Advertisement

ಕಾಸರಗೋಡಿನ ಸಾಹಿತ್ಯ ಲೋಕ – 241: ಮಲಾರ್‌ ಜಯರಾಮ ರೈ

06:40 AM Apr 02, 2018 | Team Udayavani |

ಕಾಸರಗೋಡಿನ ಕನ್ನಡ ಸಾಹಿತ್ಯ ಲೋಕದಲ್ಲಿ ಯಾವುದಾ ದರೊಂದು ವೃತ್ತಿಯನ್ನು ಪ್ರಮುಖವಾಗಿಸಿಕೊಂಡು ಪ್ರವೃತ್ತಿಗಳಲ್ಲಿ ಬಹುಮುಖ ಪ್ರತಿಭಾನ್ವಿತರಾಗಿ ಬಹುಕ್ಷೇತ್ರಗಳ ಸಾಧಕರಾಗಿ, ಜನಪರ ಶಕ್ತಿಯಾಗಿ ಗುರುತಿಸಿಕೊಂಡ ಹತ್ತು ಹಲವು ಮಂದಿಗಳು ಆಗಿ ಹೋಗಿದ್ದಾರೆ. ವರ್ತಮಾನದಲ್ಲೂ ಹಲವರು ಸೇವೆಗೈಯ್ಯುತ್ತಿದ್ದಾರೆ. ಅಂತಹ ಕ್ರಿಯಾಶೀಲ ವ್ಯಕ್ತಿಗಳಲ್ಲಿ ಬಹುಭಾಷಾ ವಿದ್ವಾಂಸರೂ ಹಿರಿಯ ಪತ್ರಕರ್ತರೂ ಆಗಿರುವ ಮಲಾರ್‌ ಜಯರಾಮ ರೈ ಅವರು ಪ್ರಮುಖರು.

Advertisement

ರೈಯವರು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕೇರಳ ಗಡಿನಾಡು ಪ್ರದೇಶವಾದ ಮಲಾರು ಬೀಡು ಬಂಟ ಮನೆತನದಲ್ಲಿ ಪ್ರಸಿದ್ಧ  ಭಾಗವತರೂ ಗಮಕಿಯೂ ಆಗಿದ್ದ ದಿ| ತಿಮ್ಮಪ್ಪ ರೈ ಮತ್ತು ಕುಂಬಳೆ ಶಿರಿಯಾದ ಅಡ್ಕದಗುತ್ತು ಲಕ್ಷಿ$¾à ದಂಪತಿಯ ದ್ವಿತೀಯ ಪುತ್ರರಾಗಿ ಜಯರಾಮ ರೈಯವರು 1946 ಫೆಬ್ರವರಿ 2ರಂದು ಜನಿಸಿದರು. ಲಕ್ಷಿ$¾àನಾರಾಯಣ ರೈ (ಕರ್ನಾಟಕ ಸರಕಾರದ ಪಂಚಾಯತ್‌ ಕಾರ್ಯದರ್ಶಿಯಾಗಿ ನಿವೃತ್ತಿ) ಅವರು ಸಹೋದರರು. ಕೃಷ್ಣವೇಣಿ (ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿಯವರ ಹೆತ್ತಬ್ಬೆ, ಮೀರಾ, ಚಂದ್ರಕಲಾ ಹೆಗ್ಡೆ (ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ) ಅವರು ಸಹೋದರಿಯರು.ರೈ ಅವರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ  ಶಿಕ್ಷಣವನ್ನು ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಪದವಿಯನ್ನು ಗಳಿಸಿದರು. ಅಲ್ಲದೆ ಮಂಗಳೂರಿನ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಡಿಪ್ಲೋಮಾ ಪದವಿಯನ್ನೂ ಗಳಿಸಿದರು. ಹಿಂದಿ ಭಾಷೆಯಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಪ್ರವೀಣ, ವಿಶಾರದ ಹಾಗೂ ಹಿಂದಿ ಸ್ನಾತಕೋತ್ತರ ಪದವಿಯನ್ನೂ ಪಡೆದರು.

