ವಿಟ್ಲ: ಪ್ರಕೃತಿ ಮತ್ತು ದೇಶವನ್ನು ಪ್ರೀತಿಸಬೇಕು. ಮನುಷ್ಯ ಮನುಷ್ಯರ ನಡುವಿನ ಅಂತರಕಡಿಮೆಯಾಗಬೇಕು. ಸಾತ್ವಿಕ ಆಹಾರ,ಸಹಬಾಳ್ವೆ, ಸಚ್ಚಿಂ ತನೆ, ಸತ್ಕರ್ಮಗಳಿಂದಬದುಕು ಸಾರ್ಥಕವಾಗುತ್ತದೆಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶುಕ್ರವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಪ್ರಯುಕ್ತ ಶ್ರೀನಂದಿನಿ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸೌಹಾರ್ದ ಮನೋಭಾವ, ಆಚಾರ-ವಿಚಾರ ತ್ರಿಕರಣಪೂರ್ವಕ ಸೇವೆ ಭಗವಂತನಿಗೆ ಸಲ್ಲುತ್ತದೆ ಎಂದ ಅವರು, ಇಂದು ಧನಾತ್ಮಕ ಚಿಂತನೆ ಕಡಿಮೆಯಾಗುತ್ತಿರುವುದು ದುರಂತ. ಪ್ರತಿಯೊಬ್ಬರೂ ಶಾಂತಿ, ಸಮಾಧಾನ, ಸಂತೃಪ್ತಿಯಿಂದ ಜೀವಿಸಿದಾಗಸಮಸ್ಯೆಗಳು ಪರಿಹಾರವಾಗುತ್ತವೆ. ಮಹಾಲಕ್ಷ್ಮೀ ವ್ರತಾಚರಣೆಯಿಂದಪ್ರೀತಿ, ಭಾವನೆ,ಕರ್ಮದಅಂತರಹತ್ತಿರವಾಗುತ್ತದೆ. ಪ್ರತೀ ಮನೆಯಲ್ಲಿ ಲಕ್ಷ್ಮೀ ಪೂಜೆ, ಓಂಕಾರ ಪ್ರಣವದಿಂದಾಗಿ ಸಾತ್ವಿಕ ಪರಿವರ್ತನೆ ಸಾಧ್ಯ ಎಂದರು.
ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ ಅವರು ಮಾತನಾಡಿ, ಮಾಣಿಲ ದಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಬದುಕಿನ ಹೆಚ್ಚಿನ ಕಾಲವನ್ನು ತೊಡ ಗಿಸಿಕೊಳ್ಳುವುದರಿಂದ ಪುಣ್ಯಪ್ರಾಪ್ತಿ ಯಾಗಬಹುದು ಎಂದು ತಿಳಿಸಿದರು. ಮಲ್ಲಿಕಾ ಭಾಸ್ಕರ ಶೆಟ್ಟಿ ಪುಣೆ, ಉದ್ಯಮಿಗಳಾದ ರಾಜೇಶ್ ಪಾಟೀಲ್ ಥಾಣೆ, ಅರವಿಂದ ರೈ ಪುಣೆ, ದೀಪಾ ಅರವಿಂದ ರೈ ಪುಣೆ, ತಿಮ್ಮಪ್ಪ ಗೌಡ ಬಿಡದಿ, ದಯಾನಂದ ಬಂಗೇರ ದಂಪತಿ ಬೆಂಗಳೂರು, ಆನಂದ ಕುಮಾರ್ ಸೋನಿ ಮುಂಬೆ„, ಪ್ರಕಾಶ್ ಕೆ.ಬೆಂಗಳೂರು, ಕೇಶವ ರೆಡ್ಡಿ ಬೆಂಗಳೂರು, ಲೋಕೇಶ್,ಶ್ರೀಧಾಮ ಮಹಿಳಾ ಸೇವಾ ಸಮಿತಿಯ ವನಿತಾ ವಿ.ಶೆಟ್ಟಿ ಸುಣ್ಣಂಬಳ, ಮಚ್ಛೇಂದ್ರ ಸಾಲ್ಯಾನ್, ಶ್ರೀಧಾಮ ಮಿತ್ರವೃಂದದ ಅಧ್ಯಕ್ಷ ಯೋಗೀಶ್ ಬಾಳೆಕಾನ, ವ್ಯವಸ್ಥಾಪಕ ವಿಠಲ ಶೆಟ್ಟಿ ಸುಣ್ಣಂಬಳ, ಭಾಸ್ಕರ ಸಾಲ್ಯಾನ್ ಬೆಂಗಳೂರು, ಉಮೇಶ್ ಬೊಮ್ಮಸಂದ್ರ ಉಪಸ್ಥಿತರಿದ್ದರು.
ಬೆಂಗಳೂರಿನ ನೆಲಮಂಗಲದಲ್ಲಿ ಸ್ಥಾಪಿಸಲಾದ ಶ್ರೀ ಮಹಾಲಕ್ಷ್ಮೀ ಧಾರ್ಮಿಕ ಸೇವಾ ಟ್ರಸ್ಟ್‌ನ 1200 ಚದರಡಿ ಭೂಮಿಯನ್ನು ದಾನಿ ಪ್ರಕಾಶ್ ಕೆ. ಕ್ಷೇತ್ರಕ್ಕೆ ದಾನ ಮಾಡಿದ್ದು, ಅಲ್ಲಿ ನಿರ್ಮಿಸಲುದ್ದೇಶಿಸಿದ ಧ್ಯಾನ ಮಂದಿರ ನೀಲನಕಾಶೆಯನ್ನಸ್ವಾಮೀಜಿ ಬಿಡುಗಡೆಗೊಳಿಸಿದರು. ಮುಂದಿನ ವರ್ಷ ಅಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನಡೆಸುವುದಾಗಿಸ್ವಾಮೀಜಿ ಘೋಷಿಸಿದರು. ಚಿತ್ರ ನಿರ್ದೇಶಕ ಚಂದ್ರಹಾಸ ಆಳ್ವ ಚೆಲ್ಲಡ್ಕ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕರನ್ನು ಸ್ವಾಮೀಜಿ ಗೌರವಿಸಿದರು.
ಒಡಿಯೂರು ಶ್ರೀ ಗುರುದೇವ ಗ್ರಾಮ
ವಿಕಾಸ ಯೋಜನೆ ಪದಾಧಿಕಾರಿಗಳು ಫಲಸಮರ್ಪಿಸಿದರು. ಪುನರುತ್ಥಾನ ಪತ್ರಿಕೆ ಸಂಪಾದಕ ಮಂಜು ವಿಟ್ಲ ಸ್ವಾಗತಿಸಿ, ಟ್ರಸ್ಟಿ ತಾರಾನಾಥಕೊಟ್ಟಾರಿ ಪ್ರಸ್ತಾವನೆಗೈದರು. ಟ್ರಸ್ಟಿದಾಮೋದರ ಬಿ.ಎಂ. ಮಾರ್ನಬೈಲು ಭೂದಾನಪತ್ರ ವಾಚಿಸಿದರು. ಶ್ರೀಧಾಮ ಮಹಿಳಾ ಸೇವಾ ಸಮಿತಿ ಕಾರ್ಯದರ್ಶಿ ಗೀತಾ ಪುರುಷೋತ್ತಮ್ ವಂದಿಸಿದರು. ಕಲಾವಿದ ಎಚ್.ಕೆ.ನಯನಾಡು ನಿರೂಪಿಸಿದರು.