Advertisement

ರಾಜಕೀಯ ಅಖಾಡ: ನಟ ರಜನಿಕಾಂತ್ ಪಕ್ಷದ ಹೆಸರು, ಚಿಹ್ನೆಯ ವಿವರ ಬಹಿರಂಗ!

06:26 PM Dec 15, 2020 | Nagendra Trasi |

ನವದೆಹಲಿ:ಇತ್ತೀಚೆಗಷ್ಟೇ ನೋಂದಾಯಿಸಿರುವ ನೂತನ ಪಕ್ಷದ ಮೂಲಕ ನಟ ರಜನಿಕಾಂತ್ ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ತಿಳಿಸಿರುವ ವರದಿ, ಪಕ್ಷದ ಹೆಸರು, ಚಿಹ್ನೆ ಬಹಿರಂಗವಾಗಿರುವುದಾಗಿ ತಿಳಿಸಿದೆ.

Advertisement

ರಜನಿಕಾಂತ್ ಅವರ ನೂತನ ಪಕ್ಷದ ಹೆಸರು ದಾಖಲೆಗಳಲ್ಲಿ ಉಲ್ಲೇಖಿಸಿದಂತೆ “ಮಕ್ಕಳ್ ಸೆವಾಯ್ ಕಚ್ಚಿ”(ಜನ ಸೇವೆ ಪಕ್ಷ) ಎಂದಿದ್ದು, ಆಟೋ ರಿಕ್ಷಾ ಪಕ್ಷದ ಚಿಹ್ನೆಯಾಗಿದೆ. ಊಹಾಪೋಹದಂತೆ ಪಕ್ಷ ರಜನಿಕಾಂತ್ ಅವರ ಸೂಚನೆಯಂತೆ ಎರಡು ಚಿಹ್ನೆಗೆ ಮನವಿ ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.

ಚಿಹ್ನೆಯ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಮೊದಲ ಆದ್ಯತೆ ಎರಡು ಬೆರಳಿನ ಚಿಹ್ನೆ(ಬಾಬಾ ಸಿನಿಮಾದಲ್ಲಿ ರಜನಿಕಾಂತ್ ಉಪಯೋಗಿಸಿದ ರೀತಿ) ಮತ್ತು ಎರಡನೇ ಆಯ್ಕೆ ಆಟೋ ರಿಕ್ಷಾ ಚಿಹ್ನೆ. ಚುನಾವಣಾ ಆಯೋಗ ಎರಡನೇ (ಆಟೋರಿಕ್ಷಾ) ಚಿಹ್ನೆ ನೀಡಿರುವುದಾಗಿ ವರದಿ ತಿಳಿಸಿದ್ದು, ಇದು ರಜನಿ ನಟನೆಯ ಬಾಷಾ ಸಿನಿಮಾ(ಆಟೋ ಚಾಲಕ)ನೆನಪಿಸಲಿದೆ ಎಂದು ಹೇಳಿದೆ.

ಇದನ್ನೂ ಓದಿ:ಶಾಲೆ ಆವರಣದಲ್ಲಿ ಪರಿಷ್ಕೃತ ರೂಪದಲ್ಲಿ ಮತ್ತೆ ವಿದ್ಯಾಗಮ ಆರಂಭ: ಸಚಿವ ಸುರೇಶ್ ಕುಮಾರ್

ವರದಿಯ ಪ್ರಕಾರ, ಹೊಸ ವರ್ಷಕ್ಕೂ ಮುನ್ನ ರಜನಿಕಾಂತ್ ಅವರು ತಮ್ಮ ನೂತನ ಪಕ್ಷದ ಸ್ಥಾಪನೆ ಬಗ್ಗೆ ಘೋಷಿಸಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯಾಗುವವರೆಗೂ ಕಾಯುವಂತೆ ರಜನಿ ಮಕ್ಕಳ್ ಮಂಡ್ರಂ ಸದಸ್ಯರಲ್ಲಿಯೂ ತಂಡ ಮನವಿ ಮಾಡಿಕೊಂಡಿತ್ತು.

Advertisement

ಚುನಾವಣಾ ಆಯೋಗದಲ್ಲಿ ಈಗಾಗಲೇ ಮಕ್ಕಳ್ ಸೆವಾಯ್ ಕಚ್ಚಿ ಪಕ್ಷದ ಹೆಸರನ್ನು ನೋಂದಾಯಿಸಲ್ಪಟ್ಟಿದೆ. ಇದರಲ್ಲಿ ಉತ್ತರ ಚೆನ್ನೈ ವಿಳಾಸವನ್ನು ನಮೂದಿಸಲಾಗಿದೆ. ಆದರೆ ಇದರಲ್ಲಿ ರಜನಿಕಾಂತ್ ಅವರನ್ನು ಅರ್ಜಿದಾರರನ್ನಾಗಲಿ ಅಥವಾ ಸ್ಥಾಪಕ ಎಂದಾಗಲಿ ಉಲ್ಲೇಖಿಸಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next