Advertisement

‘ಶುದ್ಧ ಜೀವನ ನಡೆಸಿ ಸಾರ್ಥಕತೆ ಪಡೆಯಿರಿ’

10:03 PM Aug 14, 2019 | mahesh |

ಬೆಳ್ತಂಗಡಿ: ಈ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಮುಂದಿನ ಜನ್ಮದಲ್ಲಿ ನಿರೀಕ್ಷಿಸುವುದಕ್ಕಿಂತ ಈ ಜೀವನವನ್ನೇ ಸ್ವರ್ಗಮಯ ಮಾಡಲು ಪ್ರಯತ್ನಿಸಬೇಕು. ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಮಾತ್ರವಲ್ಲದೆ ವೈಯಕ್ತಿಕ ಸಾಧನೆಗೆ ಪೂರಕವಾಗಿ ಜೀವನ ರೂಪಿಸಬೇಕು. ಸುಖ ವೆಂಬುದನ್ನು ವಸ್ತುವಿನಲ್ಲಿ ಹುಡುಕದೇ, ವ್ಯವಸ್ಥೆಯಲ್ಲಿ ಹುಡುಕಬೇಕು. ವ್ಯಸನವೆಂಬ ಕೆಟ್ಟ ಜೀವನವನ್ನು ಮರೆತು ಶುದ್ಧಜೀವನ ನಡೆಸಿ ಬದುಕಿನಲ್ಲಿ ಸಾರ್ಥಕತೆ ಪಡೆಯ ಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

141ನೇ ವಿಶೇಷ ಮದ್ಯವರ್ಜನ ಶಿಬಿರದ 5ನೇ ದಿನ ದಂದು ರಾಜ್ಯದ 17 ಜಿಲ್ಲೆಗಳಿಂದ ಬಂದಿರುವ 67 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತ ನಾಡಿ, ಬರ್ಮಾ ಬುದ್ಧ ದೇವಾಲಯದಲ್ಲಿ ಬುದ್ಧನ 42 ವಿಭಿನ್ನ ವೈಭವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಬಗ್ಗೆ ಕುತೂಹಲದಿಂದ ವಿಚಾರಿಸಿದಾಗ ಕಂಡು ಬಂದ ಸತ್ಯವೇನೆಂದರೆ, ಬಾಲ್ಯದ ಸಿದ್ಧಾರ್ಥ ಬುದ್ಧನಾಗಿ ಜ್ಞಾನೋದಯ ಪಡೆದ 42 ವರ್ಷಗಳ ದಿವ್ಯ ಜ್ಞಾನದ ಪ್ರತೀಕವಾಗಿತ್ತು. ಈ ವಿಷಯ ತಿಳಿಸುವ ಉದ್ದೇಶ ವೇನೆಂದರೆ, ಹಿಂದಿನ ಜೀವನ ವ್ಯರ್ಥ, ಜ್ಞಾನೋದಯದ ವರ್ಷಗಳು ಶ್ರೇಷ್ಠವೆಂಬಂತೆ ವ್ಯಸನಕ್ಕೆ ಒಳಪಟ್ಟವರ ಹಳೇ ಜೀವನ ವ್ಯರ್ಥ, ನವಜೀವನ ಶ್ರೇಷ್ಠ. ನಮ್ಮ ಕೈಯಲ್ಲೇ ನಮ್ಮ ಬದುಕು, ನಮಗೆ ನಾವೇ ಹೊಣೆಗಾರರು, ನಮಗೆ ನಾವೇ ಎಚ್ಚರಿಸಬೇಕು. ಅಪಾಯ ಬಂದಾಗ ಜಾಣ್ಮೆ ಯಿಂದ ವರ್ತಿಸಬೇಕು. ಕೀಳರಿಮೆ ಉಂಟಾಗದಂತೆ ನೋಡಿಕೊಳ್ಳಬೇಕು. ಸೆಳೆತದಿಂದ ತಪ್ಪಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ, ನಿರ್ದೇಶಕ ವಿವೇಕ್‌ ವಿ.ಪಾೖಸ್‌, ಯೋಜನಾಧಿಕಾರಿ ಪಿ. ಚೆನ್ನಪ್ಪ ಗೌಡ, ಶಿಬಿರಾಧಿಕಾರಿ ದೇವಿಪ್ರಸಾದ್‌, ಆರೋಗ್ಯ ಸಹಾಯಕಿ ಸೌಮ್ಯಾ, ಶಿಬಿರ ಸಹಾಯಕರಾದ ನವೀನ್‌ ಮತ್ತು ದೀಪು ಉಪಸ್ಥಿತರಿದ್ದರು.

ಶಿಬಿರಾರ್ಥಿಗಳ ಪರವಾಗಿ ಮಹಾಂತೇಶ್‌ ಬೆಳಗಾವಿ ಅನಿಸಿಕೆ ವ್ಯಕ್ತಪಡಿಸಿದರು.

ಮುಂದಿನ ವಿಶೇಷ ಶಿಬಿರವು ಆ. 19ರಂದು ನಡೆಯಲಿದೆ ಎಂದು ವೇದಿಕೆ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next