ಕುಷ್ಟಗಿ: ಸಮಾಜಮುಖೀ, ಉತ್ತಮ ಕಾರ್ಯಗಳಿಂದ ಬದುಕು ಸಾರ್ಥಕವಾಗಲಿದ್ದು, ಜೀವನ ಮೌಲ್ಯವೂ ಹೆಚ್ಚಲಿದೆ ಎಂದು ಕುಷ್ಟಗಿ ಮದ್ದಾನೇಶ್ವರ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜೀವನ ಹಾಗೆ ಬಂದು ಹಾಗೆ ಹೋದರೆ ಪ್ರಯೋಜನೆ ಇಲ್ಲ. ಹಿರೇಮನ್ನಾಪುರದ ಭಕ್ತರು, ಬರಗಾಲ ಪರಿಸ್ಥಿತಿಯಲ್ಲೂ ಸಾಮೂಹಿಕ ವಿವಾಹ ಅಷ್ಟೇ ಅಲ್ಲ, ರಥದ ಮನೆ, ಈ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ರಥವನ್ನು ನಿರ್ಮಿಸಿಕೊಟ್ಟಿರುವುದು ಭಕ್ತರ ಭಕ್ತಿಯ ಸಂಕೇತವಾಗಿದೆ ಎಂದರು.
ಈ ಭಾಗದ ಜನ ಬರಗಾಲದ ಪರಿಸ್ಥಿತಿಯಲ್ಲಿ ಗೋವಾ, ಮಂಗಳೂರು, ಬೆಂಗಳೂರಿಗೆ ಹೋಗಿ ದುಡಿದು ಮಕ್ಕಳ ಮದುವೆ, ಮನೆ ನಿರ್ಮಿಸುವ ಕಷ್ಟಕರ ಪರಿಸ್ಥಿತಿ ಇದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಹಿರೇಮನ್ನಾಪುರ ಭಕ್ತರು, ಧಾರ್ಮಿಕ ಕಾರ್ಯಕ್ರಮದಲ್ಲಿ ಮಠಾಧೀಶರ ಸಮ್ಮುಖದಲ್ಲಿ, ಬಡವರ ಕಣ್ಣೀರನ್ನು ಒರೆಸುವ ಸಾಮೂಹಿಕ ವಿವಾಹ ಕಾರ್ಯ ನಡೆಸುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.
ಯಲಬುರ್ಗಾ ಶ್ರೀಧರ ಮುರಡಿಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸಂಕಷ್ಟಗಳು ದೂರವಾಗಲು, ಮಳೆ, ಬೆಳೆ ಸಮೃದ್ಧಿಗೆ, ಸಂಕಲ್ಪ ಸಿದ್ದಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿವೆ. ಭವಿಷ್ಯದ ದಿನಮಾನಗಳಲ್ಲಿ ಕೆಡುಕಿನ ಬಗ್ಗೆ ಆಲೋಚಿಸುವುದು ಹೆಚ್ಚಾಗುತ್ತಿದ್ದು, ಧಾರ್ಮಿಕ ಕಾರ್ಯಕ್ರಮ, ಅಧ್ಯಾತ್ಮ ಚಿಂತನೆಗಳಿಂದ ಕೆಟ್ಟ ಲೋಚನೆಗಳಿಂದ ದೂರ ಇರಬಹುದಾಗಿದೆ. ಸೊಸೆಯನ್ನು ಮಗಳಾಗಿ, ಅತ್ತೆಯನ್ನು ತಾಯಿಯಾಗಿ ಕಾಣುವ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
Advertisement
ಶುಕ್ರವಾರ ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಶ್ರೀ ಕಾಶೀ ವಿಶ್ವನಾಥ ಜಾತ್ರಾ ಮಹೋತ್ಸವ ಹಾಗೂ 53ನೇ ವರ್ಷದ ಶ್ರೀ ಶರಣ ಬಸವೇಶ್ವರರ ಪುರಾಣ ಮಹಾಮಂಗಲೋತ್ಸವ, ಕಳಸಾರೋಹಣ, ಅಡ್ಡಪಲ್ಲಕ್ಕಿ ಮಹೋತ್ಸವ, 20 ಜೋಡಿ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
Related Articles
Advertisement
ಎಂ. ಗುಡದೂರು ಗ್ರಾಮದ ನೀಲಕಂಠಯ್ಯ ತಾತನವರಮ ದೊಡ್ಡಬಸವಾರ್ಯ ತಾತನವರು ಮೊದಲಾದವರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಅಯ್ನಾಚಾರ, ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿದವು. ನಂತರ ಡೊಳ್ಳು ವಾದ್ಯಗಳೊಂದಿಗೆ ಕುಂಭ ಮೇಳೆ ಜರುಗಿತು. ಶ್ರೀ ಕಾಶಿನಾಥ ದೇವಸ್ಥಾನದ ಆವರಣದಲ್ಲಿ 20 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು. ಪೂರಾಣ ಪ್ರವಚನಕಾರ ವೇ.ಮೂ. ಅಮರೇಶ್ವ ಶಾಸ್ತ್ರಿ ಕಂಬಾಳಿಮಠ, ಬಸಯ್ಯ ಹಿರೇಮಠ, ಭಾಷುಸಾಬ್ ಜಿನ್ನದ ಮತ್ತಿತರಿದ್ದರು.