Advertisement

ಸಾಹಿತ್ಯ ಹರಿಯುವ ನದಿಯಾಗಲಿ

05:20 PM Aug 27, 2018 | |

ಅಥಣಿ: ಸಾಹಿತ್ಯ ಎನ್ನುವುದು ಹರಿಯುವ ನದಿಯಾಗಬೇಕು. ಸಾಹಿತ್ಯವನ್ನು ಸಂಸ್ಕರಿಸಿ ನಾಡಿಗೆ ನೀಡುವ ಅಗತ್ಯವಿದೆ. ಸಾಹಿತ್ಯ ಏಕಾಂತದಲ್ಲಿ ಹುಟ್ಟಿ ಲೊಕಾಂತಗೊಳ್ಳುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಅಭಿಮತ ವ್ಯಕ್ತಪಡಿಸಿದರು.

Advertisement

ಸ್ಥಳಿಯ ಕೆ.ಎ. ಲೋಕಾಪುರ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅಥಣಿ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಡಾ| ಚನ್ನಪ್ಪ ಕಟ್ಟಿ ಸಾಹಿತ್ಯ ಅನುಸಂಧಾನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದರು.

ಸಿಂದಗಿಯ ಸಾಹಿತಿ ಡಾ| ಎಂ.ಎಂ. ಪಡಶೆಟ್ಟಿ ಮಾತನಾಡಿ, ಮನುಷ್ಯನಲ್ಲಿ ಇಚ್ಚಾಶಕ್ತಿ , ಜ್ಞಾನಶಕ್ತಿ, ಕ್ರಿಯಾಶಕ್ತಿ ಈ ಮೂರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪಾರಾಗಿ ಬರಬಲ್ಲ ಸಾಧನಗಳಾಗಿವೆ. ಅಂತಹ ವ್ಯಕ್ತಿತ್ವ ನಾವು ಚೆನ್ನಪ್ಪ ಕಟ್ಟಿಯವರಲ್ಲಿ ಕಾಣಬಹುದು. ಇಂದು ದೇಶಿ ಕಲೆಗಳು ಸೊರಗಿ ಅಸ್ಥಿಪಂಜರದಂತಾಗಿದ್ದರೆ ಅವುಗಳಿಗೆ ರಕ್ತಮಾಂಸ ತುಂಬುವ ಲೇಖಕರು ನಮ್ಮಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೆ.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದರಾವ್‌ ದೇಶಪಾಂಡೆ ಮಾತನಾಡಿ, ಕನ್ನಡ ಅಳಿದು ಹೋಗುವ ಭಾಷೆಯಲ್ಲ. ಒಂದು ಭಾಷೆಯಲ್ಲಿ ಪರಿಪೂರ್ಣ ವ್ಯಾಕರಣ ಕಲಿತರೆ ಎಲ್ಲ ಭಾಷೆಗಳಲ್ಲೂ ವ್ಯಾಕರಣ ಕಲಿಯಬಹುದು ಎಂದರು. ಈ ವೇಳೆ ಕಸಾಪ ಅಧ್ಯಕ್ಷ ಡಾ| ಮಹಾಂತೇಶ ಉಕ್ಕಲಿ, ಡಾ| ಜೆ.ಪಿ. ದೊಡಮನಿ, ವಾಮನ ಕುಲಕರ್ಣಿ, ಎಸ್‌.ಎ. ಹೊಳೆಪ್ಪನವರ, ಡಾ| ಆರ್‌.ಎಸ್‌. ದೊಡ್ಡನಿಂಗಪ್ಪಗೋಳ, ಮಲ್ಲಿಕಾರ್ಜುನ ಕನಶೆಟ್ಟಿ, ಪಿ.ಎಂ. ಹುಲಗಬಾಳಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next