ಪಾಂಡವಪುರ: ತಾವು ನೀಡಿರುವ ಸಾಲದ ಹಣಕ್ಕೆ ಬಡ್ಡಿ ನೀಡಲಿಲ್ಲ ಎಂಬ ಕಾರಣಕ್ಕೆ ಕುಟುಂಬವೊಂದರ ಮೇಲೆ ಯುವಕರ ಗುಂಪೊಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಶಾಸಕ ಸಿ.ಎಸ್.ಪುಟ್ಟರಾಜು ನೊಂದ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿ ಶಾಂತಿ ಸಭೆ ನಡೆಸಿದರು.
ಮೂರು ಸಾವಿರ ರೂ. ಸಾಲ: ಪಟ್ಟಣದವಿ.ಸಿ.ಕಾಲೋನಿಯಲ್ಲಿ ಸದ್ದಾಂ ಹುಸೇನ್ ಕುಟುಂಬದವರು ಇದೇ ಬಡಾವಣೆ ಯುವಕ ಪ್ರಜ್ವಲ್ ಎಂಬುವರಿಂದ 3 ಸಾವಿರ ರೂ. ಸಾಲದ ರೂಪದಲ್ಲಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಾಲಕ್ಕೆ ಬಡ್ಡಿ ಕಟ್ಟಲಿಲ್ಲ ಎಂಬ ಕಾರಣಕ್ಕೆ ಹಣ ನೀಡಿದ್ದ ಪ್ರಜ್ವಲ್ ಸೇರಿದಂತೆ ಈತನ ಸ್ನೇತಹಿರ ಗುಂಪು ಸದ್ದಾಂ ಹುಸೇನ್ ಮನೆಗೆ ನುಗ್ಗಿಕುಟುಂಬಸ್ಥರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಂತ್ವನ: ಘಟನೆಗೆ ಸಂಬಂಧಪಟ್ಟಂತೆ ಸಮಾಧಾನ ಹೇಳಲು ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿಪುರಸಭೆ ಸದಸ್ಯ ಆರ್.ಸೋಮಶೇಖರ್ ಹಾಗೂಸ್ಥಳೀಯ ಮುಖಂಡರಾದ ಮಹಮದ್ ಹನೀಫ್,ಸಹಿಫುಲ್ಲಾ ಖಾನ್, ನಜೀರ್ ಅಹಮದ್,ಮಸೀಮಾ, ಮುಜಾದ್, ಬಾಬು ಸೇರಿದಂತೆ ಅನೇಕ ಹಿರಿಯ ಮುಖಂಡರೊಂದಿಗೆ ಘಟನೆ ಬಗ್ಗೆಚರ್ಚಿಸಿ, ಹಲ್ಲೆಗೊಳಗಾದ ಕುಟುಂಬದ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಹಲ್ಲೆಗೊಳಗಾದ ಮಹಿಳೆಗೆ ಸಂಪೂರ್ಣ ಚಿಕಿತ್ಸೆ ಕೊಡಿಸಲಾಗುವುದು. ವಿ.ಸಿ.ಕಾಲೋನಿಬಡಾವಣೆಯಲ್ಲಿ ಎಲ್ಲಾ ಜಾತಿ, ಧರ್ಮದವರುಒಗ್ಗೂಡಿ ಸಮಾನತೆಯಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಆದರೆ ಕೆಲವರಿಂದ ಇಂತಹ ಕೆಟ್ಟಘಟನೆ ನಡೆದಿದೆ. ಈ ಬಗ್ಗೆ ಎರಡೂ ಕಡೆಯಮುಖಂಡರೊಂದಿಗೆ ಶೀಘ್ರದಲ್ಲಿ ಶಾಂತಿ ಸಭೆನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆನಡೆಯದಂತೆ ಜಾಗ್ರತೆ ವಹಿಸಲಾಗುವುದು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಶಾಸಕರ ಮಾತಿಗೆ ಸಮ್ಮತಿಸಿದರು.
ನಂತರ ಬಡಾವಣೆಯ ಗಣಪತಿ ದೇವಸ್ಥಾನದಆವರಣದಲ್ಲಿ ಮತ್ತೂಂದು ಗುಂಪಿನಮುಖಂಡರೊಂದಿಗೆ ಶಾಸಕ ಸಿ.ಎಸ್.ಪುಟ್ಟರಾಜುಘಟನೆ ಬಗ್ಗೆ ಚರ್ಚೆ ನಡೆಸಿ, ಇಂತಹ ಘಟನೆನಡೆಯಬಾರದು ಎಂದು ಸಂಬಂಧಪಟ್ಟವರಿಗೆಸೂಚಿಸಿ, ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆಪಡೆದುಕೊಂಡ ನಂತರ ಶಾಂತಿಸಭೆ ನಡೆಸಿತೀರ್ಮಾನಿಸೋಣ ಎಂದು ಬುದ್ಧಿ ಹೇಳಿ ಎರಡೂಗುಂಪಿನವರೂ ಶಾಂತಿ ಕಾಪಾಡುವಂತೆಸೂಚಿಸಿದರು. ನೊಂದ ಕುಟುಂಬಸ್ಥರ ನಿವಾಸಹಾಗೂ ವಿ.ಸಿ.ಕಾಲೋನಿಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕಲ್ಪಿಸಲಾಗಿದೆ.