ಕನ್ನಡ, ತುಳು, ಹಿಂದಿ, ಆಂಗ್ಲ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಪಡೆದ ಜಯರಾಮ ರೈಗಳು ಪ್ರಥಮವಾಗಿ ಮಲಾರ್‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ “ಗೌರವ ಶಿಕ್ಷಕ’ರಾಗಿ ಸೇವೆಗೆ ತೊಡಗಿಸಿಕೊಂಡು ಒಂದು ವರ್ಷ ಕೊಡ್ಲಮೊಗರು ವಾಣಿವಿಜಯ ಹೆ„ಸ್ಕೂಲಿನಲ್ಲಿಯೂ ಹಿಂದಿ ಅಧ್ಯಾಪಕರಾಗಿ ದುಡಿದರು. ಅನಂತರ 1969ರಿಂದ 1973ರ ವರೆಗೆ ಆಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನವಭಾರತ ಪತ್ರಿಕೆಗೆ ವರದಿಗಾರರಾಗಿ ಕೆಲಸ ನಿರ್ವಹಿಸಿ 1973ರಿಂದ 2003ರ ವರೆಗೆ ಕರ್ನಾಟಕದ ಪ್ರಸಿದ್ಧ ಕನ್ನಡ ದೈನಿಕ  ಪ್ರಜಾವಾಣಿ ಮತ್ತು ಆಂಗ್ಲ ದೈನಿಕ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ಮಂಗಳೂರು ಹಾಗೂ ಬೆಂಗಳೂರುಗಳಲ್ಲಿ ಅರೆಕಾಲಿಕ, ಪೂರ್ಣಕಾಲಿಕ ವರದಿಗಾರರಾಗಿ, ಪ್ರಧಾನ ವರದಿಗಾರರಾಗಿ, ಹಿರಿಯ ಉಪಸಂಪಾದಕರಾಗಿ ನಿವೃತ್ತ¤ರಾದರು.

ಪ್ರತಿಭೆ ಮತ್ತು ಪಾಂಡಿತ್ಯ ಸಮ್ಮಿಳಿತ ವಿಶಿಷ್ಟ ವ್ಯಕ್ತಿತ್ವ ಜಯ ರಾಮ ರೈಗಳದ್ದು. ಸ್ನೇಹ, ಸರಳಜೀವಿಯಾಗಿದ್ದಾರೆ. ಅವರು ಒಬ್ಬ ವಾಗ್ಮಿ, ಮತ್ತು ನಿರರ್ಗಳ ಮಾತಿನ ಮೋಡಿಯಿಂದ ಎಲ್ಲರ ಮನಸ್ಸನ್ನು ಸೆರೆಹಿಡಿಯಬಲ್ಲವರು. ಶ್ರೀ ಸತ್ಯಸಾಯಿಯವರ ಭಕ್ತರು. ಸ್ವಾಮಿ ನಿತ್ಯಾನಂದ ಮತ್ತು ಮಹಾತ್ಮಾ ಗಾಂ ಧೀಜಿ ಯವರ ತತ್ವಾದರ್ಶಗಳಲ್ಲಿ ನಂಬಿಕೆಯಿರಿಸಿರುವವರು. ಕವಿಗಳಾದ ಅವರು ಕೇರಳ ತುಳು ಅಕಾಡೆಮಿಯ ಸದಸ್ಯರಾಗಿಯೂ ಸೇವೆಗೈದವರು. ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಅಲಂಕರಿಸಿದರು.

