Advertisement

ಜೈಸ್ವಾಲ್ To ಹಜರತುಲ್ಲಾ ಝಜೈ: T20 ಕ್ರಿಕೆಟ್ ನ ಅತೀ ವೇಗದ ಅರ್ಧಶತಕ ಬಾರಿಸಿದವರ ಪಟ್ಟಿ

12:32 PM May 12, 2023 | Team Udayavani |

ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಗುರುವಾರದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ಎದುರು ಕೆಕೆಆರ್ ಬೌಲರ್ ಗಳ ಆಟ ನಡೆಯಲಿಲ್ಲ.

Advertisement

ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ಇನ್ನಿಂಗ್ಸ್‌ ನ ಮೊದಲ ಓವರ್‌ ನಲ್ಲಿ ಎರಡು ಬಾರಿ 20 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಜೈಸ್ವಾಲ್ ಗುರುವಾರ ಕೆಕೆಆರ್ ನಾಯಕ ನಿತೀಶ್ ರಾಣಾ ಅವರ ಮೊದಲ ಓವರ್‌ನಲ್ಲಿ 26 ರನ್ ಗಳಿಸಿದರು ಮತ್ತು ಐಪಿಎಲ್ 2023 ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ರನ್ ಗಳಿಸಿದ್ದರು.

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 13 ಎಸೆತಗಳಲ್ಲಿ ಟಿ20 ಲೀಗ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದರು. ಈ ಹಿಂದೆ ಕೆಎಲ್ ರಾಹುಲ್ ಹೆಸರಲ್ಲಿದ್ದ 14 ಬಾಲ್ ಫಿಫ್ಟಿ ದಾಖಲೆ ಮುರಿಯಿತು.

ಯುವರಾಜ್ ಸಿಂಗ್ 2007ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅತಿ ವೇಗದ T20 ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿದ್ದರು. ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳು ಸೇರಿದ್ದವು. ಇದು ಅಂತಾರಾಷ್ಟ್ರೀಯ ಟಿ20ಯ ಅತೀ ವೇಗದ ಅರ್ಧಶತಕವಾಗಿದೆ.

ಇದನ್ನೂ ಓದಿ:ಟ್ವಿಟ್ಟರ್‌ಗೆ ಹೊಸ ಸಿಇಒ ನೇಮಿಸಿದ ಎಲಾನ್‌ ಮಸ್ಕ್‌

Advertisement

ಕ್ರಿಸ್ ಗೇಲ್ ಅವರು ಬಿಗ್ ಬ್ಯಾಷ್ ಲೀಗ್ 2016 ರಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಮೆಲ್ಬೋರ್ನ್ ರೆನೆಗೇಡ್ಸ್ ಪರ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಸುನಿಲ್ ನರೈನ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ 2022 ರಲ್ಲಿ ಚ್ಯಾಟ್ ವಿಕ್ಟೋಗ್ರಾರಿಯನ್ಸ್ ವಿರುದ್ಧ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಅಫ್ಘಾನಿಸ್ತಾನ ಬ್ಯಾಟರ್ ಹಜರತುಲ್ಲಾ ಝಜೈ ಅವರು 2018 ರಲ್ಲಿ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್‌ ನಲ್ಲಿ ಬಾಲ್ಖ್ ಲೆಜೆಂಡ್ಸ್ ವಿರುದ್ಧ ಕಾಬೂಲ್ ಜ್ವಾನನ್ ಪರ ಆಡುವಾಗ 12 ಎಸೆತಗಳಲ್ಲಿ ಅರ್ಧಶತಕವನ್ನು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next