ರಾಣಿಬೆನ್ನೂರ: ಕವಿಗಳಲ್ಲಿ ತಾಳ್ಮೆ ಅಗತ್ಯ, ಕವಿಗಳು ಸಾರ್ವತ್ರಿಕವಾಗಿರಬೇಕು. ಸಾಹಿತ್ಯ ಸಮಾಜಮುಖಿ ಚಿಂತನೆಗಳನ್ನು
ಪ್ರತಿಪಾದಿಸಿದಾಗ ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ. ಅಸಹನೆಗಳನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಪ್ರಾಧ್ಯಾಪಕ ಡಾ| ಎಂ.ಈ. ಶಿವಕುಮಾರ ಹೊನ್ನಾಳಿ ಹೇಳಿದರು.
Advertisement
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಸ್ಥಳಿಯ ಕವಿ ದೇವರಾಜ್ ಹುಣಸಿಕಟ್ಟಿ ಅವರಹಕೀಮನೊಬ್ಬನ ತಕರಾರು ಎಂಬ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಾಹಿತ್ಯ ಕ್ಷೇತ್ರದ ಮೂಲಕ
ಸಮಾಜದ ಓರೆಕೋರೆಗಳನ್ನು ತಿದ್ದುವ ಶಕ್ತಿ ಬರುತ್ತದೆ. ಇಂತಹ ಸಾಧ್ಯತೆಗಳನ್ನು ಕವಿ ದೇವರಾಜ ತಮ್ಮ ಕೃತಿಯ ಕವನಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಇಂದಿನ ಬರಹಗಾರರು, ಸಾಹಿತಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
Related Articles
ಪ್ರೀತಮ್ಮ ಸಾವಕ್ಕನವರ, ಅಭಿಲಾಷ್ ಬ್ಯಾಡಗಿ, ಬಸವರಾಜ ಸಾವಕ್ಕನವರ, ಶಕುಂತಲಾ ಎಫ್. ಕೆ., ಸೋಮಣ್ಣ ಲಮಾಣಿ, ಕಸಾಪ ನಿಕಟಪೂರ್ವ ಅಧ್ಯಕ್ಷ ವೀರೇಶ ಜಂಬಗಿ, ದೇವರಾಜ ಹುಣಸಿಕಟ್ಟಿ, ಮಾರುತಿ ತಳವಾರ, ದಾಕ್ಷಾಯಣಿ ಉದಗಟ್ಟಿ, ನಾಮದೇವ ಕಾಗದಗಾರ ಮುಂತಾದವರು ಇದ್ದರು.
Advertisement