Advertisement

ದೇಶದಲ್ಲಿ ಸಂಭವಿಸಿರುವ ವಿಮಾನ ದುರಂತಗಳ ಪಟ್ಟಿ

12:41 AM Aug 08, 2020 | Hari Prasad |

ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬಾಯಿಯಿಂದ ಪ್ರಯಾಣಿಕರನ್ನು ಹೊತ್ತು ಕೇರಳದ ಕಲ್ಲಿಕೋಟೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳುತ್ತಿದ್ದ ಏರ್ ಇಂಡಿಯಾ ವಿಮಾನ ಇಲ್ಲಿನ ಟೇಬಲ್ ಟಾಪ್ ರನ್ ವೇನಿಂದ ಜಾರಿ ಸಂಭವಿಸಿದ ದುರಂತದಲ್ಲಿ ಪೈಲಟ್ ಹಾಗೂ ಸಹ ಪೈಲಟ್ ಸಹಿತ ಕನಿಷ್ಟ 16 ಜನ ಸಾವನ್ನಪ್ಪಿದ್ದಾರೆ.

Advertisement

ಈ ಹಿನ್ನಲೆಯಲ್ಲಿ ದೇಶದಲ್ಲಿ ಹಿಂದೆ ನಡೆದಿರುವ ವಿಮಾನ ದುರಂತಗಳ ಕುರಿತಾಗಿ ನೋಡುವುದಾದರೆ ಅವುಗಳ ಪಟ್ಟಿ ಇಲ್ಲಿದೆ.

1966 ಫೆ.7 ಬನಿಹಲ್‌ ಪಾಸ್‌ ಜಮ್ಮು ಮತ್ತು ಕಾಶ್ಮೀರದಲ್ಲಿ ಫಾಕ್ಕರ್‌ ಫ್ರೆಂಡ್‌ಶಿಪ್‌ ಅಪಘಾತ;  37 ಸಾವು

1970 ಆ.29 ಸಿಲೂcರ್‌, ಅಸ್ಸಾಂನಲ್ಲಿ ವಿಮಾನಾಪಘಾತ; 39 ಸಾವು

1971 ಮಾ.26 ದಿಲ್ಲಿಯಲ್ಲಿ ಡಕೋಟಾ ವಿಮಾನಾಪಘಾತ; 15 ಮಂದಿ ಸಾವು

Advertisement

1972, ಆ.11 ಪಾಲಂನಲ್ಲಿ ಫಾಕ್ಕರ್‌ ಫ್ರೆಂಡ್‌ಶಿಪ್‌ ಅಪಘಾತ; 18 ಸಾವು

1973 ಮೇ.31 ದಿಲ್ಲಿಯಲ್ಲಿ ಬೋಯಿಂಗ್‌ ಪತನ; 48 ಸಾವು

1976 ಅ.12 ಮುಂಬಯಿಯಲ್ಲಿ ವಿಮಾನ ಪತನ; 95 ಮಂದಿ ಸಾವು

1978 ಆ.4 ಪುಣೆಯಲ್ಲಿ ಆವ್ರೋ 748 ಪತನ; 45 ಸಾವು

1978 ನ/ಡಿ ನವೆಂಬರ್‌ನಲ್ಲಿ ಲೇಹ್‌ನಲ್ಲಿ ಎಎನ್‌ 42 ಪತನ; 77 ಸಾವು, ಡಿಸೆಂಬರ್‌ನಲ್ಲಿ ಹೈದ್ರಾಬಾದ್‌ನಲ್ಲಿ ಬೋಯಿಂಗ್‌ 737 ಪತನ; 3 ಮಂದಿ ಸಾವು

1988 ಅ.19 ಅಹ್ಮದಾಬಾದ್‌ನಲ್ಲಿ ಏರ್‌ ಇಂಡಿಯಾ 737 ಬೋಯಿಂಗ್‌ ಪತನ 131 ಸಾವು

1990 ಫೆ.14 ಬೆಂಗಳೂರು ವಿ.ನಿಲ್ದಾಣದಲ್ಲಿ ಏರ್‌ಬಸ್‌ 320 ಪತನ; 92 ಮಂದಿ ಸಾವು

1991 ಮಾ.25 ಯಲಹಂಕದಲ್ಲಿ ಆವ್ರೋ ಎಚ್‌ಎಸ್‌ 748 ವಾಯುಪಡೆ ವಿಮಾನ ಪತನ; 25 ಮಂದಿ ಸಾವು

1991 ಆ.16 ಇಂಫಾಲಾದಲ್ಲಿ ಬೋಯಿಂಗ್‌ 737 ಪತನ ; 69 ಮಂದಿ ಸಾವು

1993 ಎ.26 ಔರಂಗಾಬಾದ್‌ನಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ಬೋಯಿಂಗ್‌ 737 ಪತನ; 56 ಮಂದಿ ಸಾವು

1996 ನ.12 ದಿಲ್ಲಿಯಿಂದ 60 ಕಿ.ಮೀ. ದೂರದಲ್ಲಿ ವಿಮಾನಗಳ ಡಿಕ್ಕಿ: ಸೌದಿ ಬಿ747 ಮತ್ತು ಕಝಕ್‌ ಐಎಲ್‌ 76 ಢಿಕ್ಕಿ ಎಲ್ಲ 365 ಮಂದಿ ಸಾವು.

1998, ಜು.30 ಕೊಚ್ಚಿಯಲ್ಲಿ ಡ್ರೋನಿಯರ್‌ ವಿಮಾನ ಪತನ; 6 ಮಂದಿ ಸಾವು

1999 ಮಾ.5 ಚೆನ್ನೈ ನಿಲ್ದಾಣದಲ್ಲಿ ಕಾರ್ಗೋ ವಿಮಾನ ಏರ್‌ ಫ್ರಾನ್ಸ್‌ನ ಬೋಯಿಂಗ್‌ 747ಗೆ ಬೆಂಕಿ

1999 ಮಾ.7 ಪೋಖರಣ್‌ನಲ್ಲಿ ವಾಯುಪಡೆ ಪ್ರದರ್ಶನದಿಂದ ಬರುತ್ತಿದ್ದ ವೇಳೆ ಆ್ಯಂಟನೋವ್‌ 32 ವಿಮಾನ ದಿಲ್ಲಿಯಲ್ಲಿ ಪತನ; 21 ಸಾವು

2000 ಜು.17 ಪಾಟ್ನಾ ನಿಲ್ದಾಣದಲ್ಲಿ ಅಲಯನ್ಸ್‌ ಏರ್‌ ಬೋಯಿಂಗ್‌ 737 ಪತನ; 60 ಮಂದಿ ಸಾವು

2002, ಅ.1 ಗೋವಾದ ಸನಿಹ ಎರಡು ನೌಕಾ ಪಡೆ ವಿಮಾನಗಳ ಢಿಕ್ಕಿ; 17 ಮಂದಿ ಸಾವು

2010 ಮೇ.22 ಮಂಗಳೂರಿನಲ್ಲಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಬೋಯಿಂಗ್‌ 737 ಪತನ; 152 ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next