ಪತ್ರಿಕಾ ವೃತ್ತಿಯ ಕಾರಣದಿಂದ ದಕ್ಷಿಣ ಕನ್ನಡ, ಬೆಂಗಳೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಮೂಲೆಮೂಲೆಯಲ್ಲಿಯೂ ಸಂಚರಿಸಿ ಜನಜೀವನವನ್ನು ನೋಡಿ ವರದಿ ಮಾಡಲು ಜಯರಾಮ ರೈಯವರಿಗೆ ಸಾಧ್ಯವಾಯಿತು. ಆ ಪ್ರದೇಶಗಳ ಪ್ರಧಾನ ರಾಜಕೀಯ, ಆರ್ಥಿಕ, ಔದ್ಯೋಗಿಕ ಹಾಗೂ ಶೈಕ್ಷಣಿಕ ಬದಲಾವಣೆಗಳ ಕುರಿತಾಗಿ ಸಕಾಲಿಕ ವರದಿ ಹಾಗೂ ಲೇಖನಗಳನ್ನು ಬರೆದರು. ದೇಶ ವಿದೇಶಗಳ ಪ್ರಭಾವಿ  ವ್ಯಕ್ತಿಗಳ ಸಂದರ್ಶನವನ್ನು ಮಾಡುವಂತಹ ಅವಕಾಶವೂ ದೊರೆಯಿತು. ರೊಟೇರಿಯನ್‌ ಫೌಂಡೇಶನ್‌ನ ವತಿಯಿಂದ ಪತ್ರಿಕೋದ್ಯಮದ ಸದಸ್ಯರಾಗಿ ಭಾರತವನ್ನು ಪ್ರತಿನಿ ಧೀಕರಿಸಿ ಅಮೆರಿಕದ ಪ್ರಮುಖ ನಗರಗಳಲ್ಲಿ ಜರಗಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

Advertisement

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸ್ವಾಮೀಜಿ ಯವರ ಪರಮಾಪ್ತರಾದ ರೈಗಳು ಶ್ರೀ ಸ್ವಾಮೀಜಿಯವರ ಮತ್ತು ಗುರುಬಂಧುಗಳ ಜತೆಯಲ್ಲಿ ನಡೆಸಿದ ಹಲವು ತೀರ್ಥಯಾತ್ರೆಗಳ ಕಥನಗಳು ಕೃತಿರೂಪದಲ್ಲಿ ಬಂದಿವೆ. ಪುಟ್ಟಪರ್ತಿ ಶ್ರೀ ಸತ್ಯಸಾಯಿಗಳ ಅನುಯಾಯಿ ಯಾಗಿರುವ ಅವರು ಶ್ರೀ ಸಾಯಿಯವರ ಜೀವನ ಚರಿತ್ರೆಯನ್ನೂ ಪ್ರಕಟಿಸಿರುತ್ತಾರೆ. ಮಲಾರ್‌ ಜಯರಾಮ ರೈ ಅವರು ಬೆಂಗಳೂರಿನಲ್ಲಿ ವಾಚಿಸಿದ “ತುಳುವೆರ್‌ ಎಂಕ್ಲು’ ಎಂಬ ತುಳು ಕವನದ ಸೂ #ರ್ತಿಯಿಂದ ತುಳುವರು ಸಂಘಟಿಸಿದ “ತುಳುವರೆಂಕುಲು’ ಸಂಘದ ಸ್ಥಾಪಕರು. ಒಡಿಯೂರು ಶ್ರೀ ಸಂಸ್ಥಾನದ ತುಳುಕೂಟ ಸಂಸ್ಥೆಯ ಸ್ಥಾಪಕ ಸದಸ್ಯರೂ ಆಗಿರುವರು. ನಾಡಿನ ಹೆಚ್ಚಿನೆಡೆಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ವೈಚಾರಿಕ ವಿಷಯಗಳಲ್ಲಿ ಆಂಗ್ಲ, ಕನ್ನಡ, ತುಳು, ಹಿಂದಿ ಭಾಷೆಗಳಲ್ಲಿ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ.

ಪ್ರಕಟಿತ ಕೃತಿಗಳು 
ಕನ್ನಡ : ಸಾವಿರದಲ್ಲೊಂದು ಗ್ರಾಮ – ಸೀರೆ, ಬಹುರೂಪಿ ಗಾಂಧಿ, ಸಂತ ಸುಧಾರಕ ಶ್ರೀ ನಾರಾಯಣ ಗುರು, ನುಗ್ಗಿ ಬರ್ತಾವೆ ನೂರು ನೆನಪುಗಳು, ಪತ್ರಕರ್ತನ ಪರ್ಯಟನ, ಅಜೇಯ (ಸ್ಮರಣ ವ್ಯಕ್ತಿಗಳ ಸ್ಮರಣ ಲೇಖನಗಳ ಸಂಗ್ರಹ ಕೃತಿಯ ಪ್ರಧಾನ ಸಂಪಾದಕರು).

