Advertisement

ಐಪಿಎಲ್ ಕಮೆಂಟರಿ ಪ್ಯಾನೆಲ್ ಸೇರಿದ ಸುರೇಶ್ ರೈನಾ: ಕಮ್ ಬ್ಯಾಕ್ ಮಾಡಿದ ರವಿ ಶಾಸ್ತ್ರಿ

05:14 PM Mar 24, 2022 | Team Udayavani |

ಮುಂಬೈ: ಇದೇ ವಾರದ ಅಂತ್ಯದಲ್ಲಿ ಆರಂಭವಾಗಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದೆ. ಖ್ಯಾತ ಕಮೆಂಟೇಟರ್ ಗಳಾದ ಹರ್ಷ ಭೋಗ್ಲೆ ಮತ್ತು ಸುನೀಲ್ ಗಾವಸ್ಕರ್ ಅವರು ಇಂಗ್ಲೀಷ್ ಕಮೆಂಟರಿ ಮಾಡಲಿದ್ದಾರೆ.

Advertisement

ಮೆಗಾ ಹರಾಜಿನಲ್ಲಿ ಬಿಕರಿಯಾಗದ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಅವರು ಈ ಬಾರಿ ಕಮೆಂಟರಿ ಬಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಲ್ಲದೆ ಕಂಚಿನ ಕಂಠದ ಕಮೆಂಟೇಟರ್ ರವಿ ಶಾಸ್ತ್ರಿ ಕೂಡಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರಿಬ್ಬರೂ ಹಿಂದಿ ಕಮೆಂಟರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಮಾರ್ಕ್ ವುಡ್ ಬದಲಿಗೆ ಜಿಂಬಾಬ್ವೆ ವೇಗಿಯನ್ನು ಕರೆತಂದ ಕೆ.ಎಲ್.ರಾಹುಲ್ ಬಳಗ

ಕನ್ನಡ ಕಮೆಂಟರಿ ಪಟ್ಟಿಯೂ ಬಿಡುಗಡೆಯಾಗಿದ್ದು, ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್ ಮುಂತಾದವರ ಜೊತೆಗೆ ವನಿತಾ ಆಟಗಾರ್ತಿ ವೇದ ಕೃಷ್ಣಮೂರ್ತಿ ಭಾಗಿಯಾಗಲಿದ್ದಾರೆ.

ಇಂಗ್ಲೀಷ್ ಕಮೆಂಟೇಟರ್ಸ್ ಪಟ್ಟಿ: ಹರ್ಷ ಭೋಗ್ಲೆ, ಸುನೀಲ್ ಗಾವಸ್ಕರ್, ಲಕ್ಷ್ಮಣ್ ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್, ದೀಪ್ ದಾಸ್ ಗುಪ್ತ, ಅಂಜುಮ್ ಚೋಪ್ರಾ, ಇಯಾನ್ ಬಿಷಪ್, ಅಲನ್ ವಿಲ್ಕಿನ್ಸ್, ಪೊಮ್ಮಿ ಎಂಬಾಂಗ್ವಾ, ನಿಕ್ ನೈಟ್, ಡ್ಯಾನಿ ಮಾರಿಸನ್, ಸೈಮನ್ ಡೌಲ್, ಮ್ಯಾಥ್ಯೂ ಹೇಡನ್ ಮತ್ತು ಕೆವಿನ್ ಪೀಟರ್ಸನ್.

Advertisement

ಹಿಂದಿ ಕಮೆಂಟೇಟರ್ಸ್ ಪಟ್ಟಿ: ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್, ಗೌತಮ್ ಗಂಭೀರ್, ಪಾರ್ಥಿವ್ ಪಟೇಲ್, ನಿಖಿಲ್ ಚೋಪ್ರಾ, ತಾನ್ಯಾ ಪುರೋಹಿತ್, ಕಿರಣ್ ಮೋರೆ, ಜತಿನ್ ಸಪ್ರು, ಸುರೇನ್ ಸುಂದರಂ, ರವಿಶಾಸ್ತ್ರಿ, ಸುರೇಶ್ ರೈನಾ.

ಕನ್ನಡ ಕಮೆಂಟೇಟರ್ಸ್ ಪಟ್ಟಿ: ಮಧು ಮೈಲಂಕೋಡಿ, ಕಿರಣ್ ಶ್ರೀನಿವಾಸ್, ಶ್ರೀನಿವಾಸ ಮೂರ್ತಿ ಪಿ, ವಿಜಯ್ ಭಾರದ್ವಾಜ್, ಭರತ್ ಚಿಪ್ಲಿ, ಜಿ ಕೆ ಅನಿಲ್ ಕುಮಾರ್, ವೆಂಕಟೇಶ್ ಪ್ರಸಾದ್, ವೇದಾ ಕೃಷ್ಣಮೂರ್ತಿ, ಸುಮೇಶ್ ಗೋಣಿ, ಮತ್ತು ವಿನಯ್ ಕುಮಾರ್ ಆರ್.

Advertisement

Udayavani is now on Telegram. Click here to join our channel and stay updated with the latest news.

Next