Advertisement
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಣಿಪುರ ಗ್ರಾಮ ಹಾಗೂ ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಯಾರು, ಬಾಳ, ಗಂಜಿಮಠ, ಗುರುಪುರ, ಜೋಕಟ್ಟೆ, ಕಂದಾ ವರ, ಕುಪ್ಪೆಪದವು, ಮೂಡುಶೆಡ್ಡೆ, ಮುಚ್ಚಾರು, ನೀರುಮಾರ್ಗ, ಮೂಲ್ಕಿ ತಾಲೂಕಿನ ಬಳ್ಳುಂಜೆ, ಕೆಮ್ರಾಲ್, ಕಿಲ್ಪಾಡಿ, ಉಳ್ಳಾಲ ತಾಲೂಕಿನ ಅಂಬ್ಲಿ ಮೊಗರು, ಬೋಳಿಯಾರು, ಹರೇಕಳ, ಕಿನ್ಯಾ, ಕೊಣಾಜೆ, ಮಂಜನಾಡಿ ಗ್ರಾ.ಪಂ.ಗಳ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸಲಾಗುವುದು.
ವಯಸ್ಕರ ಶಿಕ್ಷಣ ಇಲಾಖೆ ನಡೆಸುವ ಈ ಕಾರ್ಯ ಕ್ರಮಕ್ಕೆ ಜಿ.ಪಂ. ಅನುದಾನ ಒದಗಿಸಲಿದೆ. ಗ್ರಾ.ಪಂ.ಗಳ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಾಭ್ಯಾಸ ಮಾಡಿ ಸಲು ಸ್ಥಳೀಯ ಬೋಧಕರನ್ನೇ ಆಯ್ಕೆ ಮಾಡ ಲಾಗುತ್ತದೆ. ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರು, ಶಾಲಾ/ಕಾಲೇಜು ಶಿಕ್ಷಕ, ಉಪನ್ಯಾಸಕರು ಅಥವಾ ಕಾಲೇಜು ವಿದ್ಯಾರ್ಥಿಗಳನ್ನು ಬೋಧಕರಾಗಿ ನೇಮಿಸಿ ಅವರ ಮೂಲಕ ಅನಕ್ಷರಸ್ಥರಿಗೆ ಅಕ್ಷರ ಕಲಿಸಲಾಗುತ್ತದೆ.
Related Articles
2023 24ನೇ ಸಾಲಿನ ಜಿ.ಪಂ. ಲಿಂಕ್ ಡಾಕ್ಯೂಮೆಂಟ್ ಕಾರ್ಯಕ್ರಮ ಅನುಷ್ಠಾನಕ್ಕೆ ಇನ್ನೂ ಸರ್ವೇ ಕಾರ್ಯ ಆರಂಭವಾಗಿಲ್ಲ. ಸದ್ಯ ಇಲಾಖೆಯಲ್ಲಿರುವುದು 2011ರ ಜನಗಣತಿಯ ಮಾಹಿತಿ. ಆದರೆ ಉಭಯ ಜಿಲ್ಲೆಯಲ್ಲಿ ಅನಕ್ಷರತೆ ಪ್ರಮಾಣ ಕಡಿಮೆ ಇರುವುದರಿಂದ ಗುರಿ ತಲುಪುವುದು ಸುಲಭವಾದರೂ ಸ್ಥಳೀಯವಾಗಿ ಸಮೀಕ್ಷೆ ಅಗತ್ಯವಿದೆ. ಈ ಸಮೀಕ್ಷೆ ಮಾಡಿದ ಅನಂತರವೇ ಕಾರ್ಯಕ್ರಮ ಅನುಷ್ಠಾನ ಸಾಧ್ಯ. ಈ ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯಲ್ಲಿ 42 ಹಾಗೂ ದ.ಕ. ಜಿಲ್ಲೆಯಲ್ಲಿ ಸುಮಾರು 850 ಅನಕ್ಷರಸ್ಥರಿಗೆ ಅಕ್ಷರಾಭ್ಯಾಸದ ಗುರಿ ಹೊಂದಲಾಗಿದೆ.
Advertisement
1,000 ಗ್ರಾ.ಪಂ. ಸಾಕ್ಷರತೆರಾಜ್ಯ ಸರಕಾರದ ಸಾವಿರ ಗ್ರಾ.ಪಂ. ಸಾಕ್ಷರತೆ ಯೋಜನೆಯಡಿ ಉಡುಪಿ ಜಿಲ್ಲೆಯ ಪ್ರತೀ ಬ್ಲಾಕ್‌ನ 5 ಗ್ರಾ.ಪಂ.ನಂತೆ 25 ಗ್ರಾ.ಪಂ.ಗಳನ್ನು ಗುರುತಿಸಲಾಗಿದೆ. ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಹಾಗೂ ಪುತ್ತೂರು ತಾಲೂಕಿನ 16 ಗ್ರಾ.ಪಂ.ಗಳನ್ನು ಗುರುತಿಸ ಲಾಗಿದೆ. ಅನಕ್ಷರಸ್ಥರನ್ನು ಗುರುತಿಸಲು ಆಯ್ಕೆಯಾದ ವ್ಯಕ್ತಿಗೆ ಪ್ರತೀ ಅನಕ್ಷರಸ್ಥರನ್ನು ಗುರುತಿಸಿರುವುದಕ್ಕೆ 15 ರೂ. ನೀಡಲಾಗುತ್ತದೆ. ಬೋಧಕರಿಗೆ 5 ತಿಂಗಳಿಗೆ 2,500 ರೂ. ವೇತನ ನೀಡಲಾಗುತ್ತದೆ. ಅನಕ್ಷರಸ್ಥರಿಗೆ ಸಂಬಂಧಿಸಿ ನಿಖರವಾದ ಅಂಕಿ- ಅಂಶ ವಿಲ್ಲ. 2011ರ ಜನಗಣತಿ ಮಾಹಿತಿಯ ಆಧಾರದಲ್ಲೇ ಕಾರ್ಯ ಕ್ರಮ ಬರುತ್ತಿದೆ. ಸ್ಥಳೀಯವಾಗಿ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಾ ಭ್ಯಾಸ ಮಾಡಿಸಿ ಪ್ರಮಾಣಪತ್ರ ನೀಡಲಾಗುತ್ತದೆ. ಸ್ಥಳೀಯ ಬೋಧಕರನ್ನೇ ನೇಮಿಸುತ್ತೇವೆ. ಕೇಂದ್ರ ಸರಕಾರದ ನವ ಭಾರತ ಸಾಕ್ಷರತ ಯೋಜನೆಯು ಉಲ್ಲಾಸ್ ಆ್ಯಪ್ ಮೂಲಕ ನಡೆಯುತ್ತಿದೆ.
– ಯೋಗ ನರಸಿಂಗಸ್ವಾಮಿ ಕೆ.ಎಂ., ಲೋಕೇಶ್,
ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ, ಉಡುಪಿ, ದ.ಕ.