಸಾಲದ ಅರ್ಜಿ ಸಲ್ಲಿಸುವಾಗಲೇ ಅರ್ಜಿದಾರರು ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಬೇಕು.
– ಸಾಲದ ಮೊತ್ತ ಮತ್ತು ಸಾಲಕ್ಕೆ ಅರ್ಜಿ ಸಲ್ಲಿಸಿರುವವರು ಮುಂಚಿತವಾಗಿ ಇರಿಸಿದ ಠೇವಣಿಯನ್ನು ಒಟ್ಟು ಸೇರಿಸಿ, ಇನ್‌ವಾಯ್ಸನಲ್ಲಿ ನಮೂದಿಸಿದ ಹಣಕ್ಕೆ ಸರಿಯಾಗಿ ಡಿ.ಡಿ ಮಾಡಿ ಮೆಶಿನರಿ ವಿತರಿಸುವ ಕಂಪನಿಗೆ ಬ್ಯಾಂಕು ನೇರವಾಗಿ ಕಳಿಸುತ್ತದೆ.
– ಮೆಶಿನರಿಯ ಸಂಪೂರ್ಣ ಬೆಲೆಗೆ ಇನ್ಷೊರೆನ್ಸ್ ಮಾಡಿಸಬೇಕು.
– ಬ್ಯಾಂಕಿಗೆ ಮೆಶಿನರಿಯನ್ನು ಹೈಪೋತಿಕೇಷನ್ ಮಾಡಿ ಕೊಡಬೇಕು ಹಾಗೂ ಬ್ಯಾಂಕಿಗೆ ಹೈಪೋತಿಕೇಷನ್ ಆಗಿದೆ ಎನ್ನುವ ನಾಮಫಲಕವನ್ನು ಮೆಶಿನರಿ ಇಡುವ ಸ್ಥಳದಲ್ಲಿ ಇರಿಸಬೇಕು.
– ಈ ಸಾಲದ ಅವಧಿ 60- 80 ತಿಂಗಳು ಹಾಗೂ ಬಡ್ಡಿ ದರ ಆಯಾಯ ಬ್ಯಾಂಕುಗಳು ನಿರ್ಧರಿಸಿದಂತಿರುತ್ತದೆ.
– ಸಾಲಕ್ಕೆ ಸರಿಯಾದ ಜಾಮೀನು ಕೊಡಬೇಕು
ಮೆಶಿನರಿ ಸಾಲವನ್ನು ಪಡೆಯುವಾಗ ಅನುಸರಿಸಬೇಕಾದ ಎಲ್ಲಾ ವಿಧಾನಗಳನ್ನು ಸಾಮಾನುಗಳ ಮೇಲೆ ಸಾಲ ಪಡೆಯುವಾಗ ಕೂಡಾ ಅನುಸರಿಸಬೇಕು. ಜೊತೆಗೆ ಪ್ರತಿ ತಿಂಗಳೂ ಸಾಮಾನಿನ ಪಟ್ಟಿ (Goods loan statement)ಯನ್ನು ಬ್ಯಾಂಕಿಗೆ ಸಲ್ಲಿಸಬೇಕು. ಸಾಮಾನುಗಳ ಒಟ್ಟು ದರದ ಆಧಾರದ ಮೇಲೆ ಸಾಲದ ಮೌಲ್ಯವನ್ನು ನಿರ್ಧರಿಸಲಾಗುತ್ತದೆ.