Advertisement

Elephant: ಕಾಡಾನೆ ಹಾವಳಿ ತಡೆಗೆ ಸಾಕಾನೆ ಗಸ್ತು- ಶಿವಮೊಗ್ಗದಲ್ಲಿ ಯೋಜನೆ ಯಶಸ್ವಿ

12:57 AM Dec 07, 2023 | Team Udayavani |

ಶಿವಮೊಗ್ಗ: ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣ, ಸಾಕಾನೆಗಳ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ “ಸಾಕಾನೆಗಳ ಗಸ್ತು’ ಎಂಬ ವಿನೂತನ ಯೋಜನೆ ಜಾರಿಗೆ ಬಂದಿದೆ. ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿರುವ ಈ ಯೋಜನೆಯ ಸಾಧಕ-ಬಾಧಕವನ್ನು ನೋಡಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಚಿಂತನೆ ಇದೆ.
ಕಾಡಿನ ಸಮಸ್ಯೆಗಳು ಹಾಗೂ ಆನೆಗಳ ಆರೋಗ್ಯದ ದೃಷ್ಟಿಯಿಂದ ಆನೆಗಳ ಗಸ್ತು ಯೋಜನೆಯನ್ನು ಸಕ್ರೆಬೈಲು ಆನೆ ಬಿಡಾರ
ದಲ್ಲಿ ಕೈಗೊಳ್ಳಲಾಗಿದೆ.

Advertisement

ಗಸ್ತು ಎಲ್ಲಿಗೆ, ಹೇಗೆ?
2 ಅಥವಾ 3 ಆನೆಗಳಿರುವ ಒಂದು ಬ್ಯಾಚ್‌ನ ಆನೆಗಳು ಮೊದಲು ಗಸ್ತು ಆರಂಭಿ ಸುತ್ತವೆ. ಹಿರಿಯ ಆನೆಗಳಿದ್ದರೆ ಎರಡು, ಚಿಕ್ಕ ಆನೆಗಳಿದ್ದರೆ ಮೂರು ಆನೆಗಳು ಇರುತ್ತವೆ. ಪ್ರತಿ ಬ್ಯಾಚ್‌ ಜತೆ ಸಿಬಂದಿಯಿದ್ದು, ಪ್ರತಿದಿನ ಕಳ್ಳ ಬೇಟೆ ನಿಯಂತ್ರಣ ಕ್ಯಾಂಪ್‌ಗ್ಳಿಗೆ ಪ್ರಯಾ ಣಿಸುತ್ತವೆ. ಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನೆಲ್ಲಿಸರ, ಹಾಯ್‌ಹೊಳೆ, ಸಂಪಿಗೆಹಳ್ಳ ಕ್ಯಾಂಪ್‌ಗ್ಳಿವೆ. ಈ ಮೂರು ಕ್ಯಾಂಪ್‌ಗ್ಳ ಸುತ್ತು ಹಾಕಿ ಆನೆಗಳು ಒಂದು ರೌಂಡ್‌ ಮುಗಿಸಲು 4ರಿಂದ 5 ದಿನಗಳು ತಗಲುತ್ತದೆ.

ಬಳಿಕ ಮತ್ತೂಂದು ಬ್ಯಾಚ್‌ ಗಸ್ತು ಆರಂಭಿಸುತ್ತದೆ. ಶೆಟ್ಟಿಹಳ್ಳಿ, ಶಿವಮೊಗ್ಗ ತಾಲೂಕಿನ ಗಡಿ ಮೂಲಕ ಆನೆಗಳು ಹಾದು ಹೋಗುವುದರಿಂದ ಆ ಭಾಗದ ಕಾಡಾನೆಗಳು ಗಡಿ ಭಾಗಕ್ಕೆ ಬರುವುದಿಲ್ಲ ಎಂಬುದು ಅರಣ್ಯ ಇಲಾಖೆ ಲೆಕ್ಕಾಚಾರ. ಈ ಹಿಂದೆ ಉಂಬ್ಳೆಬೈಲು ವ್ಯಾಪ್ತಿಯಲ್ಲಿ ಸಕ್ರೆಬೈಲು ಆನೆಗಳನ್ನು ಬಳಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಲಾಗಿತ್ತು. ಅದರಲ್ಲಿ ಕೊಂಚ ಯಶಸ್ಸು ಸಿಕ್ಕಿತ್ತು. ಈಗ ಅದೇ ಮಾದರಿಯ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಧ್ಯಪ್ರದೇಶ ಮಾದರಿ ಯೋಜನೆ

ಸಾಕಾನೆಗಳನ್ನು ಹುಲಿ, ಚಿರತೆ, ಆನೆಗಳ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳ ಲಾಗುತ್ತದೆ. ಈಚೆಗೆ ಕರ್ನಾಟಕದಿಂದ ಮಧ್ಯ ಪ್ರದೇಶಕ್ಕೆ ಹೋದ ಆನೆಗಳನ್ನು ಅಲ್ಲಿ ಹುಲಿ ಸೆರೆ ಕಾರ್ಯಾಚರಣೆ ಹಾಗೂ ಗಸ್ತಿಗೆ ಬಳಸಿ ಕೊಳ್ಳಲಾಗುತ್ತಿದೆ. ಅದೇ ಮಾದರಿಯಲ್ಲಿ ಈ ಯೋಜನೆ ರೂಪಿಸಲಾಗಿದೆ.

Advertisement

ಕಾಡಾನೆ ಬಂದರೆ?
ಕಾಡಾನೆ ಬಂದರೆ ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನೂ ನೀಡಲಾಗಿದೆ. ಮಾವುತರು, ಕಾವಾಡಿಗಳ ಬಳಿ ಆನೆಗಳನ್ನು ಬೆದರಿಸಲು ಪಟಾಕಿಗಳನ್ನು ನೀಡಲಾಗಿದ್ದು, ತುರ್ತು ಸಂದರ್ಭದಲ್ಲಿ ಬಳಸಬಹುದಾಗಿದೆ. ಯಾವುದೇ ಆನೆಗಳು ಏಕಾಏಕಿ ದಾಳಿ ಮಾಡುವುದು ವಿರಳ.

ಒಂದು ಬ್ಯಾಚ್‌ ಈಗಾಗಲೇ ಗಸ್ತು ಮುಗಿಸಿದ್ದು, ಅದರ ಫ‌ಲಿತಾಂಶ ಸಿಗಬೇಕಷ್ಟೆ. ಆನೆಗಳು ನಡೆದಷ್ಟು ಆರೋಗ್ಯವಾಗಿರುತ್ತವೆ. ಅವುಗಳಿಗೆ ಹೊಸ ಆಹಾರವೂ ಸಿಗುತ್ತದೆ. ನಮ್ಮ ಆನೆಗಳು ಗಸ್ತಿನಲ್ಲಿದ್ದರೆ ಆ ಕಡೆ ಕಾಡಾನೆಗಳು ಬರುವುದಿಲ್ಲ. ಮಳೆಗಾಲ ಬಿಟ್ಟು ಉಳಿದ ಎಲ್ಲ ದಿನಗಳಲ್ಲೂ ಗಸ್ತನ್ನು ಮುಂದುವರಿಸುವ ಆಲೋಚನೆ ಇದೆ.
-ಪ್ರಸನ್ನ ಕೃಷ್ಟ ಪಟಗಾರ್‌, ಡಿಎಫ್‌ಒ, ಶಿವಮೊಗ್ಗ

  ಶರತ್‌ ಭದ್ರಾವತಿ

 

Advertisement

Udayavani is now on Telegram. Click here to join our channel and stay updated with the latest news.

Next