ಮೌಂಟ್ ಮೌಗನೂಯಿ : ಪಾಕಿಸ್ಥಾನದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮಾರೂಫ್ ಅವರ ಮಗುವಿನೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬಾಂಧವ್ಯದ ಫೋಟೋಗಳು ಲಕ್ಷಾಂತರ ಮಂದಿಯ ಹೃದಯಗಳನ್ನು ಗೆದ್ದಿದ್ದು, ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
‘ಭಾರತ ಮತ್ತು ಪಾಕಿಸ್ಥಾನದಿಂದ ಲಿಟಲ್ ಫಾತಿಮಾ ಗೆ ಕ್ರಿಕೆಟ್ ಉತ್ಸಾಹದ ಮೊದಲ ಪಾಠ’ ಎಂದು ಐಸಿಸಿ ಮುದ್ದಾದ ಮಗುವಿನೊಂದಿಗೆ ಸಂಭ್ರಮಿಸುತ್ತಿರುವ ಫೋಟೋ ಟ್ವೀಟ್ ಮಾಡಿದೆ.
ಪಾಕಿಸ್ಥಾನವನ್ನು 107 ರನ್ನುಗಳ ಭಾರೀ ಅಂತರದಿಂದ ಮಣಿಸಿದ ಭಾರತ ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಮೋಘ ಆರಂಭ ಪಡೆದಿತ್ತು.
Related Articles
ನೆಟ್ಟಿಗರು ಫೋಟೋಗೆ ಭಾರಿ ಪ್ರಮಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ವಿಶ್ವಕ್ಕೆ ಶಾಂತಿ ಪಾಠವನ್ನು ಈ ಚಿತ್ರ ಹೇಳಿಕೊಡಲಿ ಎಂದು ಬರೆದಿದ್ದಾರೆ. ಭಾರತೀಯ ಮಹಿಳಾ ಆಟಗಾರ್ತಿಯರ ಕ್ರೀಡಾ ಸ್ಪೂರ್ತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.