Advertisement
ಡಿಸೆಂಬರ್ 20ರ ಅನಂತರ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಕ್ರಿಸ್ಮಸ್ ರಜೆ ಸಹಿತ ಡಿ. 31 ರಾತ್ರಿಯ ಮೋಜಿನ ಕೂಟವನ್ನು ಸಂಭ್ರಮದಿಂದ ಆಚರಿಸಿದ್ದರು. ವರ್ಷಾಂತ್ಯದಲ್ಲಿ ಮದ್ಯ ಮಾರಾಟ ಪ್ರಮಾಣ ಗಣನೀಯ ಏರಿಕೆ ಕಂಡಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ 1,45,358 ಬಾಕ್ಸ್ ಮದ್ಯ ಮಾರಾಟವಾಗಿದ್ದು, 1,58,658 ಬಾಕ್ಸ್ ಬಿಯರ್ ಸೇರಿದಂತೆ ಒಟ್ಟು 3.4 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ.
ವರ್ಷಾಂತ್ಯ ಹಿನ್ನೆಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆ ತಡೆಗಟ್ಟುವ ಸಲುವಾಗಿ ಬೈಂದೂರು ಶಿರೂರು ಟೋಲ್‌ಗೇಟ್‌ನಲ್ಲಿ ವಾಹನ ತಪಾಸಣೆ ನಡೆಸಿದಾಗ ಗೂಡ್ಸ್ ವಾಹನದಲ್ಲಿ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 24 ಲೀ. ಮದ್ಯ ಪತ್ತೆಯಾಗಿದೆ. 750 ಎಂಎಲ್‌ನ 32 ಮದ್ಯದ ಬಾಟಲಿಯನ್ನು ಗಸ್ತಿನಲ್ಲಿದ್ದ ಅಬಕಾರಿ ತಂಡ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
Related Articles
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಡಿಸೆಂಬರ್ ತಿಂಗಳಲ್ಲಿ ಮದ್ಯಮಾರಾಟ ಕುಸಿತ ಕಂಡಿದೆ. 2022ರ ಡಿಸೆಂಬರ್ ತಿಂಗಳಿಗೆ ಹೋಲಿಕೆ ಮಾಡಿದರೆ 9,857 (ಶೇ.4) ಬಾಕ್ಸ್ ಮದ್ಯ ಕಡಿಮೆ ಮಾರಾಟವಾಗಿದೆ ಎಂದು ಅಬಕಾರಿ ಇಲಾಖಾ ಅಂಕಿ ಅಂಶ ತಿಳಿಸಿದೆ. ಇದೇ ವೇಳೆ ಬಿಯರ್ ಮಾರಾಟದಲ್ಲಿ ಶೇ.12.7ರಷ್ಟು ಹೆಚ್ಚಳವಾಗಿದ್ದು, 2,58,663 ಬಾಕ್ಸ್ ಮಾರಾಟವಾಗಿದೆ.
Advertisement
2022ರ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ಒಟ್ಟು 2,50,891 ಬಾಕ್ಸ್ ಮದ್ಯ ಮಾರಾಟವಾಗಿತ್ತು. ಈ ಬಾರಿ 2,41,034 ಬಾಕ್ಸ್ ಮಾತ್ರ ಮಾರಾಟವಾಗಿದೆ, ಇದರ ಪ್ರಮಾಣ 84,770 ಲೀ. ಹೊಸ ವರ್ಷದ ಪಾರ್ಟಿಗಳಿಗೆ ಕಡ್ಡಾಯ ನಿಯಮಾವಳಿ, ಕೆಲವೊಂದು ವರ್ಗದ ಕಾರ್ಮಿಕರು ವಲಸೆಗೆ ಹೋಗಿರುವುದು, ಮದ್ಯದ ಬೆಲೆ ಏರಿಕೆ ಮೊದಲಾದವುಗಳು ಮಾರಾಟ ಕಡಿಮೆಯಾಗಲು ಕಾರಣವಾಗಿದೆ ಎಂದು ಅಬಕಾರಿ ಇಲಾಖೆ ಡಿಸಿ ಟಿ.ಎಂ. ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ.