ಯಾರದ್ದೂ ಭಯವಿಲ್ಲದ ಕಾಲವದು. ಲಂಗು ಲಗಾಮು ಇಲ್ಲದೆ ಹುಡುಗಿಯ ಜೊತೆ ಸುತ್ತುತ್ತಿದ್ದ ದಿನಗಳವು. ಪ್ರೀತಿಯಲ್ಲಿ ಬಿದ್ದವರಿಗೆ ಲೋಕಾನೇ ಕಾಣಿಸೋದಿಲ್ಲ ಅನ್ನೋದು ಸತ್ಯ ಅನಿಸಿದ್ದು ಆ ದಿನಗಳಲ್ಲೇ.
ಆ ಸಿಟಿ ಬಸ್‌ಸ್ಟಾಂಡ್ ಅನ್ನೋದು ನಮ… ಪ್ರೀತಿಯ ಅಡ್ಡಾ ಆಗಿತ್ತು. ಕ್ಲಾಸ್‌ನಲ್ಲಿ ಅವಳ ಜತೆ ಮಾತಾಡೋಕೆ ಆಗ್ಲಿಲ್ಲ ಅಂದ್ರೆ, ನನ್ನ ನಡೆ ಸಿಟಿ ಬಸ್‌ಸ್ಟಾಂಡ್ ಕಡೆ! ಅಲ್ಲಿ ಎಷ್ಟು ಹೊತ್ತು ಮಾತಾಡುತ್ತಾ ನಿಂತರೂ ನಮ್ಮನ್ನ ಕೇಳ್ಳೋರೇ ಇರಲಿಲ್ಲ. ನಮ್ಮಿಬ್ಬರ ಪಿಸುಮಾತುಗಳನ್ನು ಕಿವಿಕೊಟ್ಟು ಕೇಳುತ್ತಿದ್ದಿದ್ದು ಇದೇ ಬಸ್ ಸ್ಟಾಂಡ್.
ನಮ್ಮ ಕಾಲೇಜಿನಿಂದ ಬಸ್‌ಸ್ಟಾಂಡ್‌ಗೆ ಎರಡು ಕಿ. ಮೀ ದೂರ ಇರಬಹುದು. ಅಷ್ಟು ದೂರ ಹುಡುಗಿ ಜತೆ ಹರಟುತ್ತಾ ನಡೆದರೆ ದಾರಿ ಸಾಗಿದ್ದೇ ಗೊತ್ತಾಗುತ್ತಿರಲಿಲ್ಲ. ನಿಜ ಹೇಳಬೇಕು ಅಂದ್ರೆ, ಅವಳು ಪರಿಚಯವಾಗುವವರೆಗೂ ಬಳ್ಳಾರಿ ಬಿಸಿಲೆಂದಂರೇನೆ ನನಗೆ ಅಲರ್ಜಿ ಆಗ್ತಿತ್ತು. ಆದ್ರೆ ಅವಳ ಜೊತೆಗಿದ್ದರೆ ಸುಡುವ ಬಿಸಿಲು ಕೂಡ ಮುಂಗಾರು ಮಳೆ ನಿಂತ ಮೇಲೆ ಬೀಸುವ ತಂಗಾಳಿಯಂತೆ ತೋರುತ್ತಿತ್ತು.
ನಾನು, ನನ್ನದು ಎಂಬ ನನ್ನ ಸ್ವಾರ್ಥ ತಪ್ಪೆಂದು ತಿದ್ದಿ ಹೇಳಿದವಳು ನನ್ನ ಹುಡುಗಿ. ಕತ್ತಲು ಆವರಿಸಿಕೊಂಡಿದ್ದ ಮನಸ್ಸಲ್ಲಿ ದೀಪ ಹಚ್ಚಿ ಬೆಳಕು ಚೆಲ್ಲಿದಳು ಅವಳು.
ನಿನ್ ಜೀವನದಲ್ಲಿ ಯಾರೇ ಬರಲಿ, ಯಾರೇ ಹೋಗಲಿ. ನಾನು ಕೊನೆಯ ತನಕ ಜೊತೆಗಿರಿ¤àನಿ ಅಂತ ಆಣೆ ಮಾಡಿದ ಪೆದ್ದು ಹುಡುಗಿ. ಆದ್ರೆ ಮುಂದೆ ನಡೆಯೋದು ಅವಳ ಅರಿವಿಗೆ ಬಂದಿರಲಿಲ್ಲ ಅನ್ಸುತ್ತೆ. ನೋಡು ನೋಡ್ತಿದ್ದಂಗೇನೇ ಅವಳಿಗೆ ಬೇರೆ ಯಾರ ಜೊತೇನೋ ಮದುವೆ ಫಿಕÕ… ಆಯ್ತು . ಅವಳು ನನ್ನ ಹತ್ತಿರ ಬಂದು ಹೇಳಿದ ಕೊನೇ ಮಾತು ನನಗೆ ಇಂದಿಗೂ ನೆನಪಿದೆ; “ಪ್ಲೀಸ್ ನನ್ನನ್ನ ಮರೆತು ಬಿಡು’…
ಆಗ ಅವಳ ಕಣ್ಣಲ್ಲಿ ಕಂಬನಿ ಕಂಡ ನನಗೆ ಜೀವನ ಭಾರ ಅನಿಸಿತು. ಅಂದು ನನ್ನ ಬೆನ್ನಿಗೆ ನಿಂತದ್ದು ನನ್ನ ಗೆಳೆಯರ ಬಳಗ. ಅವರೆಲ್ಲ ಇಲ್ಲದಿದ್ದರೆ ಇಂದು ನಾನು ಎಲ್ಲಿರುತ್ತಿದ್ದೆನೋ ನಂಗೇ ತಿಳಿಯದು. ಇವತ್ತಿಗೂ ಬಳ್ಳಾರಿಗೆ ಹೋದ್ರೆ ಯಾಕೋ ಒಮ್ಮೆ ಆ ಬಸ್‌ಸ್ಟಾಂಡ್‌ನಲ್ಲಿ ಕೂತು ಆ ಸುಂದರ ಕ್ಷಣಗಳನ್ನು ನೆನೆಯತ್ತಿರುತ್ತೇನೆ. ಆ ದಿನಗಳನ್ನು ಮರೆಯಲು ಯಾವತ್ತಿಗೂ ಸಾಧ್ಯವಿಲ್ಲ….
ಮೈಲಾರಿ ಸಿಂಧುವಾಳ