Advertisement

ಜಾನುವಾರು –ಪಕ್ಷಿಗಳಿಗೆ ನೀರುಣಿಸಲು ಕರ್ಲ್ ಮರ್ಗಿ ವ್ಯವಸ್ಥೆ

08:49 PM Apr 03, 2019 | sudhir |

ಉಡುಪಿ: ಜಾನುವಾರು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ರಥಬೀದಿ ರಾಘವೇಂದ್ರ ಮಠದ ಮುಂಭಾಗದ ಆಯಕಟ್ಟಿನ ಸ್ಥಳದಲ್ಲಿ ಕರ್ಲ್ ಮರ್ಗಿ ಇಡುವುದರ ಮೂಲಕ ಜೀವ ಸಂಕುಲಗಳಿಗೆ ದಾಹ ತಣಿಸಲು ಸಹಕರಿಸಿದೆ.

Advertisement

150 ವರ್ಷಗಳ ಹಳೆಯದಾಗಿರುವ ಈ ಕರ್ಲ್ ಮರ್ಗಿ ಭಂಡಾರಿಗ¨ªೆ ದಿ| ಎಲ್ಲು ಭಂಡಾರಿ ಅವರಿಗೆ ಸೇರಿದ್ದು ನೂರು ವರ್ಷಗಳ ಹಿಂದೆ ಜಾನುವಾರುಗಳಿಗೆ ನೀರು ಕುಡಿಯಲು ಇಡುತ್ತಿದ್ದರು. ಅವರು ಕಾಲವಾದ ನಂತರ ಈ ಸಂಪ್ರದಾಯ ಸ್ಥಗಿತಗೊಂಡಿತ್ತು. ಭಂಡಾರಿ ಕುಟುಂಬದ ಬಾಲಕೃಷ್ಣ ಭಂಡಾರಿ ಅವರ ಮನೆಯಲ್ಲಿ ರಕ್ಷಿಸಿಡಲಾದ ಕರ್ಲ್ ಮರ್ಗಿಯನ್ನು ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಪ್ರಾಣಿ ಪಕ್ಷಿಗಳಿಗೆ ನೀರುಣಿಸಲು ನೀಡುವಂತೆ ಕೇಳಿಕೊಂಡರು. ಮನೆಯವರು ಸಮಿತಿಯ ಯೋಜನೆಗೆ ಸಮ್ಮತಿಸಿ ಕಲ್ಲು ಮರ್ಗಿ ನೀಡಿದರು.

ಸಮಿತಿಯು ಎ.2 ರಂದು ರಾಘವೇಂದ್ರ ಮಠದ ಗೋಶಾಲೆಯ ಬಸವನಿಗೆ ಕರ್ಲ್ ಮರ್ಗಿಯ ನೀರುಣಿಸುವ ಮೂಲಕ ಜಾನುವಾರು ಪಕ್ಷಿಗಳಿಗೆ ನೀರುಣಿಸಲು ಅನಾವರಣ ಮಾಡಲಾಯಿತು.

ಪುರಾತನ ಕಾಲದ ನೀರಿಡುವ ಸಾಧನ ಇದಾದರಿಂದ ರಥಬೀದಿಯಲ್ಲಿ ಕರ್ಲ್ ಮರ್ಗಿಯು ಯಾತ್ರಿಕರ ಗಮನ ಸೆಳೆಯುತ್ತಿದೆ. ಅನಾವರಣ ಕಾರ್ಯಕ್ರಮದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್‌ ಮೇಸ್ತ ಶಿರೂರು, ಡೇವಿಡ್‌, ನಜೀರ್‌, ಮೋಹನ, ಕಿಶೋರ್‌ ಕುಮಾರ್‌ ಕರ್ನಪಾಡಿ, ಕಾರ್ತೀಕ್‌, ಮೋಹನ್‌ ದೇಶಪಾಂಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next