ಕಾಂಡ ಕೊರಕ ಹುಳುಗಳನ್ನು ತಿಂದು ಹಾಕುವ ಮೂಲಕ ಇದು ಕಾಡಿನ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
Advertisement
ಇದರ ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ಚೌಕಾಕಾರದ ಕಪ್ಪು ಬಣ್ಣದ ಚಿತ್ತಾರ ಇದೆ. ರೆಕ್ಕೆಯ ಮೇಲ್ಭಾಗವು ತಿಳಿ ಪಾಚಿ ಹಸಿರಿನ ಬಣ್ಣ ಇರುತ್ತದೆ. ಇದರಿಂದ ಇದಕ್ಕೆ ಹಸಿರು ಮರಕುಟುಕ ಎಂಬ ಹೆಸರು ಬಂದಿದೆ. ರೆಕ್ಕೆಯ ಅಂಚಲ್ಲಿ ಬಿಳಿ ಮತ್ತು ಕಪು ³ಚಿತ್ತಾರ ಇದೆ. ಹಾರುವಾಗ ಈ ಬಣ್ಣ ಎದ್ದುಕಾಣುತ್ತದೆ. ಕುತ್ತಿಗೆ ಪಕ್ಕದಲಿ, Éಕಪ್ಪು, ಬಿಳಿ ಬಣ್ಣದ ಚಿತ್ತಾರ ಇರುತ್ತದೆ. ಶಿಖೆ ಮತ್ತು ಜುಟ್ಟುಇದೆ. ಕೆಂಪು ಜುಟ್ಟಿನ ಬುಡದಲ್ಲಿ ಕಪ್ಪು ರೇಖೆ ಕಾಣುತ್ತದೆ. ಬಾಲದ ಬುಡದಲ್ಲಿ ಮೇಲ್ಭಾಗದಲ್ಲಿ ತಿಳಿ ಹಳದಿ ಬಣ್ಣ, ಬಾಲದ ಪುಕ್ಕದಲ್ಲಿರುವ ಕಪ್ಪು ಬಿಳಿ ಬಣ್ಣದ ಚೌಕಟಿ ಚಿತ್ತಾರ ಇದರ ಅಂದ ಹೆಚ್ಚಿಸಿದೆ. ಸುಮಾರು 29 ಸೆಂ.ಮೀ ದೊಡ್ಡದಿದ್ದು, ಇದು, ಮೈನಾ ಹಕ್ಕಿಯಷ್ಟು ಗಾತ್ರದ ಪ್ರಾದೇಶಿಕ ಹಕ್ಕಿ. ಚುಂಚು ಬುಡದಲ್ಲಿ ತಿಳಿ ಹಳದಿ, ತುದಿಯಲ್ಲಿ ಅಚ್ಚ ಬೂದು ಮಿಶ್ರಿತ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿಯ ಜುಟ್ಟು ಕಪ್ಪಗಿರುತ್ತದೆ. ಮರಗಳ ಮೇಲೆ ಕುಪ್ಪಳಿಸುತ್ತದೆ. ಇಲ್ಲವೇ ಮರದ ಸುತ್ತಗಿರಕಿ ಹೊಡೆಯುತ್ತಾ , ಕಾಂಡ ಕೊರೆಯುವ ಹುಳುಗಳು ಹೊರ ಬರಲು ಅನವರತ ಮರಕುಟ್ಟುತ್ತಾ, ಹಾರುವಾಗ ಟ್ರೀರ್..ಟ್ರಿರ್ ಎಂದು ಕೂಗುತ್ತಾ ಇರುತ್ತದೆ. ಒಂಟಿಯಾಗಿ ಇಲ್ಲವೇ ನಾಲ್ಕಾರರ ಗುಂಪಿನಲ್ಲಿ ವಿಫುಲವಾದ ದೊಡ್ಡ ಮರಗಳಿರುವ ಕಾಡಿನಲ್ಲಿ, ತೋಟದ ಸರಹದ್ದಿನಲ್ಲಿ ಕಾಣಸಿಗುತ್ತದೆ. ಮರಕುಟ್ಟುವ ಸಪ್ಪಳ ಇಲ್ಲವೇ ಇದು ಹುಳ ಹಿಡಿದಾಗ ಕೂಗುವ ದನಿಯಿಂದ ಇದರ ಇರುವನ್ನು ಸುಲಭವಾಗಿ ತಿಳಿಯಬಹುದು.
ಮಧ್ಯಮ ವರ್ಗದ ಕಾಡು, ಅಡಿಕೆ, ತೆಂಗು, ಕಾಫಿ ತೋಟಗಳ ಹತ್ತಿರದ ಕಿರುಕಾಡು ಇವುಗಳಿಗೆ ಪ್ರಿಯ. ಇಲ್ಲಿ ಹಸಿರು ಮರ ಕುಟಕಕ್ಕೆ ವಿಫುಲವಾದ ಆಹಾರ, ಸುರಕ್ಷಿತ ನೆಲೆಗಳು ಸಿಗುತ್ತವೆ. ವಂಶಾಭಿವೃದ್ಧಿಗೆ, ಗೂಡು ಮಾಡಲು ಒಳ್ಳೆಯ ಮರದಕಾಂಡ ಹುಡುಕುತ್ತದೆ. ಜುಲೈ ನಿಂದ ಜನವರಿ ತಿಂಗಳ ಅವಧಿಯಲ್ಲಿ ಮರಿ ಹಾಕುತ್ತವೆ.
Related Articles
Advertisement