Advertisement
ಮನದ ಭಾವನೆಗಳಿಗೆ ಬರಹ ರೂಪ ನೀಡಿ, ಸಂಬಂಧ ಬೆಸೆಯುವ ವಿಶೇಷ ಶಕ್ತಿ ಸಾಹಿತ್ಯಕ್ಕಿದೆ. ರವಿ ಕಾಣದ್ದನ್ನು ಕವಿ ಕಂಡ- ಎಂಬ ಮಾತಿನ ತಾತ್ಪರ್ಯದಂತೆ ನೈಜತೆಯನ್ನು ಬಿಂಬಿಸುವ ಶಕ್ತಿ-ಯುಕ್ತಿ ಕವಿ ಹೃದಯಕ್ಕಿದೆ.
Related Articles
Advertisement
ಡಿ.ವಿ.ಜಿ. ಒಂದು ಕಡೆಯಲ್ಲಿ ಹೇಳುತ್ತಾರೆ- ನಗುವೊಂದು ರಸಪಾಕ- ಅಳುವೊಂದು ರಸಪಾಕ-ನಗು ಆತ್ಮ ಪರಿಮಳವ ಪಸರಿಸುವ ಕುಸುಮ- ದುಗುಡ ಆತ್ಮವ ಕಳೆದು ಸತ್ವವೆತ್ತುವ ಮಂತು- ಹೀಗೆ ತನ್ನ ಸಾಹಿತ್ಯ ಭಾಷೆ ಯÇÉೇ ಜೀವನದ ನೋವು-ನಲಿವಿನ ಚಿತ್ರಣವನ್ನು ಅಮೋಘವಾಗಿ ಚಿತ್ರಿಸಿ¨ªಾರೆ. ಇನ್ನೊಂದೆಡೆ ಸಾಹಿತ್ಯದ ಕಂಪನ್ನು ಆಸ್ವಾದಿಸುತ್ತ ಹೋದಂತೆ, ಹತ್ತೆಡೆಯಲ್ಲಿ ತೋಡಿ ಬರಲಿಲ್ಲ ನೀರು ಎಂದೆನಬೇಡ, ಒಂದೆಡೆಯಲ್ಲಿ ತೋಡಿ ಹತ್ತೆಡೆಯಷ್ಟು ಇಂಚು ಉದಕವು ಬರುವುದು ನೋಡ- ಎನ್ನುತ್ತಾರೆ ಕವಿಗಳು. ಜೀವನವೆಂಬ ಪ್ರವಾಹದಲ್ಲಿ ನಾವು ವಿರುದ್ಧವಾಗಿ ಈಜಲೇಬೇಕು. ದಡದಿಂದ ದಡಕ್ಕೆ ದಾಟಲೇಬೇಕು. ಜೀವಂತ ಮತ್ಸ್ಯದ ಜೀವಂತಿಕೆ ಇರಬೇಕು- ಬದುಕಿನ ಕುರಿತಾದ ಒಂದು ಸಾಲು. ಇನ್ನೂ ಅವಲೋಕಿಸುತ್ತ ಹೋದಂತೆ ಮಳೆಗಾಲದೊಳು ನೀನು ಹಾಡುವುದಿಲ್ಲವೇ? ಪಿಕವನ್ನು ಕೇಳಿತು ಶುಕವು; ಕಪ್ಪೆಗಳು ವಟಗುಟ್ಟುವೆಡೆಯೊಳು ಮೌನವೇ ಲೇಸೆಂದಿತು ಪಿಕವು- ಹೀಗೆ ನೇರವಾಗಿ ಹೇಳುವ ಮಾತುಗಳನ್ನೇ ವಿಭಿನ್ನವಾದ ಮಾತಿನ ಮೂಲಕ ತಿಳಿಸಿ ವಾಸ್ತವತೆಯನ್ನು ಅರ್ಥೈಸುವ ಪರಿ ಇದು. ಮಾತನಾಡುವ ಕಲೆ-ಬದುಕುವ ಕಲೆಗಳ ಕುರಿತಾದ ಸಾಹಿತ್ಯ ಲಹರಿಯ ಆಲಾಪನೆಯಿದು. ಆಸಕ್ತಿಯುತವಾಗಿ ಜೊತೆಗೆ ಗುರುತಿನ ಪ್ರತೀಕವಾಗಿ ಕೈಜೋಡಿಸುವ ಚತುರತೆಯನ್ನು ಸಾಹಿತ್ಯ ಬೆಳೆಸುತ್ತದೆ.
