Advertisement

ರೈಲಲ್ಲಿ ಪ್ರಯಾಣಿಕರಿಗೆ ಕೊಟ್ಟ ಬಿರಿಯಾನಿಯಲ್ಲಿ ಹಲ್ಲಿ

07:25 AM Jul 27, 2017 | Team Udayavani |

ಹೊಸದಿಲ್ಲಿ:ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಆಹಾರವು ಸೇವನೆಗೆ ಯೋಗ್ಯವಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಮಹಾಲೇಖಪಾಲರು ವರದಿ ನೀಡಿದ್ದರು. ಅದಕ್ಕೆ ಪೂರಕವಾಗಿ ಹೌರಾದಿಂದ  ಹೊಸದಿಲ್ಲಿಗೆ ಹೊರಟಿದ್ದ ಪೂರ್ವ ಎಕ್ಸ್‌ಪ್ರೆಸ್‌ನಲ್ಲಿ ಝಾರ್ಖಂಡ್‌ನ‌ ಪ್ರಯಾಣಿಕರಿಗೆ ನೀಡಲಾಗಿದ್ದ ವೆಜ್‌ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಅದನ್ನು ಸೇವಿಸುತ್ತಿದ್ದ ವೇಳೆ ಹಲ್ಲಿ ಇದ್ದದ್ದು ಗೊತ್ತಾಯಿತು. ಜತೆಗೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ಪ್ರಯಾ ಣಿಕರೊಬ್ಬರು ಫೋಟೋ ಸಹಿತ ರೈಲ್ವೇ ಸಚಿವ ಸುರೇಶ್‌ ಪ್ರಭು ಮತ್ತು ಸಚಿವಾಲಯಕ್ಕೆ ಟ್ವೀಟ್‌ ಮಾಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಸಚಿವಾಲಯ ಕೆಟರಿಂಗ್‌ ಗುತ್ತಿಗೆ ಪಡೆದುಕೊಂಡ ಸಂಸ್ಥೆಯ ಪರವಾನಿಗೆ ರದ್ದು ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next