Advertisement

IPL: ಮುಂದಿನ ವರ್ಷ ಆರ್‌ಸಿಬಿಯಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ; ಯಾರು ರಿಟೈನ್‌ ಯಾರು ಔಟ್?‌

03:28 PM Nov 25, 2023 | Team Udayavani |

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್‌ ನ ಮಿನಿ ಹರಾಜು ಮುಂದಿನ ತಿಂಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಂಡಗಳು ಆಟಗಾರರ ರಿಟೈನ್‌ ಹಾಗೂ ರಿಲೀಸ್‌ ಪ್ರಕ್ರಿಯೆಯನ್ನು ಆರಂಭಿಸಿದೆ.

Advertisement

ಭಾನುವಾರ(ನ.26 ರಂದು) ಟ್ರೇಡ್‌ ವಿಂಡೋ ಕ್ಲೋಸ್‌ ಆಗಲಿದೆ. ಇತ್ತ ತಂಡಗಳಲ್ಲಿ ಉಳಿಯುವ ಹಾಗೂ ತಂಡದಿಂದ ಕೈಬಿಡುವ ಆಟಗಾರರ ಬಗ್ಗೆ ಕುತೂಹಲ ಹೆಚ್ಚಿದೆ.

ಐಪಿಎಲ್‌ ನಲ್ಲಿ ಅತೀ ಹೆಚ್ಚು ಫ್ಯಾನ್‌ ಬೇಸ್‌ ಇರುವ ತಂಡಗಳಲ್ಲಿ ಆರ್‌ ಸಿಬಿ ಕೂಡ ಒಂದು. ಆರ್‌ ಸಿಬಿಯಲ್ಲಿ ಈ ಬಾರಿ ಉಳಿಯುವ ಹಾಗೂ ರಿಲೀಸ್‌ ಆಗುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ.

ಬ್ಯಾಟಿಂಗ್‌ ತ್ರಿಮೂರ್ತಿಗಳು ತಂಡದಲ್ಲೇ ಉಳಿಯುವ ಸಾಧ್ಯತೆ: ಆರ್‌ ಸಿಬಿ ತಂಡ ಬ್ಯಾಟಿಂಗ್‌ ನಲ್ಲೇ ಹೆಚ್ಚು ವಿಶ್ವಾಸವನ್ನಿಟ್ಟಿರುವ ತಂಡ. ಅದರಲ್ಲೂ ಆರಂಭಿಕ ಮೂವರ ಮೇಲೆಯೇ ತಂಡ ಹೆಚ್ಚು ಆಧಾರವಾಗಿ ನಿಲ್ಲುತ್ತದೆ.

ವಿರಾಟ್‌ ಕೊಹ್ಲಿ, ಕಪ್ತಾನ ಫಾಪ್‌ ಡುಪ್ಲೆಸಿ ಹಾಗೂ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಅವರನ್ನು ರಿಟೈನ್‌ ಮಾಡುವ ಸಾಧ್ಯತೆಯಿದೆ. ಇದರ ಜೊತೆ ಮಧ್ಯಮ ಕ್ರಮಾಂಕದ ಮೈಕೆಲ್ ಬ್ರೇಸ್‌ವೆಲ್, ಮಹಿಪಾಲ್ ಲೊಮ್ರೋರ್, ಸುಯೇಶ್ ಪ್ರಭುದೇಸಾಯಿ ಅವರನ್ನು ಬಹುಶಃ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.

Advertisement

ಇದರರೊಂದಿಗೆ ಬೌಲಿಂಗ್‌ ನತ್ತ ಗಮನ ಹರಿಸಿದರೆ, ಪ್ರಮುಖ ವೇಗಿಗಳಾದ ಸಿರಾಜ್‌, ಹ್ಯಾಜಲ್‌ ವುಡ್‌ , ವಿಜಯಕುಮಾರ್ ವೈಶಾಕ್, ವೇಯ್ನ್ ಪಾರ್ನೆಲ್ ಅವರನು ಉಳಿಸಿಕೊಳ್ಳುವ ಸಾಧ್ಯತೆಯಿದೆ.

ರಿಲೀಸ್‌ ಮಾಡಬಹುದಾದ ಪ್ರಮುಖರು: ಇನ್ನು ಈ ಬಾರಿ ತಂಡದಿಂದ ಹೊರಗೆ ಅಂದರೆ ರಿಲೀಸ್‌ ಮಾಡುವ ಆಟಗಾರರ ಪಟ್ಟಿಯಲ್ಲಿ ಪ್ರಮುಖರ ಹೆಸರುಗಳು ಕೇಳಿಬಂದಿದೆ. ಕಳೆದ ಬಾರಿ ತನ್ನ ಬ್ಯಾಟಿಂಗ್‌ ನಿಂದ ಅಷ್ಟಾಗಿ ಸಿಡಿಯದ ದಿನೇಶ್‌ ಕಾರ್ತಿಕ್‌ ಅವರನ್ನು ರಿಲೀಸ್‌ ಮಾಡುವ ಸಾಧ್ಯತೆಯಿದೆ. 2021 ರಿಂದ ತಂಡದಲ್ಲಿದ್ದು ಅವಕಾಶ ಪಡೆದಿರುವ ಫಿನ್ ಅಲೆನ್ ಅವರನ್ನು ರಿಲೀಸ್‌ ಮಾಡುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಅಷ್ಟಾಗಿ ಬ್ಯಾಟಿಂಗ್‌ ನಲ್ಲಿ ಸಾಥ್‌ ನೀಡದ ಅನುಜ್ ರಾವತ್ ಅವರು ಕೂಡ ರಿಲೀಸ್‌ ಹಾದಿಯಲ್ಲಿದ್ದಾರೆ.

ಇತ್ತೀಚೆಗೆ ಪ್ರದರ್ಶನದಲ್ಲಿ ಅಷ್ಟಾಗಿ ಗಮನ ಸೆಳೆಯದಿರುವ ಹರ್ಷಲ್‌ ಪಟೇಲ್‌, ವನಿಂದು ಹಸರಂಗ, ಸಿದ್ದಾರ್ಥ್ ಕೌಲ್, ರೀಸ್ ಟೋಪ್ಲಿ, ಕೇದಾರ್ ಜಾಧವ್, ಹಿಮಾಂಶು ಶರ್ಮಾ ಅವರನ್ನು ತಂಡದಿಂದ ರಿಲೀಸ್‌ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಅಧಿಕೃತ ಪಟ್ಟಿ ಇನ್ನಷ್ಟೇ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next