ಹೊಸದಿಲ್ಲಿ: ಐಪಿಎಲ್‌ನಿಂದ ಇಂಗ್ಲೆಂಡ್ ಕ್ರಿಕೆಟಿಗರ ನಿರ್ಗಮನ ಪರ್ವ ಮೊದಲ್ಗೊಂಡಿದೆ. ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ಲಿಯಮ್ ಲಿವಿಂಗ್‌ಸ್ಟೋನ್, ರಾಜಸ್ಥಾನ್ ತಂಡದ ಜಾಸ್ ಬಟ್ಲರ್, ಆರ್‌ಸಿಬಿಯ ವಿಲ್ ಜಾಕ್ಸ್ ಮತ್ತು ರೀಸ್ ಟಾಪ್ಲಿ ತವರಿನ ಹಾದಿ ಹಿಡಿದಿದ್ದಾರೆ.
“ಬೆಂಬಲಕ್ಕಾಗಿ ಪಂಜಾಬ್ ಕಿಂಗ್ಸ್ ಮತ್ತು ಅಭಿಮಾನಿಗಳಿಗೆ ಥ್ಯಾಂಕ್ಸ್. ತಂಡ ಹಾಗೂ ವೈಯಕ್ತಿಕವಾಗಿ ಇದೊಂದು ನಿರಾಶಾ ದಾಯಕ ಋತು. ಆದರೆ ಪಂಜಾಬ್ ಪರ ಆಡಿದ ಪ್ರತಿಯೊಂದು ಕ್ಷಣವನ್ನೂ ನಾನು ಪ್ರೀತಿಸಿದ್ದೇನೆ’ ಎಂಬುದಾಗಿ ಲಿವಿಂಗ್‌ಸ್ಟೋನ್ ಹೇಳಿದ್ದಾರೆ. ಅವರು 7 ಪಂದ್ಯಗಳಿಂದ ಕೇವಲ 111 ರನ್ ಮಾಡಿದ್ದರು.
ಈಗಾಗಲೇ ಕೂಟದಿಂದ ಹೊರಬಿದ್ದಿರುವ ಪಂಜಾಬ್, ತನ್ನ ಕೊನೆಯ 2 ಲೀಗ್ ಪಂದ್ಯಗಳನ್ನು ರಾಜಸ್ಥಾನ್ (ಮೇ 15) ಮತ್ತು ಹೈದರಾಬಾದ್ (ಮೇ 19) ವಿರುದ್ಧ ಆಡಲಿದೆ.
ಮುಂದಿನ ತಿಂಗಳ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಮಂಡಿ ಚಿಕಿತ್ಸೆ ಮಾಡಿಕೊಳ್ಳ ಬೇಕಾದ ಕಾರಣ ಇಂಗ್ಲೆಂಡ್‌ಗೆ ವಾಪ ಸಾಗಿರುವುದಾಗಿ ಲಿವಿಂಗ್‌ಸ್ಟೋನ್ ತಿಳಿಸಿದ್ದಾರೆ. ಆದರೆ ಮೇ 22ರಂದು ಆರಂಭವಾಗಲಿರುವ ಪಾಕಿಸ್ಥಾನ ವಿರುದ್ಧದ ಟಿ20 ಸರಣಿಗಾಗಿ ಹೆಚ್ಚಿನ ಸಮಯ ಪಡೆಯಲು ಇಂಗ್ಲೆಂಡ್ ಕ್ರಿಕೆಟಿಗರು ಈ ನಿರ್ಧಾರಕ್ಕೆ ಬಂದಿರುವುದು ಸ್ಪಷ್ಟ.
ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು, ಐಪಿಎಲ್ ಆಡುತ್ತಿರುವ ಇನ್ನೂ ಸಾಕಷ್ಟು ಇಂಗ್ಲೆಂಡ್ ಕ್ರಿಕೆಟಿಗರಿದ್ದಾರೆ. ಇವರೆಂದರೆ ಮೊಯಿನ್ ಅಲಿ (ಚೆನ್ನೈ), ಸ್ಯಾಮ್ ಕರನ್, ಜಾನಿ ಬೇರ್‌ಸ್ಟೊ (ಪಂಜಾಬ್) ಮತ್ತು¤ ಫಿಲ್ ಸಾಲ್ಟ್ (ಕೆಕೆಆರ್). ಇವರೆಲ್ಲ ಹಂತ ಹಂತವಾಗಿ ಐಪಿಎಲ್ ತೊರೆಯಲಿದ್ದಾರೆ.