ವಾಗಿ ಪುಸ್ತಕಗಳನ್ನು ಓದುವ, ಖರೀದಿಸುವ ಆಸಕ್ತಿ ಮೂಡಿರುವುದು ಸುರತ್ಕಲ್‌ನಲ್ಲಿ ನಡೆದ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಪುಸ್ತಕದ ಮಳಿಗೆಯಲ್ಲಿ ಕಂಡು ಬಂತು.
Advertisement
ಇಲ್ಲಿಯ ಗೋವಿಂದದಾಸ ಕಾಲೇಜಿನ ವಠಾರದಲ್ಲಿ ನಡೆದ ಅಕ್ಷರ ಜಾತ್ರೆಯಲ್ಲಿ ಪುಸ್ತಕ ಮಳಿಗೆ ಜನಾಕರ್ಷಣೆ ಪಡೆದುಕೊಂಡಿತು, ವಿಶೇಷವಾಗಿ ವಿದ್ಯಾರ್ಥಿ ಸಮುದಾಯವು ನೂರಾರು ಸಾಹಿತ್ಯ ಪುಸ್ತಕಗಳನ್ನು ಕುತೂಹಲದಿಂದ ಓದುತ್ತಿದ್ದರಲ್ಲದೇ, ವಿವಿಧ ಹಿರಿಯ, ಕಿರಿಯ ಲೇಖಕರ ಕವನ, ಚುಟುಕು, ಸಂಕಲನ, ಕಥೆ, ಕಾದಂಬರಿ, ನಾಟಕ, ನವ್ಯ ಸಾಹಿತ್ಯ, ಸಾಹಿತ್ಯದ ಮೂಲಕ ನೀಡುವ ಶಿಕ್ಷಣ ಮಾರ್ಗದರ್ಶಿ, ಹಾಸ್ಯ, ವಿಡಂಬನೆಯ ಸಾಹಿತ್ಯ ಪುಸ್ತಕಗಳನ್ನು ವೀಕ್ಷಿಸಿದರಲ್ಲದೇ ಕೆಲವು ವಿದ್ಯಾರ್ಥಿಗಳು ಖರೀದಿಸಿ ಸಾಹಿತ್ಯವನ್ನು ಕೊಂಡು ಓದುವ ಮೂಲಕ ಪೋಷಿಸಿದರು.
ಪುಸ್ತಕದ ಮಳಿಗೆಯೊಂದಿಗೆ, ವಿವಿಧ ವಸ್ತುಗಳ ಮಾರಾಟ ಮಳಿಗೆಯು ಗಮನ ಸೆಳೆಯಿತು. ಹಪ್ಪಳ, ಅಪ್ಪಟ ತುಳುನಾಡಿನ ದೇಶೀಯ ತಿಂಡಿ ತಿನಸು, ಮನೆ ಮದ್ದು, ಆಯುರ್ವೇದ ಔಷಧ, ತರಕಾರಿ, ಹಣ್ಣುಗಳ ಬೀಜ, ಸಿದ್ಧ ಉಡುಪುಗಳು, ಶೃಂಗಾರ ಸಾಧನಗಳು ಹಾಗೂ ವಿವಿಧ ಗೃಹೋಪಯೋಗಿ ವಸ್ತುಗಳು ಮಾರಾಟದ ಮಳಿಗೆಯನ್ನು ಅಲಂಕರಿಸಿತು.
Related Articles
ಕಾಲೇಜಿನಲ್ಲಿ ನಮ್ಮ ಓದು ಅದು ಕಡ್ಡಾಯ ಆದರೆ ಇಂತಹ ಸಾಹಿತ್ಯ ಚಟುವಟಿಕೆ ನಿರಂತರವಾಗಿ ಕ್ಯಾಂಪಸ್‌ನಲ್ಲಿ ನಡೆದರೆ, ಸಾಹಿತಿಗಳನ್ನು, ಸಾಹಿತ್ಯದ ಪುಸ್ತಕಗಳನ್ನು ನೋಡಿ ಖುಷಿ ಪಡುತ್ತೇವೆ. ಯುವ ಸಮುದಾಯವು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಅಪವಾದ ಮಾಡುವ ಬದಲು ಸಾಹಿತ್ಯದ ಕಮ್ಮಟಗಳು
ಶಿಕ್ಷಣ ಸಂಸ್ಥೆಗಳಲ್ಲಿ ನಡೆದಲ್ಲಿ ಅಭಿರುಚಿಗೆ ನೆರವು ನೀಡಿದಂತಾಗುತ್ತದೆ.
– ಭವ್ಯಾ, ಕಾಲೇಜು ವಿದ್ಯಾರ್ಥಿನಿ
Advertisement
ಬರವಣಿಗೆ ಮಾತ್ರ ಸಾಹಿತ್ಯವಲ್ಲಕೇವಲ ಪುಸ್ತಕ ಮತ್ತು ಓದು ಮಾತ್ರ ಸಾಹಿತ್ಯವಲ್ಲ, ಕೃಷಿ ಬದುಕು, ಪರಂಪರೆ, ಪ್ರಕೃತಿಯು ಸಾಹಿತ್ಯವಾಗಿದೆ. ಪುತ್ತೂರಿನಿಂದ ಇಲ್ಲಿಗೆ ಬಂದಿದ್ದೇನೆ, ಎಲ್ಲಾ ಬಗೆಯ ಕೃಷಿ ಚಟುವಟಿಕೆಯೊಂದಿಗೆ ಸಮ್ಮೇಳನದಲ್ಲಿ ಪೂರಕ ವಾತಾವರಣದಲ್ಲಿ ತರಕಾರಿ, ಬೀಜಗಳನ್ನು ಮಾರಾಟಕ್ಕಿಡುತ್ತೇನೆ, ಆಸಕ್ತರಿಗೆ ಜೇನು ಕೃಷಿ ಸಹಿತ ತೋಟಗಾರಿಕೆಯ
ಪಾಠವನ್ನು ಸಹ ಹೇಳಿಕೊಡುತ್ತೇನೆ.
– ರಾಮಣ್ಣ, ಕೃಷಿಮಿತ್ರ
ನರ್ಸರಿ, ಮುಂಡೂರು ಲಾಭವು ಇಲ್ಲ ನಷ್ಟವೂ ಇಲ್ಲ
ಸಾಹಿತ್ಯ ಸಮ್ಮೇಳನಗಳು ಜನ ಜಾತ್ರೆಯಂತೆ ನಡೆಯುತ್ತದೆ ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದರಿಂದ ಯುವ ಸಾಹಿತಿಗಳಿಗೆ, ಸಾಹಿತ್ಯ ಆಸಕ್ತರಿಗೆ ಪುಸ್ತಕಗಳನ್ನು ವೀಕ್ಷಿಸಲು ಅವಕಾಶ ಸಿಕ್ಕಂತಾಗುತ್ತದೆ. ಸಾಹಿತ್ಯ ಚಟುವಟಿಕೆಯಲ್ಲಿ ಲಾಭವು ಇಲ್ಲ, ನಷ್ಟವು ಇಲ್ಲ ಬದಲಾಗಿ ನಮ್ಮ ಆಸಕ್ತಿಗೊಂದು ವೇದಿಕೆಯಷ್ಟೇ.
– ಉಗ್ಗಪ್ಪ ಪೂಜಾರಿ,
ಸಾಹಿತಿ, ಪ್ರಕಾಶಕ, ಕೃಷಿಕ ನರೇಂದ್ರ ಕೆರೆಕಾಡು