Advertisement

ಕಸ ಎತ್ತುವ ಕಾಗೆಗಳು..!

06:00 AM Aug 30, 2018 | Team Udayavani |

ಈ ಪಾರ್ಕ್‌ನ ಯಾವ ಮೂಲೆಯಲ್ಲಿ ಕಸ ಕಂಡರೂ ತಕ್ಷಣ ಮಾಯವಾಗಿಬಿಡುತ್ತದೆ. ಅಷ್ಟು ಶೀಘ್ರವಾಗಿ ಕಸ ವಿಲೇವಾರಿ ಮಾಡುತ್ತಿರುವುದು ಕೆಲಸಗಾರರಲ್ಲ, ಕಾಗೆಗಳು!

Advertisement

ಸುಂದರ ನಗರಿ ಪ್ರಾನ್ಸ್‌ನಲ್ಲಿಯೇಎರಡನೇಅತಿ ದೊಡ್ಡ ಐತಿಹಾಸಿಕ ಉದ್ಯಾನವನ “ಥೀಮ್‌ ಪಾರ್ಕ್‌’. ಅಲ್ಲಿ ಸುಂದರ ಹಾಗೂ ಆಕರ್ಷಣೀಯ ಕೇಂದ್ರವಾಗಿದ್ದು ಪ್ರತೀ ವರ್ಷ ಅಂದಾಜು ಎರಡು ಮಿಲಿಯನ್‌ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಈಗ ಅದು ಮತ್ತೂಂದು ಆಕರ್ಷಣೆಗೆ ಒಳಗಾಗಿದ್ದು ಪಾರ್ಕ್‌ನ ವಿಶಾಲ ಜಾಗದಲ್ಲಿ ಎಲ್ಲಿಯಾದರೂ ನೀವು ಕಸ ಚೆಲ್ಲಿದಿರೆಂದರೆ ಆ ಕಸ ತಕ್ಷಣ ಮಾಯವಾಗಿಬಿಡುತ್ತದೆ. ಅಲ್ಲಿನ ಕೆಲಸದವರ ದಕ್ಷತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದೀರಾ? ಸ್ವಲ್ಪ ತಾಳಿ. ಅಲ್ಲಿ ಕಸವನ್ನು ಎತ್ತುತ್ತಿರುವವರು ಕೆಲಸಗಾರರಲ್ಲ, ಕಾಗೆಗಳು!

ಆರು ಕ್ಲೀನರ್‌ ಕಾಗೆಗಳು
ಈ ಥೀಮ್‌ ಪಾರ್ಕ್‌ನ ಒಳಾಂಗಣದ ಸ್ವತ್ಛತೆಯ ಕೆಲಸಕ್ಕೆ ಆರು ಕಾಗೆಗಳ ನಿಯುಕ್ತಿಗೊಂಡಿವೆ. ಅವೆಲ್ಲವೂ ತರಬೇತುಗೊಂಡ ಕಾಗೆಗಳು. ಪಾರ್ಕಿನ ಒಳಭಾಗದಲ್ಲಿ ಯಾರಾದರೂ ಪ್ರವಾಸಿಗರು ಸಿಗರೇಟು ತುಂಡುಗಳನ್ನೋ, ಖಾಲಿಯಾದ ತಿಂಡಿ ಪೊಟ್ಟಣಗಳನ್ನೋ ಅಥವಾ ಇನ್ನಿತರೆ ಕಸವನ್ನೋ ಎಸೆದಿದ್ದರೆ ಕಾಗೆಗಳು ತಕ್ಷಣ ಅವುಗಳನ್ನು ಕೊಕ್ಕಿನಲ್ಲಿ ಹಿಡಿದುತಂದು ಕಸದ ಬುಟ್ಟಿಗೆ ಹಾಕುತ್ತವೆ.

