ಹಾಸನ: ಕಾಫಿ ತೋಟಗಳಲ್ಲಿ ಬೆಳೆದಿರುವ ಮರಗಳನ್ನು ಆಧರಿಸಿ ಬೆಳೆಗಾರರಿಗೆ ಕಾರ್ಬನ್ ಕ್ರೆಡಿಟ್ ಸೌಲಭ್ಯದ ಯೋಜನೆ ಜಾರಿಗೆ ಜಿಲ್ಲಾ ಪ್ಲಾಂಟರ್ ಸಂಘವು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ಲಾಂಟರ್ ಸಂಘದ ಅಧ್ಯಕ್ಷ ಕೆ.ಎನ್ ಸುಬ್ರಹ್ಮಣ್ಯ ಮತ್ತು ಮಣ್ಣು ಪರೀಕ್ಷಾ ಘಟಕದ ಅಧ್ಯಕ್ಷ ಮುರುಳಿಧರ್ ಎಸ್.ಬಕ್ಕರವಳ್ಳಿ ಅವರು, ಕಾಫಿ ತೋಟಗಳಲ್ಲಿ ಬೆಳೆದಿರುವ ಮರಗಳು ಕಾರ್ಬನ್ ಡೈ ಆಕ್ಸೈಡ್ ಹೀರಿಕೊಂಡು ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುತ್ತಿವೆ. ಇದು ಜಾಗತಿಕ ಮಟ್ಟದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಾಯಕವಾಗುತ್ತಿದೆ. ಆ ಹಿನ್ನೆಲೆ ಕಾಫಿಯು ಜಾಗತಿಕ ಮಾರುಕಟ್ಟೆ ಸೌಲಭ್ಯ ಹೊಂದಿ ರುವುದರಿಂದ ಲಂಡನ್ ಮೂಲದ ಕಾರ್ಬನ್ ಸೇ ಎಂಬ ಕಂಪನಿ ಮಧ್ಯಸ್ಥಿಕೆಯಲ್ಲಿ ಕಾಫಿ ಬೆಳೆಗಾರರಿಗೆ ಕಾರ್ಬನ್ ಕ್ರೆಡಿಟ್ ಸೌಲಭ್ಯ ಒದಗಿಸಲು ಪ್ಲಾಂಟರ್ ಸಂಘವು ನೇತೃತ್ವ ವಹಿಸಿದೆ. ಕಾಫಿ ಬೆಳೆಗಾರರು ಡಿ.20ರ ಒಳಗೆ ಭರ್ತಿ ಮಾಡಿ ದ ಅರ್ಜಿಯನ್ನು ಪಹಣಿ ಪ್ರತಿಯೊಂದಿಗೆ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದರು.
ಮರ ಆಧಾರಿಸಿ ಕ್ರೆಡಿಟ್ ಪಾಯಿಂಟ್: ಕಾಫಿ ತೋಟಗಳಲ್ಲಿ ಬೆಳೆದಿರುವ ಮರಗಳನ್ನು ಆಧರಿಸಿ ಕಾರ್ಬನ್ ಸೇ ಕಂಪನಿಯು ಬೆಳೆಗಾರರಿಗೆ ಕಾರ್ಬನ್ ಕ್ರೆಡಿಟ್ ಪಾಯಿಂಟ್‌ನ್ನು ನಿಗದಿಪಡಿಸ ಲಿದೆ. ಪಾಯಿಂಟ್ ಅಧರಸಿ ಬೆಳೆಗಾರರಿಗೆ ಮೊತ್ತ ನಿಗದಿಯಾಗಲಿದೆ. ಒಂದು ಎಕರೆ ಕಾಫಿ ತೋಟಕ್ಕೆ 700 ರೂ.ನಿಂದ 1400 ರೂ. ಸಿಗಲಿದೆ ಎಂದು ವಿವರ ನೀಡಿದರು. ಹೂಡಿಕೆ, ಖರ್ಚು ಇಲ್ಲದೆ ಕಾಫಿ ಬೆಳೆಗಾರರಿಗೆ ಅಲ್ಪ ಪ್ರಮಾಣದ ಆದಾಯವು ಕಾರ್ಬನ್ ಕ್ರೆಡಿಟ್‌ನಿಂದ ಸಿಗಲಿದೆ.
