ಹುಬ್ಬಳ್ಳಿ: ನೆಲಮೂಲ ಸಂಸ್ಕೃತಿಯ ಜಾನಪದ ಹಾಡುಗಳಿಂದ ಸಾಹಿತ್ಯ ಸೃಷ್ಟಿಯಾಗಿದ್ದು, ಬದುಕಿನ ಪ್ರತಿಯೊಂದು ಹಂತದಲ್ಲೂ ಸಾಹಿತ್ಯ ಜತೆಗಿರುತ್ತದೆ ಎಂದು ಪತ್ರಕರ್ತ ರಾಜೇಂದ್ರ ಪಾಟೀಲ ಹೇಳಿದರು. ಲಿಂಗರಾಜ ನಗರದ ಗ್ಲೋಬಲ್ ಕಾಲೇಜಿನ ಸಭಾಭವನದಲ್ಲಿ ಅಕ್ಷರ ಸಾಹಿತ್ಯ ವೇದಿಕೆ, ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನ, ಕಸಾಪ ಹಾಗೂ ಸಾನುರಾಗ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯದ ಓದು ಅಭಿಯಾನ-3ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತ್ಯವಿಲ್ಲದೆ ಬದುಕಿಲ್ಲ. ಮನಸ್ಸಿಗೆ ಮುದ ನೀಡುವ ಶಕ್ತಿ ಸಾಹಿತ್ಯಕ್ಕಿದೆ ಎಂದರು. ಬೆಂಡಿಗೇರಿ ಪೊಲೀಸ್ ಠಾಣಾಧಿಕಾರಿ ಡಾ| ವಿನೋದ ಮುಕ್ತೇದಾರ ಮಾತನಾಡಿ, ಇಂಗ್ಲಿಷ್ ಭಾಷೆ ಬದುಕಿನ ಅನಿವಾರ್ಯವಾಗುತ್ತಿರುವ ಸಂದರ್ಭದಲ್ಲೂ ಕನ್ನಡ ಮರೆಯಬಾರದು. ಮಾತೃಭಾಷೆ ಬಗ್ಗೆ ಅಭಿಮಾನವಿರಬೇಕು.
ಓದು-ಬರಹ ಬದುಕಿನ ಅಂಗವಾಗಿಸಿಕೊಳ್ಳಬೇಕು ಎಂದರು. ಗ್ಲೋಬಲ್ ಶಿಕ್ಷಣ ಪತ್ರಿಷ್ಠಾನದ ಅಧ್ಯಕ್ಷ ಎನ್.ಬಿ. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಸಾಹಿತಿ ಸೋಮು ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಮನ್ವಯಾಧಿಕಾರಿ ಡಾ| ರೇಣುಕಾ ಅಮಲlರಿ, ಮಹಾವಿದ್ಯಾಲಯದ ಡೀನ್ ಡಾ| ಮಹೇಶ ದೇಶಪಾಂಡೆ, ಪ್ರೊ| ರಾಣಿ ಗಾರ್ಡ್, ಕನ್ನಡ ಬಳಗದ ವೆಂಕಟೇಶ ಮರೇಗುದ್ದಿ, ಸಾಹಿತಿ ಪ್ರೇಮಾ ನಡುವಿನಮನಿ,
-ಸಾನುರಾಗ ಫೌಂಡೇಶನ್‌ದ ಚಂದ್ರು ಹಿರೇಮಠ, ಅಭಿಯಾನದ ಸಹ ಸಂಚಾಲಕರಾದ ಕಲ್ಮೇಶ ತೋಟದ, ಶ್ರೀಧರ ಪೂಜಾರ, ರûಾ ದೇಶಪಾಂಡೆ ಇತರರಿದ್ದರು. ನಿಖೀತಾ ಸಂಗಡಿಗರು ಪ್ರಾರ್ಥಿಸಿದರು. ಅಭಿಯಾನದ ಸಂಚಾಲಕ ಅಂಬರೀಶ ಹಾನಗಲ್ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಡಾ| ವೀರೇಶ ಹಂಡಿಗಿ ಅವರು ರಾಜು ಗಡ್ಡಿ ಬರೆದ ದೇಶ್ ವಾಪ್ಸಿ ಕೃತಿ ಪರಿಚಯಿಸಿದರು. ಪ್ರೊ| ಮಂಜುಳಾ ಪಾಟೀಲ ನಿರೂಪಿಸಿದರು. ಶರತ್ ವಂದಿಸಿದರು.