ಸೋಮವಾರ ರಾತ್ರಿ ಜಪಾನ್ ಎದುರಿನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ರನ್ನರ್ ಅಪ್ ಕ್ರೊವೇಶಿಯ ಪೆನಾಲ್ಟಿ ಶೂಟೌಟ್ ಮೂಲಕ ಗೆದ್ದು ಮೇಲೇರಿತು. 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು 1-1 ಸಮಬಲದಲ್ಲಿದ್ದುದರಿಂದ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಇಲ್ಲಿ ಕ್ರೊವೇಶಿಯ 3-1 ಮೇಲುಗೈ ಸಾಧಿಸಿತು.
ಇದು ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕ್ರೊವೇಶಿಯದ ಹ್ಯಾಟ್ರಿಕ್ ಶೂಟೌಟ್ ಗೆಲುವು. ಹಿಂದಿನೆರಡೂ ಶೂಟೌಟ್ ಗೆಲುವು 2018ರ ವಿಶ್ವಕಪ್‌ನಲ್ಲಿ ದಾಖಲಾಗಿತ್ತು. ಕ್ರೊವೇಶಿಯ ವಿಶ್ವಕಪ್‌ನಲ್ಲಿ “3 ಪ್ಲಸ್’ ಶೂಟೌಟ್ ಗೆಲುವು ದಾಖಲಿಸಿದ ಕೇವಲ 2ನೇ ತಂಡ. ಜರ್ಮನಿ ನಾಲ್ಕೂ ಶೂಟೌಟ್‌ಗಳಲ್ಲಿ ಗೆದ್ದು ಅಗ್ರಸ್ಥಾನಿಯಾಗಿದೆ.
ಅಂದಿನ ಮೊದಲ ಶೂಟೌಟ್‌ಗೆ ಸಾಕ್ಷಿಯಾದದ್ದು ಡೆನ್ಮಾರ್ಕ್ ಎದುರಿನ ಪ್ರಿ ಕ್ವಾರ್ಟರ್ ಫೈನಲ್. ಹೆಚ್ಚುವರಿ ಸಮಯದಲ್ಲೂ ಪಂದ್ಯ 1-1 ಸಮಬಲದಲ್ಲಿತ್ತು. ಶೂಟೌಟ್‌ನಲ್ಲಿ ಕ್ರೊವೇಶಿಯ 3-2 ಗೆಲುವು ಕಂಡಿತು.
ಮುಂದಿನ ಪಂದ್ಯವೇ ಮತ್ತೊಂದು ಶೂಟೌಟ್‌ಗೆ ಸಾಕ್ಷಿಯಾಯಿತು. ಅದು ಆತಿಥೇಯ ರಷ್ಯಾ ಎದುರಿನ ಕ್ವಾರ್ಟರ್ ಫೈನಲ್ ಮುಖಾಮುಖೀ. ಹೆಚ್ಚುವರಿ ಅವಧಿಯಲ್ಲಿ ಇತ್ತಂಡಗಳು 2-2 ಸಮಬಲದಲ್ಲಿದ್ದವು. ಶೂಟೌಟ್‌ನಲ್ಲಿ ಕ್ರೊವೇಶಿಯ 4-3 ಅಂತರದ ಮೇಲುಗೈ ಸಾಧಿಸಿತು.
Related Articles
ಜಪಾನ್‌ಗೆ ಲಕ್ ಇಲ್ಲ
ಶೂಟೌಟ್ ವಿಷಯದಲ್ಲಿ ಜಪಾನ್ ನತದೃಷ್ಟ ತಂಡ. ಇದು ವಿಶ್ವಕಪ್‌ನಲ್ಲಿ ಜಪಾನ್‌ಗೆ ಎದುರಾದ 2ನೇ ಶೂಟೌಟ್. ಎರಡರಲ್ಲೂ ಅದು ಸೋಲನುಭವಿಸಿತು.
ಜಪಾನ್ ಮೊದಲ ಶೂಟೌಟ್ ಪಂದ್ಯ ಕಂಡದ್ದು 2016ರ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ. ಅಂದಿನ ಎದುರಾಳಿ ಪರಗ್ವೆ. 120 ನಿಮಿಷಗಳ ಆಟದಲ್ಲೂ ಗೋಲು ದಾಖಲಾಗಿರಲಿಲ್ಲ. ಇದನ್ನು ಜಪಾನ್ 3-5 ಅಂತರದಿಂದ ಕಳೆದುಕೊಂಡಿತು.