ಕಾರವಾರ: ಚೆಂಡಿಯಾ ಗ್ರಾಮ ವ್ಯಾಪ್ತಿಯಲ್ಲಿ ಕಾಡು ಹಂದಿ ಕೊಲ್ಲಲು ಇಟ್ಟಿದ್ದ ಸಜೀವ ಬಾಂಬ್ ಪತ್ತೆಯಾಗಿದೆ. ಗ್ರಾಮದ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಸಜೀವ ನಾಡಬಾಂಬ್ ಪತ್ತೆಯಾಗಿದ್ದು ಇದನ್ನು ಮಂಗಳೂರು ಬಾಂಬ್ ನಿಷ್ಕ್ರಿಯ ದಳ ಚೆಂಡಿಯಾಕ್ಕೆ ಆಗಮಿಸಿ, ಸಜೀವ ಬಾಂಬನ್ನು ನಿಷ್ಕ್ರಿಯ ಮಾಡಿದೆ.
ಕಾರವಾರ ಗ್ರಾಮೀಣ ಪೊಲೀಸರು ಈ ಕಾರ್ಯಾಚರಣೆಗೆ ಬಾಂಬ್ ನಿಷ್ಕ್ರಿಯ ದಳದ ಸಹಕಾರ ಕೋರಿದ್ದರು. ಎರಡು ದಿನದ ಹಿಂದೆ ಕಾಡು ಹಂದಿಯನ್ನು ನಾಡ ಬಾಂಬ್ ಇಟ್ಟು ಕೊಂದ ಆರೋಪದ ಅಡಿ ಚೆಂಡಿಯಾ ಅಮದಳ್ಳಿ ನಿವಾಸಿ ಸೀಫ್ರಾನ್ ಥಾಮಸ್ ಫರ್ನಾಂಡೀಸ್ ಎಂಬಾತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ಪ್ರಕರಣ ದಾಖಲಿಸಿದ್ದರು.
ಕಾಂತಾರ ಎಫೆಕ್ಟ್; ಹಂದಿ ಸ್ನೇಹ: ಈ ಘಟನೆ ವಿಚಿತ್ರ ತಿರುವು ಪಡೆದ ಕಾರಣ ಅಚ್ಚರಿಯದಾಗಿದ್ದು, ಕಾಡು ಹಂದಿಯನ್ನು ಚೆಂಡಿಯಾದ ಒಂದು ಕುಟುಂಬ ದೈವ ಸ್ವರೂಪಿಯಾಗಿ ಕಾಣುತ್ತಿತ್ತು ಎನ್ನಲಾಗಿದೆ. ಮನೆಯ ಹೊರ ಭಾಗದಲ್ಲಿ ಇಟ್ಟ ಆಹಾರ ತಿನ್ನಲು ಕಳೆದ 45 ದಿನಗಳಿಂದ ಕಾಡು ಹಂದಿ ಬರುತ್ತಿತ್ತಂತೆ. ಕಾಂತಾರ ಸಿನಿಮಾ ಎಫೆಕ್ಟ್ ಕಾರಣ ಕಾಡುಹಂದಿಯಲ್ಲಿ ಗ್ರಾಮದ ಜನ ದೇವರನ್ನು ಕಂಡಿದ್ದರಂತೆ. ಕಾಡು ಹಂದಿ ಬೆಳೆದ ಗದ್ದೆ ಹೊಲದ ಫೈರು ನಾಶ ಮಾಡುವುದು, ಜನ ಕಾಡು ಹಂದಿ ದಾಳಿಗೆ ತುತ್ತಾಗುವುದು ಸಾಮಾನ್ಯವಾಗಿತ್ತು. ಆದರೆ ಚೆಂಡಿಯಾ ಗ್ರಾಮ ಸಮೀಪ ಕಾಡಿನ ಕಾಡುಹಂದಿ ಗ್ರಾಮದ ಸಹವಾಸ ಬೆಳಸಿತ್ತು. ದಿನವೂ ಜನ ಮನೆಯ ಹೊರಗೆ ಇಟ್ಟ ಆಹಾರ ತಿಂದು, ಹೊಲ ಗದ್ದೆ ಪೈರು ನಾಶ ಮಾಡದೆ ಹೋಗುತ್ತಿತ್ತು. ಈ ಕಾರಣ ಜನ ಕಾಡು ಹಂದಿ ಹಠಾತ್ ಶುಕ್ರವಾರ ಸತ್ತು ಬಿದ್ದಾಗ ಭಾವುಕರಾಗಿ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.
ಇದನ್ನೂ ಓದಿ:ಟಿ20 ಕ್ರಿಕೆಟ್ ಗೆ ರೋಹಿತ್ ವಿದಾಯ ಹೇಳುತ್ತಾರಾ? ಉತ್ತರ ಹೇಳಿದ ಟೀಂ ಇಂಡಿಯಾ ನಾಯಕ
ತಕ್ಷಣ ಕಾರ್ಯಪ್ರವೃತ್ತರಾದ ಆರ್ ಎಫ್ ಒ ರಾಘವೇಂದ್ರ ಕೆಲ ಸುಳಿವಿನ ಮೇರೆಗೆ ಕಾಡು ಹಂದಿ ಬೇಟಿಯಾಡಿದರು ಎನ್ನಲಾದ ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡರು.