Advertisement

ಕೋವಿಡ್-19 ಕಳವಳ: ದೇಶದಲ್ಲಿ ರದ್ದಾದ ಪರೀಕ್ಷೆಗಳೆಷ್ಟು? ಎಸ್ ಎಸ್ ಎಲ್ ಸಿ ಪರೀಕ್ಷೆ ಯಾವಾಗ?

10:04 AM Mar 22, 2020 | keerthan |

ಹೊಸದಿಲ್ಲಿ: ಚೀನಾದ ವುಹಾನ್ ಪಟ್ಟಣದಲ್ಲಿ ಆರಂಭವಾದ ಕೋವಿಡ್-19 ಸೋಂಕು ಭಾರತದಲ್ಲಿ ಕಾಲಿಡುತ್ತಿದ್ದಂತೆ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನರು ಗುಂಪಾಗಿ ಸೇರುವುದನ್ನೂ ನಿಷೇಧಿಸಲಾಗಿದೆ. ಇದರಂತೆ ಹಲವು ಪರೀಕ್ಷೆಗಳನ್ನೂ ಮುಂದೂಡಲಾಗಿದೆ.

Advertisement

ಕೋವಿಡ್-19 ವೈರಸ್ ಭೀತಿಯಿಂದಾಗಿ ದೇಶದಲ್ಲಿ ಹಲವಾರು ಪರೀಕ್ಷೆಗಳು ಮುಂದೂಡಲ್ಪಟ್ಟಿದೆ. ಅವುಗಳ ವಿವರ ಇಲ್ಲಿದೆ.

1.ಸಿಬಿಎಸ್ ಇ ಬೋರ್ಡ್ ಪರೀಕ್ಷೆ
ಮಾರ್ಚ್ 19ರಿಂದ 31ರವರೆಗೆ ನಡೆಯಬೇಕಿದ್ದ 10 ಮತ್ತು 12ನೇತರಗತಿಯ ಸಿಬಿಎಸ್ ಇ ಪರೀಕ್ಷೆಗಳು ಕೋವಿಡ್ 19 ಕಾರಣದಿಂದ ಮುಂದೂಡಲ್ಪಟ್ಟಿದೆ. ದಿಲ್ಲಿ ಗಲಭೆಯ ಕಾರಣಕ್ಕೆ ಮಾರ್ಚ್ 31ಕ್ಕೆ ಮುಂದೂಡಲ್ಪಟ್ಟಿದ್ದ ಪರೀಕ್ಷೆಗಳನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ.

2.ಐಸಿಎಸ್ ಇ ಮತ್ತು ಐಎಸ್ ಸಿ ಬೋರ್ಡ್ ಪರೀಕ್ಷೆಗಳು
ಕೌನ್ಸಿಲ್ ಆಫ್ ಇಂಡಿಯನ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ ನ 10 ತರಗತಿ ಮತ್ತು ಐಎಸ್ ಸಿ ಬೋರ್ಡ್ ಪರೀಕ್ಷೇಗಳನ್ನು ಮುಂದೂಡಲಾಗಿದೆ. ಮಾರ್ಚ್ 19ರಿಂದ 31ರವರೆಗೆ ಈ ಪರೀಕ್ಷೆಗಳು ನಡೆಯಬೇಕಿತ್ತು. ಪರಿಷ್ಕೃತ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

3.ಗೋವಾ, ಉತ್ತರ ಪ್ರದೇಶ ಮತ್ತು ಕೇರಳ ರಾಜ್ಯಗಳ ಎಲ್ಲಾ ಪರೀಕ್ಷೆಗಳು
ಕೋವಿಡ್ 19 ಭಯ ಜಾಸ್ತಿಯಿರುವ ಈ ಮೂರು ರಾಜ್ಯಗಳಲ್ಲಿ ಎಲ್ಲಾ ತರಗತಿ ಮಕ್ಕಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉತ್ತರ ಪ್ರದೇಶದಲ್ಲಿ ಎಪ್ರಿಲ್ 2ರವರಗೆ ಶಾಲೆಗಳನ್ನು ಮುಚ್ಚಲಾಗಿದೆ ಗೋವಾದಲ್ಲಿ ಎಂಟನೇ ತರಗತಿಯವರೆಗೆ ಪರೀಕ್ಷೆಗಳನ್ನು ರದ್ದು ಮಾಡಿದ್ದು, ಮುಂದಿನ ತರಗತಿಗೆ ಉತ್ತೀರ್ಣರನ್ನಾಗಿಸಿದೆ. ಕೇರಳದಲ್ಲೂ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದ್ದು, ಮುಂದಿನ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

