Advertisement

ಸಾಲ ಮನ್ನಾ : 35 ಸಾವಿರ ರೈತರ ಖಾತೆಗೆ 185 ಕೋ. ರೂ. ಜಮೆ

08:10 AM Jun 09, 2020 | Suhan S |

ಸತಾರಾ, ಜೂ. 8 : ರಾಜ್ಯ ಸರಕಾರಿ ಕೃಷಿ ಸಾಲ ಮನ್ನಾ ಯೋಜನೆಗೆ ಸತಾರಾ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ 42,000 ರೈತ ಖಾತೆದಾರರು ಅರ್ಹರಾಗಿದ್ದಾರೆ. ಅವರಿಗೆ 224 ಕೋಟಿ ರೂ.ಗಳ ಸಾಲ ಮನ್ನಾ ದೊರೆತಿದ್ದು, ಅದರಲ್ಲಿ ಸುಮಾರು 35,000 ರೈತರ ಖಾತೆಗಳಲ್ಲಿ 185 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ ಎಂದು ಸಚಿವ ಬಾಳಾ ಸಾಹೇಬ್‌ ಪಾಟೀಲ್‌ ಹೇಳಿದ್ದಾರೆ.

Advertisement

ರಾಜ್ಯದ 11 ಲಕ್ಷ ಖಾತೆದಾರರ ಮೇಲೆ ಯಾವುದೇ ಸಾಲವಿಲ್ಲ ಎಂದು ಊಹಿಸಿ ಹೆಚ್ಚಿನ ಸಾಲಗಳಿಗೆ ಅರ್ಹರು ಎಂದು ಘೋಷಿಸಲಾಗಿದೆ ಎಂದು ಸಹಕಾರ ಸಚಿವರು ತಿಳಿಸಿದ್ದಾರೆ. ಸತಾರಾ ಜಿಲ್ಲಾ ಕೇಂದ್ರ ಬ್ಯಾಂಕ್‌ ಕಾರ್ಯಕಾರಿ ಸಮಿತಿ ಸಭೆ ಸತಾರದಲ್ಲಿ ಆಯೋಜಿಸಲಾಯಿತು. ಸಭೆಯಲ್ಲಿ ಜಿಲ್ಲಾ ಬ್ಯಾಂಕ್‌ ಅಧ್ಯಕ್ಷ ಶಾಸಕ ಶಿವೇಂದ್ರ ರಾಜೇ ಭೋಸ್ಲೆ, ಉಪಾಧ್ಯಕ್ಷ ಸುನಿಲ್‌ ಮಾನೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಸರ್ಕಲೆ, ಜಿಲ್ಲಾ ಪರಿಷತ್‌ ಉಪಾಧ್ಯಕ್ಷ ಪ್ರದೀಪ್‌ ವಿಧತೆ ಉಪಸ್ಥಿತರಿದ್ದರು. ಸಭೆಯ ಅನಂತರ ಪತ್ರಿಕಾಗೋಷ್ಠಿ ನಡೆಸಿದ್ದು, ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜಿಲ್ಲಾ ಬ್ಯಾಂಕ್‌ ಬಡ್ಡಿದರಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಘೋಷಿಸಲಾಯಿತು.

ಈ ವೇಳೆ ಸಚಿವ ಪಾಟೀಲ್‌ ಮತ್ತು ರಾಜೇಂದ್ರ ಸರ್ಕಲೆ ಜಂಟಿಯಾಗಿ ಕೃಷಿ ಸಾಲ ಮನ್ನಾ ಬಗ್ಗೆ ಮಾಹಿತಿ ನೀಡಿದರು. ಕೋವಿಡ್ ಆತಂಕದ ಸಂದರ್ಭದಲ್ಲಿ ಬ್ಯಾಂಕಿನ ವ್ಯವಹಾರ ಶೇ.71 ಕ್ಕಿಂತ ಹೆಚ್ಚಾಗಿದೆ. ಬ್ಯಾಂಕಿನ ಸರಿಯಾದ ಯೋಜನೆ, ಉತ್ತಮ ಆರ್ಥಿಕ ಸ್ಥಿತಿ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಯೋಜನೆಯನ್ನು ಮಾಡಲಾಗಿದೆ. ರಾಜ್ಯ ಸರಕಾರದ ಮಹಾತ್ಮಾ ಫ‌ುಲೆ ಕೃಷಿ ಸಾಲಮನ್ನಾ ಯೋಜನೆ ರಾಜ್ಯದಲ್ಲಿ 15 ಲಕ್ಷ ರೈತರನ್ನು ಅರ್ಹರನ್ನಾಗಿ ಮಾಡಿದೆ ಮತ್ತು ಅವರಿಗೆ 8,000 ಕೋಟಿ ರೂ.ಗಳ ಸಾಲಮನ್ನಾ ಮಾಡಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಸತಾರಾ ಜಿಲ್ಲಾ ಕೇಂದ್ರ ಬ್ಯಾಂಕ್‌ ವತಿಯಿಂದ 17,700 ಕಿಟ್‌ಗಳನ್ನು ವಿತರಿಸಿದೆ. ನಿರ್ದೇಶಕರ ಮಂಡಳಿಯು ಒಂದು ದಿನದ ಭತ್ಯೆಯಿಂದ ಮತ್ತು ಬ್ಯಾಂಕ್‌ ಉದ್ಯೋಗಿಗಳಿಗೆ ಒಂದು ದಿನದ ವೇತನ 16 ಲಕ್ಷ ರೂ. ಹಾಗೂ ಬ್ಯಾಂಕ್‌ ಲಾಭದಿಂದ ಒಂದು ಕೋಟಿ ರೂ. ವನ್ನು ಮುಖ್ಯಮಂತ್ರಿ ಸಹಾಯ ನಿಧಿಗೆ ನೀಡಲಾಗಿದೆ ಎಂದು ಸಚಿವ ಪಾಟೀಲ್‌ ಮತ್ತು ಸರ್ಕಲೆ ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next