ಮೇಲಿನ ಸಾಲುಗಳೆಲ್ಲವೂ ಕವಿವರ್ಯರ ಪದಪುಂಜಗಳ ಮಾಲೆಯಿಂದ ಜೋಡಣೆಯಾಗಿ ಇಂದಿಗೂ ಎಲ್ಲರ ಮನೆಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವಂಥವುಗಳು. ಇವೆಲ್ಲ ಕೇವಲ ನಿದರ್ಶನಗಳಷ್ಟೇ. ಸಾಹಿತ್ಯದತ್ತ ಒಲವು ತೋರಿಸಬೇಕಾದ ಯುವಜನತೆಗೆ ಇದೊಂದು ಸಣ್ಣ ಮಾರ್ಗ. ದುರದೃಷ್ಟ ಎಂದರೆ ಯೋಚಿಸಬೇಕಾದ ಮನಸುಗಳಿಗೆ ಯೋಚಿಸಲು ಸಮಯವಿಲ್ಲ. ಪುಸ್ತಕ ಹಿಡಿಯಬೇಕಾದ ಪುಟ್ಟ ಕೈಗಳಲಿ ಮೊರದಗಲದ ಜಂಗಮವಾಣಿಗಳು ಲಗ್ಗೆ ಇಟ್ಟಿವೆ. ಇಂದು ಲೇಖನ-ಕವಿತೆ ಬರೆಯಲು ಕಷ್ಟವೇ ಇಲ್ಲ. ಕಾರಣ ಕುಳಿತÇÉೇ ಜಾಲತಾಣದ ಮೂಲಕ ಪದಗಳನೊಂದಾಗಿಸುವ ವ್ಯವಸ್ಥೆಯಿದೆ. ಆದರೆ, ಸಾವಿರಕ್ಕೆ ಹತ್ತು ವಿದ್ಯಾರ್ಥಿಗಳಲ್ಲಿ ಮಾತ್ರ ಸಾಹಿತ್ಯದ ಮೇಲಿನ ಒಲವು ಕಂಡುಬರುತ್ತಿದೆ. ಆಲಸ್ಯತನದ ಮಂಜು ಕವಿದಿದೆ. ಯೋಚಿಸಲು ಸಹಕರಿಸಬೇಕಾದ ಜಾಲತಾಣಗಳು ಯೋಚನೆಯ ಬದಲು ಮತ್ಯಾವುದನ್ನೋ ಅನಗತ್ಯ ವಿಚಾರಗಳತ್ತ ಯೋಚಿಸುವಂತೆ ಪ್ರೇರೇಪಿಸುತ್ತಿದೆ. ಸಾಹಿತ್ಯ ಲೋಕವನ್ನು ಬೆಳೆಸಬೇಕಾದ ಕುಸುಮಗಳು ಯಾವುದೋ ಒಂದು ಅನಗತ್ಯ ಪೊರೆಯನ್ನು ಹೊದ್ದುಕೊಂಡು ಯಾರಿಗೂ ಕಾಣದಂತೆ ನಿರಾಸಕ್ತಿಗಳಾಗಿ ಗೋಚರಿಸುತ್ತಿವೆ.
ಈ ಸಾಹಿತ್ಯ ಲೋಕ ಒಬ್ಬ ವ್ಯಕ್ತಿಯನ್ನು ಸಾಮಾಜಿಕವಾಗಿ ಗುರುತಿಸುವುದು ಮಾತ್ರವಲ್ಲದೆ ಕೌಶಲ್ಯ-ಜ್ಞಾನ ಭಂಡಾರ- ಶಬ್ದಭಂಡಾರಗಳನ್ನು ಹೆಚ್ಚಿಸುತ್ತವೆ. ಪದಪುಂಜಗಳೊಡನೆ ಆಟವಾಡಿಕೊಂಡು, ಸಮಯವನ್ನು ಸುಸೂತ್ರವಾಗಿ ಬಳಸಿಕೊಳ್ಳಲು ಸಹಕರಿಸುತ್ತದೆ. ಗಳಿಕೆಯೊಡನೆ ಕಲಿಕೆ ಎಂಬುದಿದ್ದರೆ ಆ ಮಾತು ಬಹಳ ಅರ್ಥವತ್ತಾಗಿ ಹೋಲಿಕೆಯಾಗುವ ಕ್ಷೇತ್ರ ಎಂದರೆ ಅದೊಂದೇ ಸಾಹಿತ್ಯಿಕ ಕ್ಷೇತ್ರ. ಸಾಹಿತ್ಯ ಕಲೆ ಒಲಿಯಬೇಕು ಎಂದರೆ ಅದು ದಾರಿಯಲ್ಲಿ ಸಿಗುವ ವಸ್ತುವಂತೂ ಖಂಡಿತ ಅಲ್ಲ. ಮೊದಲನೆಯ ಸಲದ ಗೀಚುವಿಕೆ, ಎರಡನೆಯ ಸಲದ ಬರೆಯುವಿಕೆಯ ಪ್ರಯತ್ನ ಜೊತೆಗೆ ಅಗಾಧ ಮಟ್ಟದ ಓದುವಿಕೆ ನಿಧಾನವಾಗಿ ಒಬ್ಬ ಪರಿಪೂರ್ಣ ಕವಿ-ಲೇಖಕನನ್ನು ಸೃಷ್ಟಿಸಲು ಸಾಧ್ಯ. ಆದರೆ, ಯಾವ ಕಾರ್ಯದಲ್ಲೂ ಯಶಸ್ವಿ ವ್ಯಕ್ತಿಯಾಗಬೇಕಾದರೆ ಆಸಕ್ತಿ, ಏಕಾಗ್ರತೆ, ಛಲ ಇರಲೇಬೇಕು.
ಪ್ರಜ್ಞಾ ಬಿ. ದ್ವಿತೀಯ ಪತ್ರಿಕೋದ್ಯಮ ವಿಭಾಗ.
ಎಸ್‌ಡಿಎಮ್ ಕಾಲೇಜು, ಉಜಿರೆ