Advertisement
ಕೃಷಿ ಸಾಲಕ್ಕಾಗಿ ನಬಾರ್ಡ್‌ನಿಂದ ದೊರೆಯುವ ಮರು ಹಣಕಾಸು ನೆರವನ್ನು ಈಗಿರುವ ಶೇ. 35ರಿಂದ ಶೇ. 50ಕ್ಕೆ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ಸರಕಾರ ತೀರ್ಮಾನಿಸಿದೆ. ರೈತರಲ್ಲಿ ಬೆಳೆ ಸಾಲ ವಿಚಾರವಾಗಿ ಆತಂಕ ಮೂಡದಂತೆ ನೋಡಿಕೊಳ್ಳಲು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸಭೆಯಲ್ಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಸಹಕಾರ ಇಲಾಖೆಯು 2020- 21ನೇ ಸಾಲಿನಲ್ಲಿ 1.31 ಲಕ್ಷ ರೈತರಿಗೆ 1,960 ಕೋ.ರೂ. ಸಾಲ ನೀಡಿದೆ. 24.36 ಲಕ್ಷ ರೈತರಿಗೆ 15,300 ಕೋ.ರೂ. ಸಾಲ ನೀಡುವ ಗುರಿ ಇತ್ತಾದರೂ 25.67 ಲಕ್ಷ ರೈತರಿಗೆ 17,260 ಕೋಟಿ ರೂ. ಸಾಲ ನೀಡಲಾಗಿದೆ. 2021-22ರ ಸಾಲಿನಲ್ಲಿ 30 ಲಕ್ಷ ರೈತರಿಗೆ 20 ಸಾವಿರ ಕೋ.ರೂ. ಸಾಲ ನೀಡುವ ಗುರಿ ಇದ್ದು, ಹೊಸ ದಾಗಿ 3 ಲಕ್ಷ ರೈತರಿಗೆ ಸಾಲ ನೀಡುವ ಉದ್ದೇಶ ವಿದೆ ಎಂದು ಇಲಾಖೆ ತಿಳಿಸಿದೆ. ಬೆಳೆ ಸಾಲ ಮನ್ನಾ ದಡಿ ತಡೆಹಿಡಿದಿದ್ದ ಸುಮಾರು 1 ಲಕ್ಷ ರೈತರ ಸಾಲ ಮನ್ನಾವನ್ನು ಕೂಡ ಚುಕ್ತಾ ಮಾಡಲಾಗಿದೆ.
Related Articles
– ಎಸ್.ಟಿ. ಸೋಮಶೇಖರ್, ಸಹಕಾರ ಸಚಿವ
Advertisement
– ಎಸ್. ಲಕ್ಷ್ಮೀನಾರಾಯಣ