Advertisement

4 ಮಹಾರಾಷ್ಟ್ರದಲ್ಲಿ 8ನೇ ತರಗತಿಯವರೆಗೆ
ಮಹಾರಾಷ್ಟ್ರದಲ್ಲಿ ಎಂಟನೇ ತರಗತಿಯವರೆಗೆ ಪರೀಕ್ಷೆಗಳನ್ನು ರದ್ದು ಮಾಡಿದ್ದು, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣರನ್ನಾಗಿಸಿದೆ ಉಳಿದಂತೆ 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಎಪ್ರಿಲ್ 10ರ ನಂತರ ನಡೆಸಲು ತೀರ್ಮಾನಿಸಿದೆ. 10 ನೇ ತರಗತಿಯ ಎರಡು ಪರೀಕ್ಷೆಗಳು ಬಾಕಿಯಿದ್ದು ಮಾರ್ಚ್ 23ರಂದು ಅಂತ್ಯವಾಗಲಿದೆ.

5.ತೆಲಂಗಾಣದ ಬೋರ್ಡ್ ಪರೀಕ್ಷೆಗಳು
ತೆಲಂಗಾಣದ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಾರ್ಚ್ 19ರಂದು ಈ ಬೋರ್ಡ್ ಪರೀಕ್ಷೆಗಳು ಆರಂಭವಾಗಬೇಕಿತ್ತು.

6.ಜೆಇಇ ಮೈನ್
ಎಪ್ರಿಲ್ 5ರಿಂದ 11ರವರೆಗೆ ನಡೆಯಬೇಕಿದ್ದ ಜೆಇಇ ಮೈನ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜೆಇಇ ಮೈನ್ ಪರೀಕ್ಷೆಯ ಮುಂದಿನ ದಿನಾಂಕವನ್ನು ಅಭ್ಯರ್ಥಿಗಳ ಇಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯ ಮೂಲಕ ತಿಳಿಸಲಾಗುವುದು.

7.ಯುಪಿಎಸ್ ಸಿ ನಾಗರಿಕ ಸೇವಾ ಪರ್ಸನಾಲಿಟಿ ಟೆಸ್ಟ್
ಕೇಂದ್ರ ಸಾರ್ವಜನಿಕ ಸೇವಾ ಆಯೋಗ ನಡೆಸುವ ವ್ಯಕ್ತಿವ ಪರೀಕ್ಷೆ ಸಂದರ್ಶನವನ್ನು ಮುಂದೂಡಲಾಗಿದೆ. ಈ ಮೊದಲು ಮಾರ್ಚ್ 23ರಂದು ಈ ಪರೀಕ್ಷೆ ನಿಗದಿಯಾಗಿದ್ದು, ಮುಂದಿನ ದಿನಾಂಕ ಇನ್ನೂ ಖಚಿತವಾಗಿಲ್ಲ.

8.ಕೇರಳ ಸಾರ್ವಜನಿಕ ಸೇವಾ ಪರೀಕ್ಷೆ
ಎಪ್ರಿಲ್ 14ರವರೆಗೆ ನಿಗದಿಯಾಗಿದ್ದ ಕೇರಳ ಸಾರ್ವಜನಿಕ ಸೇವಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.  ಸಂದರ್ಶನದ ಹೊಸ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ಕರ್ನಾಟಕ ರಾಜ್ಯದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮುಂದೂಡಿಕೆಯಾಗಿಲ್ಲ. ಈ ಮೊದಲು ನಿಗದಿಯಾದಂತೆ ಮಾರ್ಚ್ 27ರಂದೇ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next