Advertisement

ಪುಟ್ಟ ಕತೆಗಳು

10:31 PM Jul 06, 2019 | mahesh |

ಪ್ರಶ್ನೆ ಮತ್ತು ಉತ್ತರ !

Advertisement

ನನಗೆ ಆ ಹೂವು ಇಷ್ಟವಾಯಿತು’ ಎಂದ ಶಿಷ್ಯ.
ಗುರುಗಳು ಮರು ಪ್ರಶ್ನೆ ಹಾಕಿದರು. “ಹೂವು ಯಾಕೆ ನಿನಗೆ ಇಷ್ಟವಾಯಿತು?’
“ಹೂವು ತುಂಬ ಸುಂದರವಾಗಿದೆ. ಅದಕ್ಕೆ ಇಷ್ಟವಾಯಿತು’ ಎಂದ ಶಿಷ್ಯ.
ಗುರುಗಳಿಗೆ ಆ ಉತ್ತರದಿಂದ ಸಮಾಧಾನವಾಗಲಿಲ್ಲ. ಮತ್ತೂಬ್ಬ ಶಿಷ್ಯನಲ್ಲಿ ಕೇಳಿದ, “ನಿನಗೆ ಯಾವುದು ಇಷ್ಟ?’
ಆತ ಹೇಳಿದ, “ನನಗೆ ದೇವರು ತುಂಬ ಇಷ್ಟ’
“ಯಾಕೆ ನಿನಗೆ ದೇವರು ಇಷ್ಟ?’
ಅವನ ಉತ್ತರ, “ದೇವರು ಮಹಿಮಾನ್ವಿತ. ಅದಕ್ಕೆ ಇಷ್ಟ’.
ಗುರುಗಳಿಗೆ ಆ ಉತ್ತರದ ಬಗ್ಗೆ ಸಹಮತವಿರಲಿಲ್ಲ. ಮೂರನೆಯವನನ್ನು ಕೇಳಿದರು. ಅವನು ಕೊಂಚ ಮುಜುಗರದಿಂದ ಹೇಳಿದ, “ನನಗೆ ನನ್ನ ಪ್ರೇಯಸಿ ತುಂಬ ಇಷ್ಟ’
ಗುರುಗಳು ಮತ್ತೆ ಪ್ರಶ್ನಿಸಿದರು, “ಯಾಕೆ?’
ಆತ ಇನ್ನಷ್ಟು ಮುಜುಗರಪಟ್ಟುಕೊಂಡು ಹೇಳಿದ, “ಯಾಕೆಂದು ಗೊತ್ತಿಲ್ಲ’
ಗುರುಗಳಿಗೆ ಸಮಾಧಾನವಾದಂತೆ ಕಂಡಿತು. ಅವರು ನಸುನಗುತ್ತ ಹೇಳಿದರು, “ಉತ್ತರ ಹುಡುಕಬೇಡ. ಉತ್ತರ ಹುಡುಕುತ್ತ ಹೋದರೆ ಅದರ ಸ್ವಾರಸ್ಯ ಕೆಡುತ್ತದೆ.’

ಬಣ್ಣದ ಮನೆ !
ರಾಜನ ಆಸ್ಥಾನದಲ್ಲಿ ಇಬ್ಬರು ಕಲಾವಿದರ ನಡುವೆ ಯಾರು ಶ್ರೇಷ್ಠರು ಎಂಬ ಜಿಜ್ಞಾಸೆ ಹುಟ್ಟಿಕೊಂಡಿತು. ಒಬ್ಬ ಗಾಂಧಾರದವನು, ಮತ್ತೂಬ್ಬ ಮಗಧದವನು. “ಬೆಟ್ಟದಾಚೆಗಿನ ಎರಡು ಗಾಜಿನ ಮಹಲುಗಳಿಗೆ ಯಾರು ಅತ್ಯುತ್ತಮವಾಗಿ ಬಣ್ಣ ಬಳಿಯುವರೋ ಅವರು ಶ್ರೇಷ್ಠರು’ ಎಂಬ ಪರೀಕ್ಷೆಯನ್ನು ಅವರ ಮುಂದೆ ಒಡ್ಡಲಾಯಿತು.
ಮಗಧದ ಕಲಾವಿದ ತತ್‌ಕ್ಷಣ ಒಂದು ಬಣ್ಣಗಳ ಡಬ್ಬಿಗಳನ್ನು , ಕುಂಚಗಳನ್ನು , ಬಣ್ಣದ ಬೇಗಡೆ, ಅಲಂಕಾರ ಸಾಮಗ್ರಿಗಳನ್ನು ಹೊತ್ತು ಮಹಲಿನತ್ತ ಸಾಗಿದ. ಗಾಂಧಾರದ ಕಲಾವಿದ ಜೊತೆಗಾರರೊಂದಿಗೆ ಹಾಡು ಹೇಳುತ್ತ, ಹರಟೆ ಕೊಚ್ಚುತ್ತ ನಡುನಡುವೆ ವಿಶ್ರಮಿಸುತ್ತ ಬೆಟ್ಟದ ಮನೆಯತ್ತ ನಡೆದರು.

ಕೆಲದಿನಗಳ ಬಳಿಕ ನೋಡಿದರೆ, ಮಗಧದ ಕಲಾವಿದನ ಮನೆ ವರ್ಣನೆಗೆ ನಿಲುಕದಂತೆ ಬಣ್ಣಗಳಲ್ಲಿ ಸಿಂಗಾರಗೊಂಡಿತ್ತು. ಗೋಡೆ, ಕಿಟಕಿ, ಕಿಟಕಿಯ ಬಾಗಿಲು, ಬಾಗಿಲು ಪಟ್ಟಿ ಎಲ್ಲವೂ ವರ್ಣಮಯ. ರಾಜ “ಭಾಪುರೇ’ ಎಂದ!

ಆದರೆ, ಗಾಂಧಾರದ ಕಲಾವಿದನ ಮನೆಗೆ ಒಂದಿಷ್ಟೂ ಬಣ್ಣ ಬಳಿದಿರಲಿಲ್ಲ. ಗಾಜಿನ ಗೋಡೆಯನ್ನು ಇಂಚು-ಇಂಚು ಶುಭ್ರಗೊಳಿಸಿ ಥಳಥಳ ಹೊಳೆಯುವಂತೆ ಮಾತ್ರ ಮಾಡಲಾಗಿತ್ತು. ಆ ಮನೆಯ ಗೋಡೆಯಲ್ಲಿ ನಿಸರ್ಗದ ಸೂರ್ಯೋದಯ, ಬೆಟ್ಟಸಾಲು ಎಲ್ಲವೂ ಪ್ರತಿಫ‌ಲಿಸುತ್ತಿದ್ದವು.
“”ಅದ್ಭುತವಾಗಿದೆ. ಗಾಂಧಾರದ ಕಲಾವಿದನೇ ಶ್ರೇಷ್ಠ. ಬಣ್ಣ ಬಳಿಯುವುದೊಂದೇ ಕಲೆಯಲ್ಲ. ನಮ್ಮನ್ನು ನಾವು ಪ್ರತಿಫ‌ಲಿಸುವುದೇ ನಿಜವಾದ ಕಲೆ ಎಂಬುದನ್ನು ಈತ ಅರಿತಿದ್ದಾನೆ.” ಎಂದ ರಾಜ.

Advertisement
Advertisement

Udayavani is now on Telegram. Click here to join our channel and stay updated with the latest news.

Next