Advertisement
ಈ ನ್ಯಾಯ ಮಂಡ ಳಿಯ ಕಾರ್ಯ ವೈಖರಿ ಸಾಮಾನ್ಯನ್ಯಾಯಾಲಯಗಳಿಗಿಂತ ಭಿನ್ನವಾಗಿದ್ದು, ಪ್ರಕರಣಗಳ ವಿಚಾರಣೆ ಬೇಗ ಮುಗಿಯುತ್ತದೆ. ಸಾಲ ಬಾಕಿ 20 ಲಕ್ಷಮತ್ತು ಹೆಚ್ಚು ಇದ್ದರೆ ಮಾತ್ರ ಪ್ರಕರಣಗಳನ್ನು ಇಲ್ಲಿ ದಾಖಲಿಸಿಬಹುದು. ಈ ನ್ಯಾಯ ಮಂಡಳಿಯಲ್ಲಿ ತೀರ್ಪು ನೀಡಲು 180 ದಿನಗಳ ಗರಿಷ್ಠ ಸಮಯಾವಕಾಶ ಇರುತ್ತದೆ. ಸದ್ಯ ದೇಶದಲ್ಲಿ 43 ಬ್ಯಾಂಕ್ ಸಾಲ ವಸೂಲಾತಿ ಮಂಡಳಿಗಳು ಮತ್ತು 5 ಬ್ಯಾಂಕ್ ಸಾಲವಸೂಲಾತಿ ಮೇಲ್ಮನವಿ ಮಂಡಳಿಗಳು ಇವೆ. ಸಾಲ ಮರು ಪಾವತಿಯನ್ನು ಮುಂದೂಡಲು ಯಾವುದಾದರೂ ನೆವ ಹುಡುಕುವ ಸಾಲಗಾರರು, ನಾಯಮಂಡಳಿಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದ್ದರು. ಆಗ ಸಾಲ ವಸೂಲಾತಿ ಪ್ರಕ್ರಿಯೆ ವಿಳಂಬವಾಗಿ, ನ್ಯಾಯಮಂಡಳಿ ಸ್ಥಾಪನೆಯ ಉದ್ದೇಶ ಈಡೇರುತ್ತಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸುಪ್ರೀಮ್ ಕೋರ್ಟ್, ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಯಂತ್ರಿಸಲು ಮುಂದಾಗಿದೆ. ಇತ್ತೀಚಿನ ಒಂದು ಪ್ರಕರಣದಲ್ಲಿ, ಸಾಲಗಾರರು ಅಪೆಲೆಟ್ ಟ್ರಿಬ್ಯೂನಲ್ ಗೆಮೇಲ್ಮನವಿ ಸಲ್ಲಿಸುವ ಮೊದಲು ಬಾಕಿ ಇರುವ ಸಾಲದ ಮೊತ್ತವನ್ನು ಠೇವಣಿ ಇಡಬೇಕು ಮತ್ತು ಈ ಷರತ್ತನ್ನುಕೈಬಿಡಲು ಸಾದ್ಯವಿಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು,ಸಾಲ ಮರುಪಾತಿಸದೇ ಬ್ಯಾಂಕುಗಳನ್ನು ಸತಾಯಿಸುವಮತ್ತು ವೃಥಾ ಕಾಲಹರಣ ಮಾಡುವ ಸಾಲಗಾರರ ಕುಟಿಲತನಕ್ಕೆ ಬ್ರೇಕ್ ಹಾಕಿದೆ.
Related Articles
Advertisement