Advertisement

ಸಮಾಜಕ್ಕೆ ಮಾದರಿಯಾಗಿ ಬದುಕೋಣ: ರಾಮಣ್ಣ ದೇವಾಡಿಗ

11:54 AM Nov 27, 2017 | |

ತೋಕೂರು: ಸೇವಾ ಸಂಸ್ಥೆಗಳಲ್ಲಿ ತೊಡಗಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಸೇವೆಯನ್ನು ಕೈಗೊಂಡರೆ ಸಮಾಜವು ನಮ್ಮ ಯಶಸ್ಸಿನಲ್ಲಿ ಭಾಗಿಯಾಗುತ್ತದೆ ಎಂದು ಮುಂಬಯಿಯ ತಿಲಕ್‌ನಗರದ ಪೆಸ್ತಮ್‌ ಸಾಗರ ಕರ್ನಾಟಕ ಸಂಘದ ಅಧ್ಯಕ್ಷ ರಾಮಣ್ಣ ದೇವಾಡಿಗ ತೋಕೂರು ಹೇಳಿದರು.

Advertisement

ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ ಇದರ ತೋಕೂರು ಷಷ್ಠಿ ಮಹೋತ್ಸವದ ಅಂಗವಾಗಿ 21ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಸ್ಪೋರ್ಟ್ಸ್ ಕ್ಲಬ್‌ನ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಅಧ್ಯಕ್ಷತೆವಹಿಸಿ, ಗ್ರಾಮೀಣ ಭಾಗದ ಯುವಜನರಲ್ಲಿ ಸಮಾಜದ ಬಗ್ಗೆ ಸೇವಾ ಸಂಕಲ್ಪದ ದಿಕ್ಕಿನಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಏಳಿಂಜೆ ಕೃಷ್ಣ ಸಾಲ್ಯಾನ್‌ ಅವರನ್ನು ಸಮ್ಮಾನಿಸಲಾಯಿತು.

ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಶಿಬಾ ಅಸಾದಿ, ಸುಶ್ಮಿತಾ ಬೇಕಲ್‌, ರಿತಿಕಾ ಎಚ್‌. ಪೂಜಾರಿ, ನಿಧಿ ವಿ. ಅಂಚನ್‌, ಸೌಂದರ್ಯಾ ಎಸ್‌. ಕೋಟ್ಯಾನ್‌ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೈಶಾಲಿ ದೇವಾಡಿಗ ತೋಕೂರು ಅವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಶಶಿಧರ್‌ ಮತ್ತು ಕಾರ್ತಿಕ್‌ ಕೋಟ್ಯಾನ್‌ ಅವರ ವೈದ್ಯಕೀಯ ಚಿಕಿತ್ಸೆಗೆ ತಲಾ 10 ಸಾವಿರ ರೂ.ಗಳ ಆರ್ಥಿಕ ನೆರವು ವಿತರಿಸಲಾಯಿತು.

ರಾಜ್ಯ ಸರಕಾರದಿಂದ ಗಾಂಧಿ  ಗ್ರಾಮ ಪುರಸ್ಕಾರ ಪಡೆದ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮೋಹನ್‌
ದಾಸ್‌, ಪಂಚಾಯತ್‌ ಸದಸ್ಯರು ಮತ್ತು ಸಿಬಂದಿಗಳನ್ನು ವಿಶೇಷವಾಗಿ ಗೌರವಿಸಲಾಯಿತು.ನಿರ್ಮಲಾ ಅರ್‌. ದೇವಾಡಿಗ, ರೆಹಮತುಲ್ಲ, ಯೋಗೀಶ್‌ ಕೋಟ್ಯಾನ್‌, ಸಂಘದ ಅಧ್ಯಕ್ಷ ರತನ್‌ ಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್‌, ಜಗದೀಶ್‌ ಕೋಟ್ಯಾನ್‌, ಪಿ.ಪಿ.ಅಬ್ದುಲ್‌ ಕರೀಮ್‌, ಸಂತೋಷ್‌ ಕುಮಾರ್‌, ಸಂತೋಷ್‌ ದೇವಾಡಿಗ, ಗಣೇಶ್‌ ಬೆಂಗಳೂರು, ಕಿರಣ್‌ ಬೆಳ್ಚಡ, ವಿಪಿನ್‌ ಶೆಟ್ಟಿ, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಜತೆ ಕಾರ್ಯದರ್ಶಿ ಸಂಪತ್‌ ದೇವಾಡಿಗ ಉಪಸ್ಥಿತರಿದ್ದರು.

ಕೋಶಾಧಿಕಾರಿ ಪ್ರಶಾಂತ್‌ ಕುಮಾರ್‌ ಬೇಕಲ್‌ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ದೀಪಕ್‌ ಸುವರ್ಣ ವಂದಿಸಿದರು. ಸುರೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ನೃತ್ಯ ಕಾರ್ಯಕ್ರಮ ನಡೆದು ಬಳಿಕ ತುಳು ನಾಟಕ ಪ್ರದರ್ಶನಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next