Advertisement

ಡಿಕೆಶಿ ಸಿಎಂ ಆಗುವ ಮೊದಲೇ ಪಠ್ಯ ಪರಿಷ್ಕರಣೆಗೆ ಸಾಹಿತಿಗಳ ದುಂಬಾಲು: ಬಿ.ಸಿ. ನಾಗೇಶ್‌ ಟೀಕೆ

08:23 PM Jun 09, 2023 | Team Udayavani |

ಬೆಂಗಳೂರು: ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಆದರೆ ತಮ್ಮ ಅಜೆಂಡಾಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಕೆಲವು ಸಾಹಿತಿಗಳು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವಾಗಲೇ ಪಠ್ಯಪುಸ್ತಕ ಪರಿಷ್ಕರಣೆ ನಡೆಸಲು ದುಂಬಾಲು ಬಿದ್ದಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಟೀಕಿಸಿದ್ದಾರೆ.

Advertisement

ಶಾಸಕರ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್‌, ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವು ಸಾಹಿತಿಗಳು ಸಿದ್ದರಾಮಯ್ಯ ಅವರನ್ನು ಸುತ್ತುವರಿದು ಪರಿಷ್ಕರಣೆ ನೆಪದಲ್ಲಿ ತಮ್ಮ ಅಜೆಂಡಾವನ್ನು ಪಠ್ಯಪುಸ್ತಕಗಳಲ್ಲಿ ತುರುಕಲು ಮುಂದಾಗಿದ್ದಾರೆ.

ಸಾಹಿತಿ, ಕಮ್ಯುನಿಸ್ಟ್‌ಗಳ ಹಿತಾಸಕ್ತಿಗಳಿಗೆ ಪಠ್ಯದಲ್ಲಿ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಿಸಲಾಗಿತ್ತು. ಆದರೆ 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷವನ್ನು ಜನರು ತಿರಸ್ಕರಿಸುವ ಮೂಲಕ ಪಠ್ಯ ತಿದ್ದುಪಡಿಗೆ ರಾಜ್ಯದ ಜನ ತಮ್ಮ ಅಸಮ್ಮತಿ ಸೂಚಿಸಿದ್ದರು. ಆದರೆ ಈಗ ಮತ್ತೆ ಬರಗೂರು ರಾಮಚಂದ್ರಪ್ಪ ಮತ್ತಿತರರು ಪಠ್ಯಪುಸ್ತಕ ಪರಿಷ್ಕರಿಸುವಂತೆ ಸರಕಾರದ ಹಿಂದೆ ಬಿದ್ದಿದ್ದಾರೆಂದು ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next