Advertisement

ಸಂಗೀತ ಕೇಳ್ತಾ ಕೇಳ್ತಾನೇ 5 ಕಿ.ಮೀ. ಮ್ಯಾರಥಾನ್‌ ಓಡಿ..!

12:29 PM Aug 02, 2017 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಮ್ಯಾರಥಾನ್‌ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಇಷ್ಟು ದಿನ ನೀವು 10ಕೆ ಮ್ಯಾರಥಾನ್‌ ಓಡಿದ್ದೀರಿ. ನಿಮಗೆ ಅದರ ಅನುಭವವೂ ಇದೆ. ಈಗ ನಿಮಗಾಗಿ ಹೊಸ ರೀತಿಯಲ್ಲಿ ಮ್ಯಾರಥಾನ್‌ ಓಟವನ್ನು ಆಯೋಜಿಸಲಾಗಿದೆ. ಅದೇನೆಂದರೆ ಹಾಡು (ಸಂಗೀತ) ಕೇಳ್ತಾ ಕೇಳ್ತಾ ಓಡುವುದು. ಒಟ್ಟಾರೆ 5 ಕಿ.ಮೀ. ಓಟವಾಗಿದ್ದು ವಿನೂತನ ಶೈಲಿಯಲ್ಲಿ ಸಂಘಟಕ ವಿಶಾಲ್‌ ಕೂಟ ಆಯೋಜಿಸಲು ನಿರ್ಧರಿಸಿದ್ದಾರೆ. ಅ.19ರಂದು ಬೆಂಗಳೂರಿನ ದೇವನಹಳ್ಳಿ ಸಮೀಪದ ಕ್ಲಾರ್ಕ್‌ ಎಕೊಟಿಕ ರೆಸಾರ್ಟ್‌ ಸಮೀಪ ಮ್ಯಾರಥಾನ್‌ ಆಯೋಜಿಸಲಾಗಿದೆ. ಕಳೆದ ಸಲವೂ ಕೂಟ ನಡೆದಿತ್ತು. ಆಗ ಒಟ್ಟಾರೆ 7 ಸಾವಿರ ಮಂದಿ ಭಾಗವ ಹಿಸಿದ್ದರು. ಈ ಬಾರಿ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

Advertisement

ಏನಿದು “ಮ್ಯೂಸಿಕ್‌’ ಮ್ಯಾರಥಾನ್‌?: ಒಟ್ಟು 5 ಕಿ.ಮೀ.ನ ಒಟ್ಟಾರೆ ರೇಸ್‌ ಇದು. ಒಟ್ಟು 5 ಟ್ರ್ಯಾಕ್‌ ಇರುತ್ತದೆ. ನಿಮಗೆ ಯಾವ ಮ್ಯೂಸಿಕ್‌ ಬೇಕು ಅನ್ನುವುದನ್ನು ನೀವು ಆಯ್ದುಕೊಳ್ಳಬಹುದು. ಇದಕ್ಕಾಗಿ ಮ್ಯೂಸಿಕ್‌ ವೊಟಿಂಗ್‌ ಆ್ಯಪ್‌ವೊಂದನ್ನು ತೆರೆಯಲಾಗಿದೆ. ಇಲ್ಲಿ ನಿಮ್ಮ ಆಯ್ಕೆಗೆ ಅವಕಾಶ ಇದೆ. ಹಿಪ್‌ಹಪ್‌, ರಾಕ್‌, ಓಲ್ಡ್‌ ಸ್ಕೂಲ್‌, ಡ್ಯಾನ್ಸ್‌ ಹಾಗೂ ಪಾಪ್‌ ಸಂಗೀತವಿರುತ್ತದೆ. ಇದಕ್ಕಾಗಿ ಸುಮಾರು 5 ಕಿ.ಮೀ.ವರೆಗೆ ಬೃಹತ್‌ ಧ್ವನಿ ವರ್ಧಕಗಳನ್ನು ಅಳವಡಿಸಲಾಗಿದೆ.  ಕಿ.ಮೀ.ಗೊಂದರಂತೆ ಹಾಡುಗಳು ಬದಲಾಗುತ್ತದೆ. ಓಡುವ ನಿಮಗೆ ಜೋಶ್‌ ಹೆಚ್ಚಿಸುತ್ತದೆ. ಮಾತ್ರವಲ್ಲ ಥ್ರಿಲ್‌ ಹೆಚ್ಚಿಸುತ್ತದೆ ಎಂದು ಸಂಘಟಕ ವಿಶಾಲ್‌ ಪ್ರತಿಕ್ರಿಯಿಸಿದ್ದಾರೆ. ಕೂಟಕ್ಕೆ ಖ್ಯಾತ ಡಿಜೆ ಆಸೀಸ್‌ನ ಶಾನ್‌ ಹಾಗೂ ಡಿಜೆ ಜಯೆಡನ್‌ ಪ್ರದರ್ಶನ ನೀಡುವ ಮೂಲಕ ತಾರಾ ಮೆರುಗು ನೀಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next