Advertisement
ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ಇದರ ನೇತೃತ್ವದಲ್ಲಿ ಪೆರ್ಲದ ಹಿರಿಯ ಸಾಹಿತಿ ಹರೀಶ್ ಪೆರ್ಲ ಅವರ ಗೃಹ ಗುಲಾಬಿಯಲ್ಲಿ ಆಯೋಜಿಸಲಾಗಿದ್ದ ದೀಪಾವಳಿ- ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೋರ್ವ ವ್ಯಕ್ತಿಯ ಅಂತರಾಳದಲ್ಲೂ ಅನುಭವಗಳನ್ನು ಪ್ರತಿಬಿಂಬಿಸುವ ಭಾವನೆಗಳ ಸಾಗರ ಮೊರೆಯುತ್ತಿರುತ್ತದೆ. ಅಂತಹ ಅನುಭವ, ದೃಷ್ಟಿಗಳನ್ನು ಸಮಾಜದೊಂದಿಗೆ ಸಂವಹಿಸುವ ಪ್ರಕ್ರಿಯೆಯಾದ ಸಾಹಿತ್ಯ ಸುದೀರ್ಘ ಪರಂಪರೆ ಯೊಂದಿಗೆ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದೆ.
Related Articles
Advertisement
ಹಿರಿಯ ವ್ಯಂಗ್ಯಚಿತ್ರ ಕಲಾವಿದ-ಚುಟುಕು ಸಾಹಿತಿ ವೆಂಕಟ್ ಭಟ್ ಎಡನೀರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಚುರುಕು ಮುಟ್ಟಿಸುವ ಬರಹಗಳು ಜನರನ್ನು ಎಚ್ಚರಿಸುವ, ಹೊಸ ಚಿಂತನೆಗಳಿಗೆ ತೊಡಗಿಸಿ ಕೊಳ್ಳುವ ಶಕ್ತಿ ಸಂಪನ್ನತೆ ಹೊಂದಿದ್ದು, ಸಮಕಾಲೀನ ಬರಹಗಳಿಗೆ ಬೆಂಬಲ ವ್ಯಕ್ತವಾಗುತ್ತದೆ ಎಂದರು.
ಸವಿ ಸೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಸ್ ಪೆರ್ಲ ಉಪಸ್ಥಿತರಿದ್ದು, ವೇದಿಕೆಯ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಯುವ ಸಾಹಿತಿಗಳನ್ನು, ಕಲಾವಿದರನ್ನು ಒಕ್ಕೂಟದಲ್ಲಿ ಸಂಘಟಿಸುವ ಮೂಲಕ ಸಾಮಾಜಿಕ ನಿರಂತರತೆಯಲ್ಲಿ ತೊಡಗಿಸಿಕೊಳ್ಳುವಿಕೆಗೆ ವೇದಿಕೆ ಬದ್ಧªವಾಗಿದೆ ಎಂದರು. ಈ ಸಂದರ್ಭದಲ್ಲಿ ಸಾಹಿತಿ, ಪತ್ರಕರ್ತ ಪುರುಷೋತ್ತಮ ಭಟ್ ಕೆ. – ಅಕ್ಷತಾ ದಂಪತಿ ಪುತ್ರ ಪೃಥ್ವಿನ್ ಕೃಷ್ಣನ ಆರನೇ ಜನ್ಮ ದಿನವನ್ನು ಲಕ್ಷ್ಮಣ ಫಲದ ಸಸಿ ವಿತರಣೆಯ ಮೂಲಕ ಆಚರಿಸಲಾಯಿತು. ಪುತ್ರನ ಸಹಿತ ದಂಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರಿಗೆ ಸಸಿ ಹಸ್ತಾಂತರಿಸಿ ಚಾಲನೆ ನೀಡಿದರು.
ಭಾಗವಹಿಸಿದವರೆಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು.ಬಳಿಕ ನಡೆದ ಕವಿಗೋಷ್ಠಿಯಲ್ಲಿ ಪ್ರಮೀಳಾ ಚುಳ್ಳಿಕ್ಕಾನ, ರಿತೇಶ್ ಕಿರಣ್ ಕಾಟುಕುಕ್ಕೆ, ನಿರ್ಮಲಾ ಎಸ್. ಖಂಡಿಗೆ, ಗೋಪಾಲಕೃಷ್ಣ ಭಟ್, ಚೇತನಾ ಕುಂಬಳೆ, ಆನಂದ ರೈ ಅಡ್ಕಸ್ಥಳ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ಪುರುಷೋತ್ತಮ ಭಟ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ಮಲಾ ಎಸ್. ಖಂಡಿಗೆ ವಂದಿಸಿದರು. ಸಾಮಾಜಿಕ ಕಳಕಳಿಗೆ ಮಾದರಿ
ಸಾಮಾಜಿಕ ಕಾಳಜಿಯ ಆಚರಣೆಗಳಿಗೆ ಇದೊಂದು ಮಾದರಿಯಾಗಿದೆ. ವಾತಾವರಣದ ಸಮತೋಲನವನ್ನು ಕಾಪಿಡುವ ನಿಟ್ಟಿನಲ್ಲಿ ಚರ್ಚೆಗಳು-ಕಾರ್ಯಯೋಜನೆಗಳು ಜಾರಿಯಲ್ಲಿರುವ ಇಂದು ಮಗುವಿನ ಜನ್ಮ ದಿನಾಚರಣೆಯನ್ನು ಪ್ರಕೃತಿಯೊಂದಿಗೆ ಸ್ಪಂದಿಸುವ ರೂಪದಲ್ಲಿ ಆಚರಿಸಿರುವುದು ಪತ್ರಕರ್ತ ಮತ್ತು ಕವಿ ಮನಸ್ಸಿನ ಬದ್ಧªತೆಯ ಸಂಕೇತ.
-ರಾಧಾಕೃಷ್ಣ ಕೆ. ಉಳಿಯತ್ತಡ್ಕ