Advertisement

ಜಾನುವಾರು ಪ್ರದರ್ಶನ-ತರಬೇತಿ

08:23 PM Feb 08, 2021 | Team Udayavani |

ಶಿರಸಿ: ರಾಜ್ಯ ಸರಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಜಿಲ್ಲೆಯ ಬಹುಕಾಲ ಬೇಡಿಕೆಯ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಅನುಮೋದನೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.

Advertisement

ರವಿವಾರ ತಾಲೂಕಿನ ಬೆಟ್ಟಕೊಪ್ಪದಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆ, ಆತ್ಮ ಯೋಜನೆ, ಗೋಮಾತಾ ಪಶುಪಾಲನಾ ಸಂಘ, ಕಾನಗೋಡ ಗ್ರೂಪ್‌ ವಿವಿಧೋದ್ದೇಶಗಳ ಸೇವಾ ಸಹಕಾರಿ ಸಂಘ ಯಡಹಳ್ಳಿ, ಹಾಲು ಉತ್ಪಾದಕರ ಸಹಕಾರಿ ಸಂಘ ಯಡಹಳ್ಳಿ, ಗ್ರಾಪಂ ಯಡಹಳ್ಳಿ ಸಹಕಾರದಲ್ಲಿ ಮಿಶ್ರತಳಿ ಜಾನುವಾರು ಪ್ರದರ್ಶನ, ಬರಡು ರಾಸುಗಳ ಚಿಕಿತ್ಸಾ ಶಿಬಿರ, ಆತ್ಮ ಯೋಜನೆಯ ಅಡಿ ರೈತರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ 25 ಸಾವಿರ ಲೀ. ಹಾಲಿನ ಉತ್ಪಾದನೆಯಿಂದ ಇಂದು 45 ಸಾವಿರ ಲೀ. ಹಾಲು ಉತ್ಪಾದನೆ ಆಗುತ್ತಿದೆ. ಇದಕ್ಕೆ ಇನ್ನಷ್ಟು ಉತ್ತೇಜಿಸಲು ಪ್ರತ್ಯೇಕ ಒಕ್ಕೂಟದ ಅಗತ್ಯವಿದೆ. ಜಿಲ್ಲೆಯಲ್ಲಿ ಹಾಲು ಶಿಥಲೀಕರಣ ಘಟಕವಿದೆ. ಅದನ್ನು ಪ್ಯಾಕೆಟ್‌ ಹಾಗೂ ಹೈನಿನ ಇತರ ಉತ್ಪನ್ನ ತಯಾರು ಮಾಡುವ ತನಕದ ಘಟಕ ನಿರ್ಮಾಣವಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಅದರ  ಉದ್ಘಾಟನೆಯೂ ಆಗಲಿದೆ. ಈ ಮಧ್ಯೆ ಸರಕಾರದ ಮುಂದೆಯೂ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಪ್ರಸ್ತಾವನೆಯಿದೆ. ಸಚಿವ ಶಿವರಾಮ ಹೆಬ್ಟಾರ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆಯವರ ಬೆಂಬಲವೂ ಇದೆ. ಬರುವ ಬಜೆಟ್‌ನಲ್ಲಿ ಸೇರ್ಪಡೆ ಆಗುವ ವಿಶ್ವಾಸವಿದ್ದು, ಘೋಷಣೆ ಆದರೆ ಬರಲಿರುವ ಎರಡು ವರ್ಷದಲ್ಲಿ ಪ್ರತ್ಯೇಕವಾಗಿ ಅಸ್ತಿತ್ವವಾಗಲಿದೆ ಎಂದೂ ಹೇಳಿದರು.

ನಿವೃತ್ತ ಉಪ ನಿರ್ದೇಶಕ ಡಿ.ಜೆ. ಭಟ್ಟ ಮಾತನಾಡಿ, ಸಾವಯವದಲ್ಲಿ ಹೈನುಗಾರಿಕೆ ಮಾಡಿದರೆ ಲೀ.  ಹಾಲಿಗೆ 180 ರೂ. ತನಕ ಕೊಟ್ಟು ಕೊಳ್ಳುವವರೂ ಇದ್ದಾರೆ. ಬೆಂಗಳೂರಿನಲ್ಲಿ ಓರ್ವ ಇಂಜಿನಿಯರ್‌ ವೃತ್ತಿ ಬಿಟ್ಟು ಹೈನುಗಾರಿಕೆ ಮಾಡುತ್ತಿದ್ದಾರೆ ಎಂದು ಉದಾಹರಣೆ ಸಹಿತ ಹೇಳಿದರು.

