ನಮ್ಮೊಂದಿಗೆ ಸೇರಿಕೊಂಡರೆ ಸಾಹಿತ್ಯದ ಪರಿಪೂರ್ಣತೆಯೆಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ಕನ್ನಡದ ಪ್ರಮುಖ ಕವಿ, ಕಾದಂಬರಿಕಾರ, ಸಂಘಟಕ ಡಾ| ನಾ. ಮೊಗಸಾಲೆ ಅವರು ಅಭಿಪ್ರಾಯಪಟ್ಟರು.
Advertisement
ಅವರು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ದಿಲ್ಲಿ ಇದರ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೇಖಕರೊಂದಿಗೆ ಭೇಟಿ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಂಡುಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳು ತರಗತಿಯ ಪಠ್ಯಗಳಿಗೆ ಮಾತ್ರ ಸೀಮಿತವಾಗಿರದೆ ಸಾಹಿತ್ಯ ಸಹಿತ
ಎಲ್ಲ ವಿಚಾರಗಳನ್ನೂ ತೆರೆದ ಮನಸ್ಸಿನಿಂದ ಮನನ ಮಾಡಿಕೊಂಡು ತಮ್ಮ ಅರಿವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ನಾವು ಎಂಬುವ ಬದಲು ನಾನು ಎಂಬುದು ನಮ್ಮ ಎದುರು ಬಂದು ಇಂದು ಅದೆಷ್ಟೋ ತಲ್ಲಣಗಳನ್ನು ಸೃಷ್ಟಿಸುತ್ತಿದೆ.
ಇಂತಹ ಮನೋಭಾವನೆಯಿಂದ ಇಂದು ರಾಜಕೀಯ ಸಹಿತ ಎಲ್ಲ ರಂಗಗಳೂ ಕುಲಗೆಟ್ಟು ಹೋಗುತ್ತಿವೆ. ಅದೇ ರೀತಿಯಲ್ಲಿ ಪ್ರಶಸ್ತಿಗಳು ಕೂಡ ಮೌಲ್ಯಗಳನ್ನು ಕಳೆದುಕೊಂಡು ಕುಲಗೆಡುತ್ತಿವೆ. ಯಾವತ್ತು ನಾನು ಎಂಬ ಮನೋಭಾವ ಜಗತ್ತಿನಲ್ಲಿ ಮರೆಯಾಗುತ್ತದೋ ಆಗ ಉತ್ತಮ ಸಮಾಜವನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
Related Articles
Advertisement
ಇದಕ್ಕಿಂತ ಮುನ್ನ ನಡೆದ ಮೊಗಸಾಲೆ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಕ್ಷ ಪ್ರೊ| ಸೋಮಣ್ಣಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಗಸಾಲೆ ಅವರ ಸಣ್ಣಕತೆಗಳು ಎಂಬ ವಿಷಯದಲ್ಲಿ ವಿಶ್ವನಾಥ ಎನ್. ನೇರಳೆಕಟ್ಟೆ, ಮೊಗಸಾಲೆಯವರ ಸಂಘಟನೆಯ ಕುರಿತು ಡಾ| ಮಾಧವ ಮೂಡುಕೊಣಾಜೆ ಅವರು ಮಾತನಾಡಿದರು. ಬಳಿಕ ಮೊಗಸಾಲೆಯವರ ಕವಿತೆಗಳ ಪ್ರಸ್ತುತಿಯನ್ನು ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಮಾಡಿದರು ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ಪ್ರಾದೇಶಿಕ ಕಾರ್ಯದರ್ಶಿ ಡಾ| ಎನ್.ಕೆ. ಮಹಾಲಿಂಗೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಶೋಧನ ವಿದ್ಯಾರ್ಥಿ ಶಿವರಾಜ್ ಕಾರ್ಯಕ್ರಮ ನಿರೂಪಿಸಿದರು.