ಕುದೂರು: ತಾಲೂಕಿನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಮದ್ಯ ಪ್ರಿಯರ ಜೇಬಿಗೆ ನಿತ್ಯ ಕತ್ತರಿ ಬೀಳುತ್ತಿದೆ. ಅಬಕಾರಿ ಅಧಿಕಾರಿಗಳು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಕ್ಕೆ ಹಾಕಿದ್ದು, ಧಿಕಾರಿಗಳಿಗೆ ಕಮಿಷನ್ ಹೋಗುತ್ತಿದೇಯಾ? ಎಂಬ ಪ್ರಶ್ನೆಗಳು ಮೂಡಿವೆ. ಬಾರ್‌ಗಳಲ್ಲಿ ಎಂಆರ್‌ಪಿ ದರಕ್ಕಿಂತ 30 ರಿಂದ 40 ರೂ. ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿದ್ದಾರೆ.
ವೈನ್‌ಶಾಪ್‌ಗ್ಳಲ್ಲಿ ಎಂಆರ್‌ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂಬ ಕಾನೂನಿದೆ. ಆದರೆ ಇಲ್ಲಿರುವ ಬಾರ್‌ಗಳ ಮಾಲಿಕರು ನಿಯಮ ಗಳನ್ನು ಗಾಳಿಗೆ ತೂರಿದ್ದಾರೆ. ಅಬಕಾರಿ ಅಧಿಕಾರಿಗಳೊಂದಿಗೆ ಹೊಂದಾ ಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರತಿ ಮದ್ಯದ ಬಾಟಲಿಗೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ.
ವೈನ್ ಶಾಪ್‌ಗ್ಳಲ್ಲಿ ಸಿಗುವ ಪ್ರತಿ ಬ್ರಾಂಡ್‌ನ ಮದ್ಯ ಬಾಟಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡ ಲಾಗುತ್ತಿದೆ. ಎಂಆರ್‌ಪಿ ಬೆಲೆಗೆ ಕೂಡಿ ಎಂದು ಕೇಳಿದರೆ, ಎಂಆರ್‌ಪಿ ದರಕ್ಕೆ ಕೊಡುವುದಿಲ್ಲ. ಬೇಕಿದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಬಿಡಿ ಎಂದು ಅಂಗಡಿ ಯವರು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ ದಿಂದಾಗಿ ಮದ್ಯ ಮಾರಾಟಗಾರರು ಕಾನೂನು ಗಾಳಿಗೆ ತೂರಿದ್ದಾರೆ. ಮದ್ಯವನ್ನು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ಹಾಗೆ ಮಾಡಿದರೆ ಅಂತಹ ಮದ್ಯದಂಗಡಿ ಮಾಲಿಕರ ವಿರುದಟಛಿ ಕಾನೂನು ಕ್ರಮಕೈಗೊಳ್ಳಬಹುದು. ಆದರೆ ಮದ್ಯದಂಗಡಿಗಳ ಮಾಲಿಕರು ಬಿಲ್ ನೀಡುತ್ತಿಲ್ಲ.
ದರಪಟ್ಟಿಯಿಲ್ಲ, ಬಿಲ್‌ಇಲ್ಲ: ಮದ್ಯದ ಅಂಗಡಿಗಳಲ್ಲಿ ಎಂ ಆರ್‌ಪಿ ದರದ ಫಲಕ ಹಾಕುವಂತೆ ಸೂಚಿಸಿದರೂ ನಿಯಮ ಪಾಲಿಸುತ್ತಿಲ್ಲ. ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ, ಬಿಲ್ ತನ್ನಿ. ನಾವು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಮದ್ಯದ ಅಂಗಡಿಗಲ್ಲಿ ಮದ್ಯ ಖರೀದಿಯ ಬಿಲ್ ನೀಡುತ್ತಿಲ್ಲ ಎಂದು ಗ್ರಾಹಕರ ಅಸಮಾಧಾನವಾಗಿದೆ.