ಪ್ರಗತಿಪರ ರೈತ ಮಹಿಳೆ ವೇದಾ ಹೆಗಡೆ ನೀರ್ನಳ್ಳಿ, ಒಂದೇ ಆಕಳಿರಲಿ, ಎರಡಿರಲಿ, ಪ್ರೀತಿಯಿಂದ ಸಾಕಿದರೆ ಅವು ನಮಗೆ ನಷ್ಟ ಮಾಡುವುದಿಲ್ಲ. ಅವುಗಳ ಮೈ ಹೊಳಪಿನ ಮೇಲೇ ಆಕಳ ಆರೋಗ್ಯ ತಿಳಿಯುತ್ತದೆ ಎಂದರು.

Advertisement

ಪಾಲಿಕ್ಲೀನಿಕ್‌ ಉಪ ನಿರ್ದೇಶಕ  ಡಾ| ಆರ್‌.ಜಿ. ಹೆಗಡೆ, ಪಶು ಸಂಗೋಪನೆ ಮಾಡಬೇಕು. ಇಲಾಖೆಯ  ನೆರವು, ಮಾರ್ಗದರ್ಶನ ಪಡೆದು ಸಾಧನೆ ಮಾಡಲು ಅವಕಾಶವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆತ್ಮ ರೈತ ಸಲಹಾ ಸಮಿತಿ ಅಧ್ಯಕ್ಷ ಜಿ.ಆರ್‌. ಹೆಗಡೆ ಬೆಳ್ಳೇಕೇರಿ, ಪಶು ಆಹಾರ ಕೊರತೆ ಆಗದಂತೆ ಜಾನುವಾರು ಇಲ್ಲದವರು ಹುಲ್ಲು ಬೆಳಸಿ ಆಕಳು ಸಾಕಿದವರಿಗೆ ನೀಡಬೇಕು. ಆಕಳು ಸಾಕಿದವರು ಅವರಿಗೆ ಹೈನು ನೀಡಬೇಕು. ಈ ಮಾದರಿಯಾದರೆ ಪಶು ಆಹಾರದ ಸಮಸ್ಯೆ ನೀಗಬಹುದು ಎಂದರು.

ಇದನ್ನೂ ಓದಿ :10 ಕೋಟಿ ವೆಚ್ಚದಲ್ಲಿ ಎರಡು ಗುರುಕುಲ ನಿರ್ಮಾಣ

ಗ್ರಾಪಂ ಸದಸ್ಯ ರವೀಶ ಹೆಗಡೆ ಮಾಳೇನಳ್ಳಿ, ಗೋಮಾತಾ ಸಂಘದ ಅಧ್ಯಕ್ಷ ಶ್ರೀಕಾಂತ ಹೆಗಡೆ, ಜಾನುವಾರು ಪ್ರದರ್ಶನದ ನಿರ್ಣಾಯಕರಾಗಿ ಡಾ| ರೋಹಿತ್‌ ಹೆಗಡೆ, ಡಾ| ಪ್ರಸನ್ನ ಹೆಗಡೆ, ಆತ್ಮ ಸಮಿತಿಯ ತಾಂತ್ರಿಕ ಸಲಹೆಗಾರ ವಿವೇಕ ಹೆಗಡೆ ಪಾಲ್ಗೊಂಡರು.

ಯಡಹಳ್ಳಿ ಸೊಸೈಟಿ ನಿರ್ದೇಶಕ ರಾಜಶೇಖರ್‌ ಕಮಲಾಕರ ಭಟ್ಟ ಸ್ವಾಗತಿಸಿದರು. ಪಶು ಇಲಾಖೆ  ಸಹಾಯಕ ನಿರ್ದೇಶಕ ಡಾ| ನಾಗರಾಜ್‌ ಎಚ್‌. ಸವಣೂರು ವಂದಿಸಿದರು. ರಾಘವೇಂದ್ರ ಬೆಟ್ಟಕೊಪ್ಪ, ವಿಘ್ನೇಶ್ವರ ಮಾರಿಗೋಳಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next