ಇಂಗ್ಲಿಷ್‌: ಜರ್ನಿ ತೂ ಜರ್ನಲಿಸಂ (ವೃತ್ತಿಜೀವನದ ಅನುಭವಗಳ ಸಂಗ್ರಹ) ಜ್ಞಾನಗಂಗ, ಒಡಿ ಯೂರು ಸ್ವಾಮೀಜಿಯವರ ವಚನಗಳ ಆಂಗ್ಲ ಭಾಷಾಂತರ, ಇನ್ನರ್‌ ವಾçಸ್‌ ಆಫ್‌ ಅವಧೂತ, ವಿಶನ್‌ ಕ್ರಿಯೇಶನ್‌ (ಮುಳಿಯ ಶಂಕರ ಭಟ್‌ ವಿರಚಿತ ಕೃತಿಯ ಆಂಗ್ಲ ಭಾಷಾಂತರ).

ತುಳು : ಬೇರ್‌ ಮರ್‌ª(ಕವನ ಸಂಕಲನ), ಅಪ್ಪೆ ಇಲ್‌(ಕವನ ಸಂಕಲನ-ಕರ್ನಾಟಕ ತುಳು ಅಕಾಡೆಮಿ ಪ್ರಕಾಶನ), ರಸದಿಂಜಿ ರಾಮಾಯಣೊ (ರಾಮಾಯಣದ-ಸಣ್ಣಕಥೆಗಳ ಸಂಗ್ರಹ), ಬೋಡು ನಮಗೊಂಜಿ ತುಳುನಾಡು (ಸ್ವತಂತ್ರ ಕೃತಿ), ಅತ್ತಾವರ ಎಲ್ಲಪ್ಪ(ಕರ್ನಾಟಕ ತುಳು ಅಕಾಡೆಮಿ ಪ್ರಕಾಶನ), ಮಾನವ ಜಾತಿಗ್‌ ತೋಜಾಯಿನ-ಮಹರ್ಷಿ ದಯಾನಂದ ಸರಸ್ವತಿ (ಆರ್ಯ ಸಮಾಜ-ಮಂಗಳೂರು ಪ್ರಕಾಶನ), ಪುಣ್ಯಭೂಮಿ ಪುಟಪರ್ತಿ (1976ರಲ್ಲಿ ಶ್ರೀ ಸತ್ಯಸಾಯಿಯವರ 50ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಬಿಡುಗಡೆ), ಸಾಯಿ ಪಾತೆರದ ಅಮೃತೊ.ಅಪ್ರಕಟಿತ ಕೃತಿಗಳು : ಡೆಕ್ಕನ್‌ ಹೆರಾಲ್ಡ್‌ನಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ (ಆಂಗ್ಲ ಭಾಷೆ), ಕಬೀರರ ವಚನೊಗಳ್‌ (ತುಳು), ಲಕ್ಷದೀಪದ ಪ್ರವಾಸ ಕಥನ (ಕನ್ನಡ).

ಕುಂಬಳೆಯ ಶಿರಿಯಾದಲ್ಲಿ ಅಪ್ಪೆ ಇಲ್ ಪ್ರಕಾಶನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಕೆಲವು ಕೃತಿಗಳನ್ನು ಪ್ರಕಾಶಿಸಿರುತ್ತಾರೆ. ಅವರ ಹಲವಾರು ಧಾರ್ಮಿಕ, ಆಧ್ಯಾತ್ಮಿಕ, ವೈಚಾರಿಕ ಲೇಖನಗಳು ಇಂಗ್ಲಿಷ್‌, ಕನ್ನಡ,  ತುಳು ಭಾಷೆಗಳಲ್ಲಿ  ಕರ್ನಾಟಕ ಮತ್ತು ಕಾಸರಗೋಡಿನ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಮೇಂಗಲೂರ್‌ ಆಂಗ್ಲ ದಿನಪತ್ರಿಕೆಯಲ್ಲಿ ಅಂಕಣಗಾರರಾಗಿಯೂ ಕೆಲಸ ನಿರ್ವಹಿಸಿರುತ್ತಾರೆ. ಹಲವಾರು ಸ್ಮರಣ ಸಂಚಿಕೆಗಳಲ್ಲೂ ಅವರ ವಿದ್ವತ್‌ಪೂರ್ಣ ಲೇಖನಗಳು ಪ್ರಕಟವಾಗಿವೆ. ಶ್ರೀ ಒಡಿಯೂರು ಸಂಸ್ಥಾನದ ದತ್ತ ಪ್ರಕಾಶನದ ದ್ವೆ„ಮಾಸಿಕದಲ್ಲಿ  ಜಯರಾಮ ರೈಯವರ ವಿವಿಧ ಲೇಖನಗಳು ಈಗಲೂ ಪ್ರಕಟವಾಗುತ್ತಿವೆ.

