ದೋಹಾ: ವಿಶ್ವದ ಫುಟ್ಬಾಲ್ ಜಾತ್ರೆ ಫಿಫಾ ವಿಶ್ವಕಪ್ ಮತ್ತೆ ಬಂದಿದೆ. ಇದೇ ಮೊದಲ ಬಾರಿಗೆ ಕತಾರ್ ಈ ಬೃಹತ್ ಕೂಟದ ಆತಿಥ್ಯ ವಹಿಸುತ್ತಿದೆ. ಕೂಟಕ್ಕಾಗಿ ಕತಾರ್ ದೇಶವು ಸಾಕಷ್ಟು ತಯಾರಿ ಮಾಡಿಕೊಂಡಿದೆ. ವಿನೂತನ ಸ್ಟೇಡಿಯಂಗಳನ್ನು ನಿರ್ಮಿಸಿದ್ದು, ವಿಶ್ವದ ಫುಟ್ಬಾಲ್ ಅಭಿಮಾನಿಗಳ ಹೊಸ ಅನುಭವ ನೀಡಲಿದೆ.
ಆದರೆ ಕಾಲ್ಚೆಂಡು ಕೂಟಕ್ಕಾಗಿ ಕತಾರ್ ಗೆ ಭೇಟಿ ನೀಡುವ ಅಭಿಮಾನಿಗಳು ಸಾಕಷ್ಟು ನಿಷೇಧಗಳು ಮತ್ತು ಕಟ್ಟುನಿಟ್ಟಾದ ಮಾರ್ಗಸೂಚಿಗಳ ಬಗ್ಗೆ ಅರಿವು ಹೊಂದಿರಬೇಕು. 2022 ಫಿಫಾ ವಿಶ್ವಕಪ್ ಸಮಯದಲ್ಲಿ ಕತಾರ್ ನಲ್ಲಿ ನಿಷೇಧಿಸಲಾದ ವಸ್ತುಗಳ ಪಟ್ಟಿ ಇಲ್ಲಿದೆ.
ಯಾವುದೇ ಅಭಿಮಾನಿಯು ಲೈಂಗಿಕ ಆಟಿಕೆಗಳೊಂದಿಗೆ (ಟಾಯ್) ಸಿಕ್ಕಿಬಿದ್ದರೆ, ಭಾರೀ ದಂಡ ಅಥವಾ ಜೈಲು ಶಿಕ್ಷೆಯಾಗಬಹುದು. ಈ ವಸ್ತುಗಳನ್ನು ಕತಾರ್ ಗೆ ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ:ಜೈಲಿನಲ್ಲಿ ಮಸಾಜ್ ಸೇವೆ: ಆಪ್ ಸಚಿವ ಸತ್ಯೇಂದರ್ ಜೈನ್ ವಿಡಿಯೋ ವೈರಲ್
ಕತಾರ್ ನಲ್ಲಿ ಹಂದಿ ಮಾಂಸ ಸೇವನೆ ನಿಷೇಧ ಮಾಡಲಾಗಿದೆ. ನೀವು ಪೋರ್ಕ್ ಪ್ರೇಮಿಯಾಗಿದ್ದು ಕತಾರ್ ಫುಟ್ಬಾಲ್ ವಿಶ್ವಕಪ್ ಗೆ ಹೋಗಬಯಸುವುದಾದರೆ ನಿಮಗೆ ಕಷ್ಟವಾಗಬಹುದು. ಇಸ್ಲಾಂ ದೇಶವಾಗಿರುವ ಕತಾರ್ ನಲ್ಲಿ ಪೋರ್ಕ್ ನಿಷೇಧಿಸಲಾಗಿದೆ.
ಬಿಯರ್ ಮತ್ತು ಮದ್ಯ ನಿಷೇಧಿಸಲಾಗಿದೆ. ದೋಹಾದಲ್ಲಿ ಬಂದಿಳಿಯುವ ಪ್ರವಾಸಿಗರಿಗೆ ಡ್ಯೂಟಿ ಫ್ರಿ ಮದ್ಯವನ್ನು ಸಾಗಿಸಲು ಅನುಮತಿ ನೀಡಲಾಗುವುದಿಲ್ಲ. ಪಂದ್ಯದ ಮೊದಲು ಮತ್ತು ನಂತರ ಬಿಯರ್ ಸೇವಿಸಲು ಅನುಮತಿಸಲಾಗಿತ್ತು. ಆದರೆ ಫಿಫಾ ನವೆಂಬರ್ 18 ರಂದು ಈ ನಿರ್ಧಾರವನ್ನು ರದ್ದುಗೊಳಿಸಿದೆ.
ಫಿಫಾ ಫುಟ್ಬಾಲ್ ವಿಶ್ವಕಪ್ ಗಾಗಿ ನೀವು ಕತಾರ್ ದೇಶಕ್ಕೆ ಪ್ರಯಾಣ ಮಾಡುವ ಯೋಜನೆಯಿದ್ದರೆ ನಿಮ್ಮ ಬ್ಯಾಗ್ ನಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದ ಧರ್ಮ ಗ್ರಂಥ ಇಲ್ಲ ಎನ್ನುವುದನ್ನು ಮೊದಲು ಖಚಿತ ಪಡಿಸಿ. ಯಾಕೆಂದರೆ ಇದಕ್ಕೆ ನಿರ್ಬಂಧವಿದೆ.
ಇ-ಸಿಗರೇಟ್ ಗಳು ಮತ್ತು ವೇಪಸ್ ಗಳನ್ನೂ ನಿಷೇಧ ಮಾಡಲಾಗಿದೆ. ಅದರಲ್ಲೂ ಟೂರ್ನಮೆಂಟ್ ಸಮಯದಲ್ಲಿ ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿದೆ.