Advertisement

ಸಾಹಿತ್ಯ ನಕಲು ಪ್ರವೃತ್ತಿ ಹೆಚ್ಚಿದೆ

12:06 PM Jun 02, 2018 | Team Udayavani |

ಬೆಂಗಳೂರು: ಸಾಹಿತ್ಯದಲ್ಲಿ ನಕಲು ಸಂಸ್ಕೃತಿ ಹೆಚ್ಚುತ್ತಿದ್ದು, ಬೇರೊಬ್ಬ ಕವಿಯ ಕವಿತೆ, ಕವನಗಳಿಗೆ ತಮ್ಮ ಹೆಸರನ್ನು ಹಾಕಿಕೊಂಡು ನಕಲಿ ಕವಿಗಳಾಗುತ್ತಿದ್ದಾರೆ ಎಂದು ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ಬೇಸರ ವ್ಯಕ್ತಪಡಿಸಿದರು.

Advertisement

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕನ್ನಡ ಗೆಳೆಯರ ಬಳಗ ಹಾಗೂ ಸಪ್ನ ಬುಕ್‌ ಹೌಸ್‌ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಂಗರಾಜು ನಾಗವಾರ ಅವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಸಾಹಿತ್ಯ ಕತ್ತರಿಸು, ಅಂಟಿಸು ಸಂಸ್ಕೃತಿಯತ್ತಾ ತೆರಳುತ್ತಿದ್ದೆ ಎಂದು ಹೇಳಿದರು.

ಬಹುತೇಕರು ಸ್ವಂತ ಬರವಣಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ನಕಲು ಪದ್ಧತಿಗೆ ದಾಸರಾಗುತ್ತಿದ್ದಾರೆ. ಆದರೆ, ಇದು ಸಾಹಿತ್ಯ ವಲಯದ ಬೆಳವಣಿಗೆಗೆ ಮಾರಕ ಹಾಗಾಗಿ ಎಲ್ಲರೂ ತಮ್ಮದೇ ಕತೃìತ್ವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಂಗರಾಜು ನಾಗವಾರ ಅವರ “ನಾನೂ ಕಂಡ ಅಮೆರಿಕ’ ಹಾಗೂ “ಪ್ರೀತಿ … ಪ್ರೀತಿಯ ರೀತಿ’ ಪುಸ್ತಕಗಳನ್ನು ಸಾಹಿತಿ ಜರಗನಹಳ್ಳಿ ಶಿವಶಂಕರ್‌ ಅವರು ಬಿಡುಗಡೆ ಮಾಡಿದರು. ಕನ್ನಡ ಪರ ಚಿಂತಕ ರಾ.ನಂ.ಚಂದ್ರಶೇಖರ್‌, ಸಪ್ನಬುಕ್‌ ಹೌಸ್‌ನ ಹಿರಿಯ ಸದಸ್ಯ ದೊಡ್ಡೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next