ಕಾಫಿ ಬೆಳೆಗಾರರ ಹಿತ ಕಾಯಲು ಬದ್ಧ: ಮೊದಲ ಹಂತದಲ್ಲಿ 20 ಸಾವಿರ ಎಕರೆ ಕಾಫಿ ತೋಟವನ್ನು ಕಾರ್ಬನ್ ಕ್ರೆಡಿಟ್‌ಗೆ ಒಳಪಡಿಸುವ ಉದ್ದೇಶವಿದೆ. ಗ್ರಾಪಂ ಮಟ್ಟದಲ್ಲಿ ಅರ್ಜಿಗಳ ವಿತರಣೆ ವ್ಯವಸ್ಥೆ ಪ್ಲಾಂಟರ್ ಸಂಘವು ಮಾಡಿದೆ. ಜಿಲ್ಲಾ ಪ್ಲಾಂಟರ್ಸ್ ಸಂಘವು ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರ ಪರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಬೆಳೆಗಾರರಿಗೆ ಕಾರ್ಬನ್ ಕ್ರೆಡಿಟ್ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳ ಹೋರಾಟದ ಪ್ರತಿಫಲವಾಗಿ ಯಶಸ್ಸು ಕಂಡುಕೊಳ್ಳುವ ದಿನಗಳು ಸನ್ನಿಹಿತವಾಗಿವೆ.
ಅರ್ಜಿ ಸಲ್ಲಿಸಿ: ಕಾರ್ಬನ್ ಕ್ರೆಡಿಟ್ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ ಸಂಘವು ಲಂಡನ್ ಮೂಲ ದ ಕಾರ್ಬನ್ ಸೇ ಹೆಸರಿನ ಕಂಪನಿಯೊಂದಿಗೆ ಡಿ.5 ರಂದು ಹಾಸನ ಜಿಲ್ಲಾ ಪ್ಲಾಂಟರ್ ಸಂಘವು ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಯಂದು ಕಾರ್ಬನ್ ಸೇ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ಎಂಒಯುಗೆ ಸಹಿ ಮಾಡಿ ಬೆಳೆಗಾರರಿಗೆ ಕಾರ್ಬನ್ ಕ್ರೆಡಿಟ್ ಒದಗಿಸಿಕೊಡಲು ಕಾರ್ಯ ಪ್ರವೃತ್ತವಾಗಿದೆ. ಬೆಳೆಗಾರರು ಅರ್ಜಿಗಳನ್ನು ಪಡೆದು ಪ್ಲಾಂಟರ್ ಸಂಘಕ್ಕೆ ಸಲ್ಲಿಸಬಹುದು ಎಂದು ಹೇಳಿದರು. ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಖಜಾಂಚಿ ಚಂದ್ರಶೇಖರ್, ಸಕಲೇಶಪುರ ಕಸಬಾ ಹೋಬಳಿ ಕಾರ್ಯ ದರ್ಶಿ ಚಂದ್ರಶೇಖರ್ ಅವರೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
10 ವರ್ಷಗಳ ಅವಧಿಗೆ ಒಪ್ಪಂದ: ಬೆಳೆಗಾ ರರು ತಮ್ಮ ಕಾಫಿ ತೋಟದ ಪಹಣಿಯೊಂದಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡರೆ, ಆನಂತರ ಕಂಪನಿಯು 10 ವರ್ಷಗಳ ಅವಧಿಗೆ ಕರಾರು ಮಾಡಿಕೊಳ್ಳಲಿದೆ. ಇದರಿಂದ ಕಾಫಿ ಬೆಳೆಗಾರರಿಗೆ ಯಾವುದೇ ತೊಂದರೆ ಆಗುವು ದಿಲ್ಲ. ಅನಿವಾರ್ಯವಾದಾಗ ಬೆಳೆಗಾರರು ತಮ್ಮ ತೋಟದಲ್ಲಿನ ಮರಗಳನ್ನು ಕಡಿಯಬಹುದು. ಇಲ್ಲವೇ ಬೇರೆ ಕಂಪನಿಗಳೊಂದಿಗೆ ಕಾರ್ಬನ್ ಕ್ರೆಡಿಟ್ ಒಪ್ಪಂದ ಮಾಡಿಕೊಳ್ಳಬಹುದು. ಪ್ಲಾಂಟ್ಸ್ ಸಂಘದ ಕಾನೂನು ಘಟಕವು ಎಲ್ಲ ಆತಂಕಗಳ ಬಗ್ಗೆ ಪರಿಶೀಲಿಸಿ ಕಾರ್ಬನ್ ಕ್ರೆಡಿಟ್ ಬಗ್ಗೆ ಸಮ್ಮತಿ ನೀಡಿದೆ ಎಂದು ಪ್ಲಾಂಟರ್ ಸಂಘದ ಅಧ್ಯಕ್ಷ ಕೆ. ಎನ್ ಸುಬ್ರಹ್ಮಣ್ಯ ತಿಳಿಸಿದರು.