ಮಲಾರ್‌ ಜಯರಾಮ ರೈಯವರ ಬಹುಭಾಷಾ ವಿದ್ವತ್‌ಗೆ, ಸಾಹಿತ್ಯ ರಚನೆಗೆ, ಸಮಾಜ ಸೇವೆಗಳಿಗೆ ರಾಷ್ಟ್ರದಾದ್ಯಂತ ಹಲವಾರು ಗೌರವ ಸಮ್ಮಾನಗಳು ಜರಗಿವೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ಪ್ರಶಸ್ತಿ, ಶೇಖರ ಅಜೆಕ್ಕಾರು ಅವರ “ಮಾಧ್ಯಮ ರತ್ನ’ ಪ್ರಶಸ್ತಿ, ಶಿವರಾಮ ಕಾಸರಗೋಡು ಅವರ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ “ಗಡಿನಾಡ ಕನ್ನಡಿಗ’ ಪ್ರಶಸ್ತಿ, ಕರ್ನಾಟಕ ತುಳು ಅಕಾಡೆಮಿಯ ವತಿಯಿಂದ ಸಮ್ಮಾನ, ಅಖೀಲ ಭಾರತ ಪತ್ರಕರ್ತರ ಸಂಘದ ವತಿಯಿಂದ ಸಮ್ಮಾನ, ಕರ್ನಾಟಕ ಸಾಹಿತ್ಯ ಪರಿಷತ್ತು-ಕೇರಳ ಗಡಿನಾಡು ಘಟಕದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ, ಮುಂಬೈ ಮತ್ತು ಚೆನ್ನೈಯಲ್ಲಿ ತುಳುವರ ವತಿಯಿಂದ ಸಮ್ಮಾನ ಇತ್ಯಾದಿಗಳು ಪ್ರಮುಖವಾಗಿವೆ.

ಶಿರಿಯಾದ ಅಡ್ಕದ ಗುತ್ತು ಶಂಕರ ಭಂಡಾರಿ-ಕಾವೇರಮ್ಮ ದಂಪತಿಯರ ಸುಪುತ್ರಿ ಗೀತಾ ರೈ ಮಲಾರ್‌ ಅವರ ಸಹಧರ್ಮಿಣಿ. ಅವರ ಐದು ಮಂದಿ ಮಕ್ಕಳಲ್ಲಿ ಹಿರಿಯವ ಧರ್ಮಪ್ರಸಾದ ರೈ (ಬೆಂಗಳೂರಿನಲ್ಲಿ ಖಾಸಗಿ ಕಂಪೆನಿ ನಿರ್ವಾಹಕರು), ಸಾಯೀಶ್ವರಿ (ಒಡಿಯೂರು ಶಾಲೆಯಲ್ಲಿ ಶಿಕ್ಷಕಿ),  ಸಾಯಿಲಕ್ಷಿ$¾à( ಗೃಹಿಣಿ ಬೆಂಗಳೂರು), ಸಾಯಿಭದ್ರಾ (ಕಾಸರಗೋಡಿನಲ್ಲಿ ಪತ್ರಕರ್ತೆ), ಧನ್ಯಶ್ರೀ ಮಂಗಳೂರು ಕೆ.ಎಂ.ಸಿ.ಯಲ್ಲಿ ವಿದ್ಯಾರ್ಥಿನಿ).

– ಕೆ.ಕೇಳು ಮಾಸ್ತರ್‌ ಅಗಲ್ಪಾಡಿ 

Advertisement

Udayavani is now on Telegram. Click here to join our channel and stay updated with the latest news.

Next