Advertisement
ಇದನ್ನೂ ಓದಿ:ಹತ್ತು ಸಾವಿರ ಕಾರುಗಳು ಬಂದರೆ ಆಕಾಶದಲ್ಲೇ ನಿಲ್ಲಿಸಬೇಕು!
Related Articles
Advertisement
ಮಂಗಳವಾರ ರಾತ್ರಿ ಕಾಸ್ಗಂಜ್ ಪ್ರದೇಶದಲ್ಲಿರುವ ಅಕ್ರಮ ಮದ್ಯ ತಯಾರಿಕಾ ಘಟದ ಮೇಲೆ ದಾಳಿ ನಡೆಸಿ, ವಾರಂಟ್ ಜಾರಿಗೊಳಿಸಲು ಪೊಲೀಸ್ ತಂಡ ತೆರಳಿತ್ತು. ಈ ಸಂದರ್ಭದಲ್ಲಿ ಕಳ್ಳಭಟ್ಟಿ ತಯಾರಿಕೆಯ ಗೂಂಡಾಗಳು ಪೊಲೀಸ್ ಕಾನ್ಸ್ ಟೇಲಬ್, ಎಸ್ ಐ ಮೇಲೆ ಹಲ್ಲೆ ನಡೆಸಿದ್ದರು. ಎಸ್ ಐ ಗಂಭೀರವಾಗಿ ಗಾಯಗೊಂಡಿದ್ದರು.
ಮೃತ ಕಾನ್ಸ್ ಟೇಬಲ್ ದೇವೇಂದ್ರ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಎಸ್ ಐ ಆಶೋಕ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರನ್ನು ಮತ್ತು ಎಸ್ ಐ ಅವರ ಬಟ್ಟೆ ಕಳಚಿ ದೊಣ್ಣೆ ಮತ್ತು ಆಯುಧದಿಂದ ಥಳಿಸಿರುವುದಾಗಿ ವರದಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೃತ ಪೊಲೀಸ್ ಕಾನ್ಸ್ ಟೇಬಲ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಎಸ್ ಐಗೆ ಸೂಕ್ತ ಚಿಕಿತ್ಸೆ ನೀಡಲು ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.