Advertisement

ಸಾಮಾಜಿಕ ಜಾಲತಾಣಗಳ ಮೂಲಕವೂ ಸಾಹಿತ್ಯ ಸೃಷ್ಟಿ

11:49 PM Feb 06, 2020 | Lakshmi GovindaRaj |

* ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಸಾಹಿತ್ಯ ಸೊರಗುತ್ತಿದೆ ಎಂಬ ಮಾತುಗಳಿವೆ. ಆ ಕುರಿತು ನಿಮ್ಮ ಅನಿಸಿಕೆ ಏನು?
ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಸಾಹಿತ್ಯ ಸೊರಗುತ್ತಿದೆ ಎಂಬುದು ಒಂದು ರೀತಿಯಲ್ಲಿ ನಿಜ ಮತ್ತು ಒಂದು ರೀತಿಯಲ್ಲಿ ಸುಳ್ಳು. ಯಾಕೆಂದರೆ, ಜಾಲತಾಣಗಳ ಮೂಲಕವೂ ಇವತ್ತು ಸಾಹಿತ್ಯ ಸೃಷ್ಟಿ ಆಗ್ತಾ ಇದೆ. ಆ ರೀತಿಯಲ್ಲಿ ಇದು ಸಾಹಿತ್ಯ ಸೃಷ್ಟಿಗೆ ಪೂರಕವಾಗಿದೆ. ಆದರೆ, ಅಲ್ಲಿ ನಿಷ್ಠುರ ವಿಮರ್ಶೆ ಇಲ್ಲ. ಹಾಗಾಗಿ ಒಂದೊಳ್ಳೆಯ ಮೌಲಿಕ ಮಾಪನ ಸಾಧ್ಯವಾಗ್ತಾ ಇಲ್ಲ.

Advertisement

* ವರ್ತಮಾನದ ತಲ್ಲಣಗಳಿಗೆ, ಸಾಹಿತ್ಯ ಮದ್ದಾಗಬಲ್ಲದೆ? ಹೇಗೆ?
ವರ್ತಮಾನದ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸುವುದೇ ಸಾಹಿತ್ಯದ ಕೆಲಸ. ಅದು ಮದ್ದಾಗುವುದು ಕಾಲಕ್ರಮೇಣ ಆಗಬೇಕಾದಂಥ ಕೆಲಸ.

* ವಿವಿಧ ಪ್ರಕಾರದ ಪುಸ್ತಕಗಳ ಪ್ರಕಟಣೆ ಜಾಸ್ತಿ ಆಗ್ತಾ ಇದೆ. ಅದೇ ಸಮಯದಲ್ಲಿ, ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗ್ತಾ ಇದೆ. ಈ ವೈರುಧ್ಯವನ್ನು ಹೇಗೆ ಸರಿಮಾಡುವುದು?
ಪುಸ್ತಕ ಪ್ರಕಟಣೆಯ ಸಂಖ್ಯೆ ಹೆಚ್ಚಾಗ್ತಾ ಇದೆ ಅನ್ನುವುದೇ ಪುಸ್ತಕ ಓದುವುದಕ್ಕೆ ಜನ ಇದ್ದಾರೆ ಅನ್ನುವುದಕ್ಕೆ ಸಾಕ್ಷಿ. ಯಾವ ಪ್ರಕಾಶಕರೂ ನಷ್ಟ ಮಾಡಿಕೊಂಡು ಪುಸ್ತಕ ಪ್ರಕಟಿಸುವುದಿಲ್ಲ. ವಿವಿಧ ಪ್ರಕಾರಗಳಲ್ಲಿ ಪುಸ್ತಕ ಬರ್ತಾ ಇರೋದು ಬಹಳ ಆರೋಗ್ಯಕರ ಸಂಗತಿ.

* ಈಚಿನ ದಿನಗಳಲ್ಲಿ ನಿಮ್ಮನ್ನು ತುಂಬಾ ಕಾಡಿದ ಕೃತಿ ಯಾವುದು?
ಡಾ. ವಿಜಯಾ ಅವರ “ಕುದಿ ಎಸರು’. ಅಲ್ಲಿ ಯಾವುದೇ ತೋರು ಗಾರಿಕೆ ಇಲ್ಲ. ಅವರು ಪ್ರಾಮಾಣಿಕವಾಗಿ, ಸರಳವಾಗಿ ಮತ್ತು ಭಾವ ಪೂರ್ಣವಾಗಿ ತಮ್ಮ ಮನಸಿನ ಮಾತುಗಳನ್ನು ಹೇಳಿಕೊಂಡಿದ್ದಾರೆ. ಈ ಕೃತಿ, ಇಂದಿನ ಮಹಿಳೆಯರಿಗೆ ಪ್ರೇರಣೆ ನೀಡುವಂಥ ಕೃತಿ.

* ಕವಿಯಾಗಿ ಅಲ್ಲದಿದ್ದರೆ, ಜನ ನಿಮ್ಮನ್ನು ಯಾವ ರೀತಿಯಲ್ಲಿ ನೆನಪು ಮಾಡಿಕೊಳ್ಳಲಿ ಅಂತ ಬಯಸುವಿರಿ?
ಒಬ್ಬ ಗೆಳೆಯನನ್ನಾಗಿ ಜನ ನನ್ನನ್ನು ನೆನಪು ಮಾಡಿಕೊಳ್ಳಲಿ ಎಂಬುದು ನನ್ನ ಆಸೆ.

Advertisement

* ಕಲಬುರಗಿ ಸಮ್ಮೇಳನ ಹೇಗಿದೆ?
ಅಚ್ಚುಕಟ್ಟಾಗಿ ನಡೆಯುತ್ತಿದೆ.ರಾಜ್ಯದ ಮೂಲೆಮೂಲೆಯಿಂದ ಜನರು ಬಂದಿದ್ದಾರೆ. ಕನ್ನಡದ ಹಬ್ಬ ಯಾವತ್ತೂ ಅದ್ಧೂರಿಯಿಂದಲೇ ನಡೆಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಸಂಭ್ರಮದ ಕಲರವ ಸದಾ ನೆನಪಲ್ಲಿ ಇರುತ್ತದೆ.

* ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next