Advertisement

ಸರಕಾರಿ ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ ಅಧಿಕ ದರಕ್ಕೆ ಮದ್ಯ ಮಾರಾಟ!

03:09 PM May 05, 2020 | keerthan |

ಗಂಗಾವತಿ: ನಗರದ ಎಂಎಸ್ಐಎಲ್ ಸರಕಾರಿ ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ ಎಂದು‌ ಮದ್ಯ ಖರೀದಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

120 ಎಂಎಲ್ ವಿಸ್ಕಿ ಮದ್ಯಕ್ಕೆ ಎಂಆರ್ ಪಿ ದರ 74 ರೂ.ಇದ್ದರೆ ಸರಕಾರಿ ಮದ್ಯದಂಗಡಿಯಲ್ಲಿ 120 ರೂ.ದರಕ್ಕೆ ಮಾರಾಟವಾಗುತ್ತಿದೆ. ಇದನ್ನು ಪ್ರಶ್ನಿಸುವ ಕೆಲ ಗ್ರಾಹಕರನ್ನು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಅಬಕಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಗದ್ದಲ ಮಾಡದಂತೆ ವಾಪಸ್ ಕಳಿಸುತ್ತಿದ್ದಾರೆ.

ಇನ್ನೂ ಖಾಸಗಿ ಬಾರ್ ಗಳಲ್ಲಿ ಸ್ಟಾಕ್ ಖಾಲಿ ಆಗಿದ್ದರೂ ಜನರು ಮಾತ್ರ ಬಿಸಿನಲ್ಲಿ ಕ್ಯೂ ನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಹೆಚ್ಚಿನ ದರ ಪಡೆಯಬಹುದು: ಸರಕಾರ ಮದ್ಯದ ದರ ಹೆಚ್ಚು ಮಾಡಿದ್ದು ಇನ್ನೂ ಆದೇಶ ಹೊರಬಿದ್ದಿಲ್ಲ ಸರಕಾರಿ ಮದ್ಯದಂಗಡಿಯಲ್ಲಿ ಮದ್ಯಕ್ಕೆ ಹೆಚ್ಚಿನ ದರ ಪಡೆದರೆ ತಪ್ಪಿಲ್ಲ ಖಾಸಗಿ ಬಾರ್ ಗಳಲ್ಲಿ ಹೆಚ್ಚಿನ ದರ ಪಡೆದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು‌ ಅಬಕಾರಿ ಇನ್ಸಪೆಕ್ಟರ್ ಅಜಯಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next