Advertisement

List of world scientists : ಧಾರವಾಡ ಐಐಟಿಯ ಇಬ್ಬರಿಗೆ ಸ್ಥಾನ

08:38 PM Oct 12, 2023 | Team Udayavani |

ಧಾರವಾಡ : ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿರುವ ವಿಶ್ವದ ಅಗ್ರ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಡಾ. ಎಸ್. ಬಸವರಾಜಪ್ಪ ಮತ್ತು ಡಾ. ಅಮರನಾಥ ಹೆಗ್ಡೆ ಸ್ಥಾನ ಪಡೆದಿದ್ದಾರೆ.

Advertisement

ಸ್ಟ್ಯಾನ್ ಫೋರ್ಡ ವಿಶ್ವವಿದ್ಯಾನಿಲಯ ಮತ್ತು ಎಲೆವಿಯರ್ ಪಬ್ಲಿಕೇಶನ್ ನ ಸಹಯೋಗದೊಂದಿಗೆ ವಿಶ್ವದ ಅಗ್ರ ಶೇ..2 ರಷ್ಟು ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಶ್ರೇಯಾಂಕಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್ ಇಂಡೆಕ್ಸ್, ಐ-ಟೆನ್, ಇಂಡೆನ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಮತ್ತು ಇತರ ಸಂಯೋಜಿತ ಗ್ರಂಥಮಾಪಕ ಅಂಕಿ-ಸಂಖ್ಯೆ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಶ್ರೇಯಾಂಕ ಪಟ್ಟಿಯನ್ನು ೨೦೧೮ ರಿಂದ ಬಿಡುಗಡೆ ಮಾಡಲಾಗುತ್ತಿದೆ.

ಡಾ. ಎಸ್. ಬಸವರಾಜಪ್ಪ, ಐಐಟಿ ಧಾರವಾಡದ ರಿಜಿಸ್ಟ್ರಾರ್‌ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರಿಗೆ ಅವರು 129 ಲೇಖನಗಳನ್ನು ಪ್ರಕಟಿಸಿದ್ದಾರೆ. 2023 ರ ಸ್ಟ್ಯಾನ್ ಫೋರ್ಡ ವಿಶ್ವವಿದ್ಯಾಲಯದ ಅಗ್ರ 2% ವಿಜ್ಞಾನಿಗಳಲ್ಲಿ ವಾರ್ಷಿಕ ಶ್ರೇಯಾಂಕ ಜತೆಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನರ್ಹವಾಗಿದೆ. ವಸ್ತುಗಳು, ಯಾಂತ್ರಿಕ ಮತ್ತು ಸಾರಿಗೆ ಎಂಜಿನಿಯರಿಂಗ್ ಅವರ ಸಂಶೋಧನಾ ಕ್ಷೇತ್ರಗಳು ಈ ಹಿಂದೆಯೂ ಕೂಡ 2020 ಮತ್ತು 2021 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ಇನ್ನು ಡಾ. ಅಮರನಾಥ ಹೆಗ್ಡೆ ಸಿವಿಲ್ ಮತ್ತು ಜೀಯೋ ಟೆಕ್ನಿಕಲ್ ಕುರಿತು ಪರಿಣತಿ ಹೊಂದಿದ್ದು,46 ಪ್ರಕಟಣೆಗಳೊಂದಿಗೆ, ಪ್ರಸ್ತುತ ವರ್ಷದ ಸ್ಟ್ಯಾನ್ ಫೋರ್ಡ ವಿಶ್ವವಿದ್ಯಾಲಯದ ಅಗ್ರ 2 ವಿಜ್ಞಾನಿಗಳಲ್ಲಿ ಶ್ರೇಯಾಂಕ ಪಡೆದಿದ್ದಾರೆ. ಜಿಯೋಟೆಕ್ನಿಕಲ್ ಇಂಜಿನಿಯರಿಂಗ್, ಜಿಯೋಸಿಂಥೆಟಿ ಮತ್ತು ಗೌಂಡ್ ಇಂಪ್ಯೂವೆಂಟ್ಸ್ , ಕಂಪ್ಯೂಟೇಶನಲ್ ಜಿಯೋಟೆಕ್ನಿಕ್ಸ್ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರಗಳು.

Advertisement

Udayavani is now on Telegram. Click here to join our channel and stay updated with the latest news.

Next