ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಬಾಂಗ್ಲಾ, ಸ್ಟಾರ್ ಸ್ಪೋರ್ಟ್ಸ್ 1 ಮರಾಠಿ, ಏಶ್ಯನೆಟ್ ಪ್ಲಸ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ವಾಹಿನಿಗಳಲ್ಲಿ ವಿಶ್ವಕಪ್ ನೇರ ಪ್ರಸಾರ ಮಾಡಲಿದೆ. ಇದರೊಂದಿಗೆ ಸ್ಟಾರ್‌ನ ಒಟಿಟಿ ಪ್ಲ್ರಾಟ್‌ಫಾರ್ಮ್ ಹಾಟ್‌ಸ್ಟಾರ್‌ನಲ್ಲೂ ವಿಶ್ವಕಪ್ ನೇರ ಪ್ರಸಾರ ಲಭ್ಯವಿರಲಿದೆ.
Advertisement
* ಭಾರತಕ್ಕಿಲ್ಲ ರಾತ್ರಿ ಪಂದ್ಯ!ಇಂಗ್ಲೆಂಡ್ ಮೊದಲಿನಿಂದಲೂ ಹಗಲು ಪಂದ್ಯಗಳಿಗೆ ಆದ್ಯತೆ ನೀಡುತ್ತ ಬಂದಿದೆ. ಈ ಸಲವೂ ಸಂಪ್ರದಾಯವನ್ನು ದೊಡ್ಡ ಮಟ್ಟದಲ್ಲೇ ಪಾಲಿಸಲಿದೆ. ಈ ಸಲದ ಒಟ್ಟು 48 ಪಂದ್ಯಗಳಲ್ಲಿ 7 ಪಂದ್ಯಗಳು ಮಾತ್ರ ಹಗಲು-ರಾತ್ರಿಯಾಗಿ ನಡೆಯಲಿವೆ, ಮತ್ತು ಇವೆಲ್ಲವನ್ನೂ ಶನಿವಾರದಂದೇ ಆಡಲಾಗುತ್ತದೆ. ಇಂದು ನೈಟ್ ಮ್ಯಾಚ್ ಬುಧವಾರ ನಡೆಯಲಿದೆ. ಗಮನಿಸಬೇಕಾದ ಸಂಗತಿಯೆಂದರೆ, ಭಾರತಕ್ಕೆ ಒಂದೂ ಡೇ-ನೈಟ್ ಪಂದ್ಯ ಇಲ್ಲದಿರುವುದು! ಭಾರತೀಯ ಕಾಲಮಾನ ಪ್ರಕಾರ ಡೇ-ನೈಟ್ ಪಂದ್ಯ ಮುಗಿಯುವಾಗ ರಾತ್ರಿ 1.45 ಆಗುತ್ತದೆ. ಈ ಸಮಯದಲ್ಲಿ ನೇರ ಪ್ರಸಾರದಿಂದ ಆರ್ಥಿಕ ಲಾಭ ಇಲ್ಲದಿರುವುದೂ ಇದಕ್ಕೆ ಕಾರಣವಿರಬಹುದು. ಅಂದಹಾಗೆ, ಜು. 14ರ ಲಾರ್ಡ್ಸ್ ಫೈನಲ್ ಕೂಡ ಹಗಲಿನಲ್ಲೇ ನಡೆಯಲಿದೆ.