ತರಬೇತಿ ನೀಡಿದ ಬಗೆ
ಕಾಗೆಗಳನ್ನು ಕಸ ಎತ್ತಿಹಾಕಲು ಬಳಸುವ ಉಪಾಯ ಮೊದಲಿಗೆ ಹೊಳೆದದ್ದು ಕ್ರಿಸ್ಟೋಫ್ ಗ್ಯಾಬೊರಿಟ್‌ ಎಂಬ ಪಕ್ಷಿ ತರಬೇತುದಾರನಿಗೆ. ಈ ಹಿಂದೆ ರಾಜಾಡಳಿತವಿದ್ದಾಗ ಥೀಮ್‌ ಪಾರ್ಕ್‌ ಇದ್ದ ಜಾಗದಲ್ಲಿ ನಡೆಯುತ್ತಿದ್ದ ಫಾಲ್ಕನರಿ ಪ್ರದರ್ಶನಗಳಲ್ಲಿ ಪಳಗಿಸಿ ತರಬೇತುಗೊಳಿಸಿದ ಪಕ್ಷಿಗಳಿಂದ ಗುಲಾಬಿ ಹೂವುಗಳನ್ನು ಹೆಕ್ಕಿ ತಂದು ಯುವರಾಣಿಯರಿಗೆ ಕೊಡಿಸುವ ಮೋಜಿನ ಪ್ರದರ್ಶನಗಳನ್ನು ನಡೆಸಲಾಗುತ್ತಿತ್ತು. ಈ ಕುರಿತು ತಿಳಿದ ಗ್ಯಾಬೊರಿಟ್‌ ತಾನೂ ಸಹ ಪಕ್ಷಿಗಳನ್ನು ಪಳಗಿಸಿ ತರಬೇತುಗೊಳಿಸಿದರೆ ಲಘು ಕಸವನ್ನು ಸುಲಭವಾಗಿ ಸ್ವತ್ಛಗೊಳಿಸಬಹುದೆಂಬ ಉಪಾಯ ಹೊಳೆಯಿತು. ಕೂಡಲೇ ಕಾರ್ಯಪ್ರವೃತ್ತನಾದ ಅವನು ತನ್ನ ಬಳಿ ಪಳಗಿದ್ದ ಬೌಬೌ, ಬ್ಯಾಂಬೊ, ಬಿಲ್‌, ಬ್ಲ್ಯಾಕ್‌, ಬ್ರಿಕೋಲೆ ಹಾಗೂ ಬಾಕೊ ಹೆಸರಿನ ಆರು ಕಾಗೆಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ. ಪಾರ್ಕಿನ ಪ್ರಾಂಗಣದಲ್ಲಿ ಸಣ್ಣ ಸಣ್ಣ ಕಾಗದದ ಚೂರುಗಳನ್ನೆಸೆದು ಅವುಗಳನ್ನು ಹೆಕ್ಕಿ ತರುವಂತೆ ತನ್ನ ಪಕ್ಷಿಗಳಿಗೆ ತರಬೇತಿ ನೀಡಿದನು. ಹಾಗೆ ಹೆಕ್ಕಿ ತಂದ ಪಕ್ಷಿಗೆ ಉತ್ತೇಜಕವಾಗಿ ಕಾಳುಗಳನ್ನು ನೀಡಿ ಸಂತುಷ್ಠಗೊಳಿಸುತ್ತಿದ್ದನು. ಕ್ರಮೇಣವಾಗಿ ಸಿಗರೇಟ್‌ ತುಂಡುಗಳು, ಕಸದ ಚೂರು, ಎಲೆ, ಕಡ್ಡಿಯಂಥ ತ್ಯಾಜ್ಯವನ್ನೂ ಎತ್ತಿ ತಂದುಕೊಡುವ ಅಬ್ಯಾಸ ಮಾಡಿಸಿದ. ನಂತರ ಅವು ಹೊತ್ತು ತಂದ ತ್ಯಾಜ್ಯವನ್ನು ಬಾಕ್ಸ್‌ ಒಳಗೆ ಹಾಕುವಂತೆ ತರಬೇತುಗೊಳಿಸಿದನು.

ವಿಶೇಷವಾದ ಕಸದ ಬುಟ್ಟಿ
ಕಾಗೆಗಳು ಕಸವನ್ನು ಎತ್ತಿ ಹಾಕುವ ಕಸದ ಬುಟ್ಟಿ ವಿಶೇಷವಾದುದು. ಅವುಗಳಲ್ಲಿ ಎರಡು ರಂಧ್ರಗಳಿವೆ. ಒಂದು ರಂಧ್ರದಲ್ಲಿ ಕಸ ಹಾಕಿದರೆ, ಇನ್ನೊಂದು ರಂಧ್ರದ ಮೂಲಕ ಕಾಗೆಗಳಿಗೆ ಇಷ್ಟವಾದ ಆಹಾರ ಹೊರಬರುತ್ತದೆ. ಹೀಗಾಗಿ ಕಸ ಎಲ್ಲಿ ಬಿದ್ದಿರುತ್ತದೋ ಎನ್ನುವುದನ್ನೇ ಕಾಗೆಗಳು ಕಾಯುತ್ತಿರುತ್ತವೆ. ಈಗ ಕಾಗ್ಗಳಿಗೆ ಕಸ ತಂದು ಹಾಕುವುದು ರೂಢಿಯಾಗಿಬಿಟ್ಟಿದೆ. ಅಂದ ಹಾಗೆ ವಾರದಲ್ಲಿ ನಾಲ್ಕು ದಿನಗಳ ಕಾಲ ಮಾತ್ರ ಕಾಗೆಗಳನ್ನು ಕಸ ಹೆಕ್ಕಲು ಬಳಸಿಕೊಳ್ಳಲಾಗುತ್ತಿದೆ. 

Advertisement

– ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next