Advertisement

“ಧನಾತ್ಮಕ ಚಿಂತನೆಗಳಿಂದ ಸಮಾಜಮುಖೀಯಾದಾಗ ಬದುಕು ಸಾರ್ಥಕ’

11:06 AM Oct 15, 2019 | Team Udayavani |

ಬದಿಯಡ್ಕ: ಸಕಾರಾತ್ಮಕ ಕ್ರಿಯೆಗಳಿಂದ ಮಾನವ ಜೀವನ ಸುಖಮಯವಾಗಿ ಸಾಗುತ್ತದೆ. ನುಡಿ-ನಡೆ, ವೃತ್ತಿ- ಪ್ರವೃತ್ತಿಗಳಲ್ಲಿ ಧನಾತ್ಮಕ ಚಿಂತನೆಗಳೊಂದಿಗೆ ಸಮಾಜಮುಖೀಯಾಗಿ ವ್ಯವಹರಿಸಿದಾಗ ಬದುಕಿನ ಸಾರ್ಥಕತೆಯ ಸಾಫಲ್ಯ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಲಾಸೇವೆಯು ಎಲ್ಲಾ ವಿಧಗಳಲ್ಲೂ ಮನೋತƒಪ್ತಿಗೆ ಕಾರಣವಾಗಿ ನೆಮ್ಮದಿ ಒದಗಿಸುತ್ತದೆ ಎಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರು ತಿಳಿಸಿದರು.

Advertisement

ಕೊಲ್ಲಂಗಾನ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಸ್ಥಳೀಯ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘ ಆಯೋಜಿಸಿದ್ದ ಯಕ್ಷ ದಶವೈಭವದ ಸಮಾರೋಪದಲ್ಲಿ ಅವರು ಮಾತನಾಡಿದರು. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಇಂದು ಜಗದಗಲ ಖ್ಯಾತಿ ಪಡೆದಿರುವುದರ ಹಿಂದೆ ತಲತಲಾಂತರಗಳ ಪರಂಪರೆಗಳ ಅಪರಿಮಿತ ಸೇವೆಯ ಕೊಡುಗೆಗಳು ಎಂದಿಗೂ ಅಚ್ಚಳಿಯದ್ದು. ಕಲಾವಿದರ ಪ್ರಬುದ್ದತೆ, ಸಂಘಟಕರ ಚಾಕಚಕ್ಯತೆಯಿಂದ ಯಕ್ಷಗಾನದಂತಹ ಕಲೆಗಳು ಯಶಸ್ಸಿನಿಂದ ಮುನ್ನಡೆಯುತ್ತದೆ. ಆದರೆ ಇಂದಿನ ಬದಲಾದ ಕಾಲಮಾನದಲ್ಲಿ ಇವುಗಳು ಸವಾಲಾಗುತ್ತಿದೆ. ಆದರೆ ಕೊಲ್ಲಂಗಾನದ ವಿಶಿಷ್ಟ ಕಲಾಪ್ರೇಮ, ಸೇವಾ ಮನೋಭಾವ ಉತ್ತಮ ಕಲಾವಿದರ ತಂಡದೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು. ಸನಾತನ ಧರ್ಮ, ಭಾರತೀಯತೆಯ ಸಮƒದ್ದತೆಯನ್ನು ಕಾಪಡುವಲ್ಲಿ ಹಬ್ಬ-ಆಚರಣೆಗಳನ್ನು ಮೂಲ ಪರಿಕಲ್ಪನೆಗೆ ಧಕ್ಕೆಯಾಗದಂತೆ ಮುನ್ನಡೆಸುವಲ್ಲಿ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭ ಹಿರಿಯ ಅಶಕ್ತ ಧಾರ್ಮಿಕ ಕರ್ಮಿ, ಪತ್ರಕರ್ತ ಭಾಸ್ಕರ ಕಲ್ಲಕಟ್ಟ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಳಿಯಾರು ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾ.ಪಂ. ಮಾಜೀ ಸದಸ್ಯ ಮಂಜುನಾಥ ಡಿ.ಮಾನ್ಯ, ಧಾರ್ಮಿಕ, ಸಾಮಾಜಿಕ ಮುಖಂಡ ವೇಣುಗೋಪಾಲ ತತ್ವಮಸಿ ಬೋವಿಕ್ಕಾನ, ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ ಗೌರವಾಧ್ಯಕ್ಷ ಕುಮಾರಸ್ವಾಮಿ ಭಟ್‌ ಪಟ್ಟಾಜೆ ಉಪಸ್ಥಿತರಿದ್ದು ಮಾತನಾಡಿದರು.

ಶರಣ್ಯ, ಮನೋಮಯಿ ಹಾಗೂ ಮನಸ್ವಿನಿ ಪ್ರಾರ್ಥನೆ ಹಾಡಿದರು. ಅನಂತ ಪ್ರಜ್ವಲ್‌ ಉಪಾಧ್ಯಾಯ ಸ್ವಾಗತಿಸಿ, ರವಿಶಂಕರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶರನ್ನವರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮದ ಮೊದಲು ವಿಶೇಷ ರಂಗಪೂಜೆ ನೆರವೇರಿತು. ಬಳಿಕ ನೀರ್ಚಾಲಿನ ವಿN°àಶ್ವರ ಯಕ್ಷಗಾನ ಕಲಾಸಂಘದವರಿಂದ ಚಕ್ರೇಶ್ವರ ಪರೀಕ್ಷಿತ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next